twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ವರ್ಷದ ವಿಶೇಷ: ಉದಯ ಕಾಮಿಡಿಯಲ್ಲಿ ಹೊಸ ಕಾರ್ಯಕ್ರಮಗಳು

    By Bharath Kumar
    |

    ಕಳೆದ ಒಂಭತ್ತು ವರ್ಷದಿಂದ ವಿಭಿನ್ನ ಹಾಸ್ಯ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಜನತೆಯನ್ನು ನಗಿಸುತ್ತಾ ಸಂತೋಷವಾಗಿಡುತ್ತಿರುವ 'ಉದಯ ಕಾಮಿಡಿ' ತಂಡ ಈ ಹೊಸ ವರ್ಷದಲ್ಲಿ ಮತ್ತಷ್ಟು ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ಮತ್ತಷ್ಟು ನಗೆಗಡಲಲ್ಲಿ ತೇಲಿಸಲು ಸನ್ನದ್ಧವಾಗಿದೆ.

    ಆಧುನಿಕ ಯುಗದಲ್ಲಿ ನಗರ ಭಾಗಗಳಲ್ಲಿ ಅವಿಭಕ್ತ ಕುಟುಂಬ ಎಂಬ ಪರಿಕಲ್ಪನೆ ಮಾಯವಾಗಿದೆ. ಕೇವಲ ನಾಲ್ಕು ಜನ ಇರುವ ಕುಟುಂಬವನ್ನು ತುಂಬು ಕುಟುಂಬ ಎನ್ನುವ ಪ್ರಮೇಯ ಉಂಟಾಗಿದೆ. ಆದರೆ ಈ ಕಾಲದಲ್ಲೂ ಕೆಲವರು ಅವಿಭಕ್ತ ಕುಟುಂಬದಲ್ಲಿ ನಂಬಿಕೆ ಇಟ್ಟಿದ್ದು ಎಲ್ಲರೂ ಒಟ್ಟಿಗೆ ಬದುಕುತ್ತಿದ್ದಾರೆ. ಸುಖೀ ಜೀವನ ಅನುಭವಿಸುತ್ತಿದ್ದಾರೆ. ಇಂತಹ ಕುಟುಂಬಗಳ ಜೊತೆ ಸಂಕ್ರಾಂತಿ ಹಬ್ಬವನ್ನ ಆಚರಿಸಲಾಗಿದೆ. ಮುಂದೆ ಓದಿ....

    ಸಂಕ್ರಾಂತಿ ಕಾಮಿಡಿ ಉತ್ಸವ

    ಸಂಕ್ರಾಂತಿ ಕಾಮಿಡಿ ಉತ್ಸವ

    ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮವನ್ನು ಮಾಧ್ಯಮದವರು ಯೋಜಿಸುವುದು ಸಾಮಾನ್ಯ. ಆದರೆ ಈ ಬಾರಿ ಹೊಸಕೋಟೆಯ ಕೆ.ಸತ್ಯಾವರ ಗ್ರಾಮಸ್ಥರು ಸ್ವಪ್ರೇರಣೆಯಿಂದ 'ಸಂಕ್ರಾಂತಿ ಕಾಮಿಡಿ ಉತ್ಸವ' ಎಂಬ ವಿಭಿನ್ನ ಕಾರ್ಯಕ್ರಮವನ್ನು ಉದಯ ವಾಹಿನಿ ನಿಮ್ಮ ಪ್ರಸ್ತುತ ಪಡಿಸುತ್ತಿದೆ.

    15ನೇ ರಂದು ಪ್ರಸಾರ

    15ನೇ ರಂದು ಪ್ರಸಾರ

    'ಉದಯ ಕಾಮಿಡಿ' ತಂಡದ ಹಾಸ್ಯ ಕಲಾವಿದರು ಕೆ.ಸತ್ಯಾವರ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ನಕ್ಕು ನಲಿದು ಮೋಜುಮಸ್ತಿ ಮಾಡಿದ್ದು ಕಾರ್ಯಕ್ರಮ ಸಾಕಷ್ಟು ವಿಭಿನ್ನವಾಗಿ ಮೂಡಿಬಂದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ಪ್ರಸಾರವಾಗಲಿರುವ 'ಸಂಕ್ರಾಂತಿ ಕಾಮಿಡಿ ಉತ್ಸವ' ಕಾರ್ಯಕ್ರಮವು ನೋಡುಗರನ್ನು ಕಂಡಿತ ನಗೆಗಡಲಲ್ಲಿ ತೇಲಿಸಿ ಭರಪೂರ ಮನರಂಜನೆ ನೀಡಲಿರುವುದು ನಿಜ.

    ಹ್ಯಾಪಿ ಫ್ಯಾಮಿಲಿ

    ಹ್ಯಾಪಿ ಫ್ಯಾಮಿಲಿ

    ಅವಿಭಕ್ತ ಸುಖೀ ಕುಟುಂಬಕ್ಕೆ ಭೇಟಿ ನೀಡಿ ಮನೆಮಂದಿಯ ಜತೆ ನಕ್ಕುನಲಿದು ಎಲ್ಲರಿಗೂ ವಿವಿಧ ಕ್ರೀಡೆಗಳನ್ನು ಆಡಿಸಿ ಮೋಜುಮಸ್ತಿ ಮಾಡಿ ತುಂಬು ಕುಟುಂಬದಲ್ಲಿರುವ ಖುಷಿಯನ್ನು ಜನರಿಗೆ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮ 'ಹ್ಯಾಪಿ ಫ್ಯಾಮಿಲಿ'. ಈ ಕಾರ್ಯಕ್ರಮ ಜನವರಿ 22 ರಿಂದ ಸಂಜೆ 7ಕ್ಕೆ ನಿಮ್ಮ ಉದಯ ಕಾಮಿಡಿಯಲ್ಲಿ ಪ್ರಸಾರವಾಗಲಿದೆ.

    ಹಳ್ಳಿ ಹಬ್ಬ

    ಹಳ್ಳಿ ಹಬ್ಬ

    ಉದಯ ಕಾಮಿಡಿ ತಂಡದ ಯಶಸ್ವಿ ಕಾರ್ಯಕ್ರಮಗಳಲ್ಲಿ 'ಹಳ್ಳಿಹಬ್ಬ' ಸಹ ಒಂದು. ಹಳ್ಳಿಯ ಸೊಗಡು ಹಾಗೂ ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಅದ್ದೂರಿಯಾಗಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಬಿಂಬಿಸುವುದರ ಜತೆಗೆ ಅಲ್ಲಿನ ಜನರನ್ನು ಮೋಜುಮಸ್ತಿನಲ್ಲಿ ತೊಡಗಿಸಿ ನಕ್ಕುನಲಿಸುವಲ್ಲೂ ಯಶಸ್ವಿಯಾಗಿತ್ತು. ಅಲ್ಲದೆ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜನಪ್ರಿಯ ಕಾರ್ಯಕ್ರಮವಾಗಿ ರಾಜ್ಯದ ಜನರ ಜನಮಾನಸದಲ್ಲೂ ಸ್ಥಾನ ಪಡೆಯಿತು.

    ಫುಲ್ ಮೋಜು-ಮಸ್ತಿ

    ಫುಲ್ ಮೋಜು-ಮಸ್ತಿ

    'ಹಳ್ಳಿಹಬ್ಬ' ಕಾರ್ಯಕ್ರಮ ಈವರೆಗೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಹಾಸನ ಜಿಲ್ಲೆಯ ಮಡೆನೂರು, ತುಮಕೂರು ಜಿಲ್ಲೆಯ ಬೆಳ್ಳಾವಿ ಹಾಗೂ ಅರೆಯೂರು, ಚಿತ್ರದುರ್ಗದ ಚಿಕ್ಕಗೊಂಡನಹಳ್ಳಿ, ಮಂಡ್ಯದ ಹೊನ್ನಾವರ, ಮೈಸೂರಿನ ಹೆಚ್‍ಡಿ ಕೋಟೆ, ಶಿವಮೊಗ್ಗದ ಶಂಕರಘಟ್ಟ, ಚಿಕ್ಕಮಗಳೂರಿನ ಕಡೂರು ಹಾಗೂ ಮಾಗಡಿಯ ತಿಪ್ಪಸಂದ್ರ ಗ್ರಾಮಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶವಿದೆ.

    English summary
    New programmes for Sankranti festival in udaya comedy channel. halli habba, happy family, and sankranthi comedy utsavam programme will aired on january 15th.
    Friday, January 5, 2018, 19:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X