»   » ಐಂದ್ರಿತಾ ರೇ ಜೊತೆ 'ಮಿಸ್ಸಿಂಗ್' ಆದ ದೂದ್ ಪೇಡ ದಿಗಂತ್

ಐಂದ್ರಿತಾ ರೇ ಜೊತೆ 'ಮಿಸ್ಸಿಂಗ್' ಆದ ದೂದ್ ಪೇಡ ದಿಗಂತ್

Posted By:
Subscribe to Filmibeat Kannada

ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಮಧ್ಯೆ 'ಸಂಥಿಂಗ್ ಸಂಥಿಂಗ್' ಗಾಸಿಪ್ ಅನೇಕ ವರ್ಷಗಳಿಂದ ಇದೆ. ಇನ್ನೂ ರೆಗ್ಯುಲರ್ ಸೆಲೆಬ್ರಿಟಿಗಳಂತೆ ಇವರು ಸಹ ತಮ್ಮ ರಿಲೇಷನ್ ಶಿಪ್ ವಿಷಯವನ್ನು ಆದಷ್ಟು ಗುಟ್ಟಾಗಿ ಇಟ್ಟಿದ್ದರು.

ಆದರೆ ಈಗ ದಿಗಂತ್ ಹಾಗೂ ಐಂದ್ರಿತಾ ರೇ ಎಲ್ಲೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. 'ದಿಗಂತ್ ಹೋಗುವ ಕಾರ್ಯಕ್ರಮಕ್ಕೆ ಐಂದ್ರಿತಾ ಹೋಗಲ್ಲ. ಐಂದ್ರಿತಾ ಹೋಗುವ ಕಾರ್ಯಕ್ರಮದಲ್ಲಿ ದಿಗಂತ್ ಭಾಗಿಯಾಗಲ್ಲ' ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೂದ್ ಪೇಡಾ ದಿಗಂತ್ ಕಂಡಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಅಂದಹಾಗೆ, ದಿಗಂತ್ ಮತ್ತು ಐಂದ್ರಿತಾ ರೇ ಬಗ್ಗೆ ಹಬ್ಬಿರುವ ಈ ಹೊಸ ಗಾಸಿಪ್ ಏನು ಎಂಬ ವಿಷಯ ಇಲ್ಲಿದೆ ಓದಿ...

ಏನಿದು ಗಾಸಿಪ್.?

ನಟ ದಿಗಂತ್ ಮತ್ತು ಐಂದ್ರಿತಾ ರೇ ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ದಿಗಂತ್ ಹೋಗುವ ಕಾರ್ಯಕ್ರಮಕ್ಕೆ ಐಂದ್ರಿತಾ ಹೋಗಲ್ಲ. ಐಂದ್ರಿತಾ ಹೋದ ಕಾರ್ಯಕ್ರಮದಲ್ಲಿ ದಿಗಂತ್ ಇರಲ್ಲ. ಎಂಬ ಹೊಸ ಗಾಸಿಪ್ ಈಗ ಹಬ್ಬಿದೆ.

ಕಾರಣ ಇಷ್ಟೆ

ಇತ್ತೀಚಿಗೆ ನಡೆದ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ದಿಗಂತ್ ಅತಿಥಿಯಾಗಿ ಬಂದಿದ್ದರು. ಆಗ ಅನೇಕರು ಅವರೊಂದಿಗೆ ಐಂದ್ರಿತಾ ಸಹ ಇರುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ನಿರಾಸೆ ಆಯಿತು.

'ಪಂಚರಂಗಿ 2' ಚಿತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ದೂದ್ ಪೇಡ ದಿಗಂತ್

ದಿಗಂತ್ ಮಿಸ್ಸಿಂಗ್

ಇನ್ನೂ ಐಂದ್ರಿತಾ ರೇ ಕೂಡ ಈಗ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅದರ ಶೂಟಿಂಗ್ ನಡೆದಿದೆ. ಆದರೆ ಈ ಕಾರ್ಯಕ್ರಮದಲ್ಲಿ ಈಗ ದಿಗಂತ್ ಮಿಸ್ಸಿಂಗ್ ಆಗಿದ್ದಾರೆ.

ಐಂದ್ರಿತಾ ಜೊತೆ ಡ್ಯಾನಿಶ್ ಸೇಠ್

'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ದಿಗಂತ್ ಜೊತೆ ಶರ್ಮಿಳಾ ಮಾಂಡ್ರೆ ಬಂದಿದ್ದರು. ಈಗ ಐಂದ್ರಿತಾ ರೇ ಜೊತೆ ಡ್ಯಾನಿಶ್ ಸೇಠ್ ಅತಿಥಿಯಾಗಿದ್ದಾರೆ.

ಪ್ರಶ್ನೆ ಇದ್ದೇ ಇರುತ್ತದೆ

ದಿಗಂತ್ ಕಾರ್ಯಕ್ರಮದಲ್ಲಿ ಮಿಸಿಂಗ್ ಆದರೂ ಸಹ ಐಂದ್ರಿತಾ ರೇ ಅವರಿಗೆ ದಿಗಂತ್ ಬಗ್ಗೆ ಪ್ರಶ್ನೆ ಇದ್ದೇ ಇರುತ್ತದೆ. ಸೋ, ಅದಕ್ಕೆ ಐಂದ್ರಿತಾ ಏನ್ ಹೇಳಬಹುದು ಎಂಬ ಕುತುಹಲ ಎಲ್ಲರಲ್ಲೂ ಮೂಡಿದೆ.

English summary
New Gossip About Diganth and Aindrita Ray

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada