ShreeGowri: ಸೋಮವಾರದಿಂದ 'ಶ್ರೀಗೌರಿ' ದರ್ಶನ: 'ಕಾಂತಾರ' ಛಾಯೆ ಕಾಣುತ್ತಿದೆ ಎಂದ ವೀಕ್ಷಕರು!

By ಶೃತಿ ಹರೀಶ್ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಸೋಮವಾರದಿಂದ (ಜನವರಿ 29) ರಿಂದ ತೆರೆಗೆ ಬರಲಿದೆ. ಕಮಲಿ ಖ್ಯಾತಿಯ ಅಮೂಲ್ಯ ಗೌಡ ಮುಖ್ಯಪಾತ್ರ ಮಾಡಿದ್ದಾರೆ. ಬಿಗ್ ಬಾಸ್‌ನಿಂದ ಹೊರಗೆ ಬಂದ ಮೇಲೆ ಸ್ಪಲ್ಪ ಆರಾಮಾಗಿ ಕಾಲ ಕಳೆಯುತ್ತಾ ಇದ್ದ ಅಮೂಲ್ಯ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಈಗ ಶ್ರೀಗೌರಿ ಧಾರಾವಾಹಿಯಲ್ಲಿ ಬಣ್ಣವನ್ನು ಹಚ್ಚಿದ್ದಾರೆ.

ಶ್ರೀಗೌರಿ ಜನವರಿ 29ತಿಮದ ರಾತ್ರಿ 8.30ಕ್ಕೆ ಪ್ರಸಾರ ಕಾಣಲಿದೆ. ಕಮಲಿ ಸೀರಿಯಲ್ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದ ಅಮೂಲ್ಯ ಗೌಡ ಈಗ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಶ್ರೀಗೌರಿ ಕಥೆ ವಿಭಿನ್ನವಾಗಿದೆ ಎಂದು ನಟಿ ಅಮೂಲ್ಯ ಗೌಡ ತಿಳಿಸಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಶ್ರೀಗೌರಿ ಪ್ರೋಮೋವನ್ನು ರಿಲೀಸ್ ಮಾಡಲಾಗಿತ್ತು. ಬಿಗ್ ಬಾಸ್ ಸ್ಪರ್ಧಿಗಳು ಕೂಡ ಈ ಧಾರಾವಾಹಿ ತಂಡಕ್ಕೆ ಶುಭಾರೈಸಿದ್ದರು.

New Kannada Serial ShreeGowri first episode to air january 29th

ವೀಕ್ಷಕರು ಕೂಡ ಧಾರಾವಾಹಿಯ ಕಥೆ ಯಾವ ರೀತಿ ಸಾಗುತ್ತದೆ ಎಂಬುದನ್ನು ನೋಡಲು ಕಾತುರರಾಗಿದ್ದಾರೆ. ಕಥೆಯಲ್ಲಿ ಕುತೂಹಲವನ್ನು ಸಹ ಹುಟ್ಟು ಹಾಕಲಾಗಿದೆ. ಅಪ್ಪನ ಮಗಳಿಗೆ ಪ್ರತಿ ರಾತ್ರಿಯೂ ಗ್ರಹಣ ಎಂದು ಟೈಟಲ್ ಕೊಟ್ಟಿದ್ದು ಆ ಗ್ರಹಣ ಯಾವುದು ಎಂಬುದನ್ನು ನೋಡಲು ಕಾಯುತ್ತಿದ್ದಾರೆ. ಇಲ್ಲಿ ಅಮೂಲ್ಯ ಗೌಡ ಜೊತೆಗೆ ಕಾರ್ತಿಕ್ ಪುರಾಣಿಕ್, ನಂದಿನಿ ಗೌಡ, ಗಾಯತ್ರಿ ಪ್ರಭಾಕರ್, ಸಂಜಯ್ ಸೂರಿಯಂಥ ಹಲವರು ಅಭಿನಯವನ್ನು ಮಾಡಿದ್ದಾರೆ.

ಶ್ರೀಗೌರಿಯಲ್ಲಿ ಕಾಂತಾರ ಛಾಯೆ, ಹುಲಿ ಡ್ಯಾನ್ಸ್‌ಗೆ ಅಮೂಲ್ಯ ಹೆಜ್ಜೆ

ಹುಲಿಯ ಕುಣಿತ ಹಾಗೂ ಕರಾವಳಿಯನ್ನು ನೋಡಿದ ವೀಕ್ಷಕರಿಗೆ ಯಾವ ರೀತಿ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಧಾರಾವಾಹಿಯಲ್ಲಿ ಕಾಂತಾರಾ ಚಲನಚಿತ್ರದ ಛಾಯೆ ಎಂದು ಕಾಣುತ್ತಿದೆ. ಕಾಂತಾರಾ ಸಿನಿಮಾದಲ್ಲೂ ಕೂಡ ಮೊದಲಿಗೆ ಹೀರೋ ಪರಿಚಯವನ್ನು ಕಂಬಳದ ಮೂಲಕ ತೋರಿಸಲಾಗಿದೆ ಇಲ್ಲೂ ಕೂಡ ಅಪ್ಪು ಕಂಬಳದ ಮೂಲಕ ಕೊಟ್ಟಿದ್ದಾರೆ. ಇಲ್ಲಿ ಅಪ್ಪು ಬಂದು ಕಂಬಳವನ್ನು ಆಡಿ ಊರಿನ ಘನತೆಯನ್ನ ಕಾಪಾಡುವಂತೆ ತೋರಿಸಲಾಗಿದ್ದು ಅವರ ಅಮ್ಮ ಕೂಡ ಅಪ್ಪು ಎಲ್ಲಿಗೂ ಬರೋದಿಲ್ಲ ಎಂದು ಹೇಳಿದ್ದಾರೆ.

New Kannada Serial ShreeGowri first episode to air january 29th

ಕಾಂತಾರಾ ಮೂವಿಯಲ್ಲೂ ಕೂಡ ಕಂಬಳವನ್ನು ಆಡಿ ಬಂದಂತಹ ಹೀರೋಗೆ ಅಮ್ಮ ಬೈದಿದ್ದಾರೆ. ಇಲ್ಲಿ ಮಗನನ್ನು ಕಂಬಳವನ್ನು ಆಡಲು ಬರಲ್ಲ ಎಂದು ಊರಿನ ಜನರಿಗೆ ಹೇಳಿ ಕಳುಹಿಸಿದ್ದಾರೆ. ಆದರೆ ಅಮ್ಮನ ಮುದ್ದಿನ ಮಗ ಅಮ್ಮ ಹಾಕಿದ ಗೆರೆಯನ್ನು ದಾಟಿ ಕಂಬಳದ ಗದ್ದೆಗೆ ಹಾರಿ ಹೋಗಿದ್ದಾನೆ. ಇದು ಅಮ್ಮನಿಗೆ ಗೊತ್ತಾಗಿದ್ದು ಮುಂದೆ ಮಗನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಮಗ ಕಂಬಳ ಗೆದ್ದರೆ ಮಗನನ್ನು ಸಾಯಿಸುವ ಬೆದರಿಕೆ ಹಾಕಿದ್ದು ಇದಕ್ಕಾಗಿ ಅಪ್ಪುವಿನ ತಾಯಿ ಗಾಬರಿಯಿಂದ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಅಪ್ಪನ ಮಗಳಿಗೆ ಹಿಡಿದಿರುವ ಗ್ರಹಣ ಯಾವುದು?

ಗೌರಿ ಅಪ್ಪನ ಮುದ್ದಿನ ಮಗಳಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೆ ರಾತ್ರಿ ವೇಳೆಗೆ ಗೌರಿ ಕಾಲಿಗೆ ಒಂದು ಸರಪಳಿಯನ್ನು ಹಾಕಿ ಬೀಗವನ್ನ ಹಾಕಲಾಗುತ್ತದೆ . ಆದರೆ ಇಲ್ಲಿ ಗೌರಿ ಯಾವುದೇ ಬೇಸರವನ್ನು ಮಾಡಿಕೊಳ್ಳದೆ ಮನೆಯಲ್ಲಿಯೇ ಮಲಗಿಕೊಳ್ಳುತ್ತಾಳೆ. ಗೌರಿಯ ಅಪ್ಪನಿಗೆ ಮಗಳಿಗೆ ಒಂದು ಮದುವೆಯನ್ನ ಮಾಡಿದರೆ ಸಾಕು ಎಂಬುದೇ ಯೋಚನೆಯಾಗಿದೆ. ಗೌರಿಯನ್ನು ಯಾಕೆ ಸರಪಳಿಯನ್ನು ಹಾಕಿ ಬಂಧಿಸಲಾಗುತ್ತದೆ ಎಂಬ ಯಾವುದೇ ವಿಚಾರವನ್ನು ಪ್ರೋಮೋದಲ್ಲಿ ನೀಡಿಲ್ಲ.

ಬದಲಾದ ಸಮಯದಲ್ಲಿ ಅಂತರಪಟ

ಅಂತರಪಟ ಧಾರಾವಾಹಿ ಬರುತ್ತಿದ್ದ ಸಮಯದಲ್ಲಿ ಶ್ರೀಗೌರಿ ಧಾರಾವಾಹಿ ಹಾಕಲಾಗಿದೆ. ಅಂತರಪಟ ಧಾರಾವಾಹಿಯನ್ನು ರಾತ್ರಿ 10 ಗಂಟೆಗೆ ಹಾಕಲಾಗಿದ್ದು ವೀಕ್ಷಕರಿಗೆ ಕೊಂಚಮಟ್ಟಿಗೆ ಬೇಸರ ತರಿಸಿದೆ. ಯಾಕೆಂದರೆ ಅಂತರಪಟ ಧಾರಾವಾಹಿ ಕೂಡ ತನ್ನದೇ ಆದ ವೀಕ್ಷಕ ವರ್ಗವನ್ನು ಹೊಂದಿತ್ತು. ಈಗ ಬದಲಾದ ಸಮಯದಲ್ಲಿ ಬರುತ್ತಿದ್ದು ಹೊಸ ಧಾರಾವಾಹಿಯನ್ನು ವೀಕ್ಷಕರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

More from Filmibeat

English summary
ShreeGowri new serial first episode on january 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X