ShriGowri: ಶ್ರೀಗೌರಿ ಮೂಲಕ ಮತ್ತೆ ಕಿರುತೆರೆಗೆ ಬಂದ ನಟಿ ಅಮೌಲ್ಯ ಗೌಡ, ಶುರು ಆಗಲಿದೆ ತಂದೆ ಮಗಳ ಬಾಂಧವ್ಯದ ಕಥೆ

By Poorva

ಕಲರ್ಸ್ ಕನ್ನಡ ಮೊದಲಿನಿಂದಲೂ ಒಂದರ ಹಿಂದೊಂದು ಹಿಟ್ ಧಾರಾವಾಹಿಗಳನ್ನು ನೀಡಿ ಪ್ರೇಕ್ಷಕ ವರ್ಗವನ್ನು ರಂಜಿಸುತ್ತಾ ಇದೆ . ಅದೇ ರೀತಿ ಇದೀಗ ಮತ್ತೊಂದು ಧಾರಾವಾಹಿ ಮೂಲಕ ಹೊಸತನವನ್ನು ಜನರಿಗೆ ತೋರಿಸಲು ಸಜ್ಜಾಗಿದೆ. ಇದೀಗ ಸದ್ಯದಲ್ಲೆ ಶ್ರೀಗೌರಿ ಧಾರಾವಾಹಿ ಪ್ರಸಾರವಾಗಲು ಸಿದ್ಧವಾಗಿದೆ.

ಈ ಧಾರಾವಾಹಿಯ ಒಂದು ಪ್ರೋಮೋವನ್ನು ಅನೇಕ ದಿನಗಳ ಹಿಂದೆ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಹೆಸರನ್ನು ಮಾತ್ರ ರಿವೀಲ್ ಮಾಡಿ, ಅದರಲ್ಲಿ ಯಾರೆಲ್ಲ ನಟನೆ ಮಾಡುತ್ತಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ.

New Kannada serial ShriGowri 2nd promo released, Amulya Gowda in Lead role

ಇದರಿಂದ ಜನರಿಗೆ ಕುತೂಹಲ ಹೆಚ್ಚಾಗುತ್ತು.ಯಾರೆಲ್ಲ ಧಾರಾವಾಹಿಯಲ್ಲಿ ಅಭಿನಯ ಮಾಡಲಿದ್ದಾರೆ ಎನ್ನುವ ಕುತೂಹಲವಿತ್ತು. ಆದರೆ ಇದೀಗ ಶ್ರೀಗೌರಿ ಧಾರಾವಾಹಿ ತಂಡ ಇನ್ನೊಂದು ಪ್ರೋಮೋವನ್ನು ಬಿಡುಗಡೆ ಮಾಡಿ ಜನರ ಕುತೂಹಲಕ್ಕೆ ತೆರೆ ಎಳೆದಿದೆ.

ತಂದೆ ಮಗಳ ಬಾಂಧವ್ಯದ ಕಥೆ ಶ್ರೀಗೌರಿ

ಇದರಿಂದ ವೀಕ್ಷಕರಿಗೆ ಹೀರೋಯಿನ್ ಯಾರು ಎಂಬುವುದು ಇದೀಗ ತಿಳಿದಿದೆ .ಆದರೆ ನಾಯಕ ನಟನನ್ನು ಗೌಪ್ಯವಾಗಿ ಇಟ್ಟಿದ್ದಾರೆ. ಶ್ರೀಗೌರಿ ಧಾರಾವಾಹಿಯಲ್ಲಿ ಒಬ್ಬ ತಂದೆ ತನ್ನ ಮಗಳನ್ನು ಎಷ್ಟೆಲ್ಲ ಪ್ರೀತಿ ಮಾಡುತ್ತಾನೆ ಎಂದರೆ ಆಕೆ ಯಾವುದೇ ಕ್ಷಣದಲ್ಲಿ ಕೂಡ ಏನಾದರು ಬೇಕು ಎಂದರೆ ಒಂದು ಎದುರು ಮಾತನಾಡದೆ ಆಕೆಗಾಗಿ ತಂದು ಕೊಡುತ್ತಾನೆ. ಗೌರಿ ಐಸ್ ಕ್ರೀಮ್ ಕೇಳಿದ ವೇಳೆ ತಂದೆ ಮೊದಲು ಯಾಕೆ ಎಂದು ಪ್ರಶ್ನೆ ಮಾಡಿದರು ಬಳಿಕ ಮಗಳ ಹಠಕ್ಕೆ ಮಾರು ಹೋಗುತ್ತಾನೆ.

New Kannada serial ShriGowri 2nd promo released, Amulya Gowda in Lead role

ಪ್ರೊಮೋದಲ್ಲಿ ಪ್ರತಿ ಇರುವೆಗೆ ಕೂಡ ನೋವು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುವ ಹುಡುಗಿ, ಯಾವ ರೀತಿ ಲೆಕ್ಕ ಹಾಕಿದರೂ ಇವಳೇ ಸರಿ, ಯಾವಾಗಲೂ ಹೀಗೆ ಪ್ರೀತಿಯಲ್ಲಿ ನನ್ನ ಕಟ್ಟಿ ಹಾಕಿ ಬಿಡುತ್ತಾಳೆ, ನನ್ನ ಮಗಳು, ನನ್ನ ಉಸಿರು, ನನ್ನ ಗೌರಿ, ಆದರೆ ರಾತ್ರಿ ಹೊತ್ತಿಗೆ ನನ್ನ ಉಸಿರೇ ನಿಂತು ಹೋಗುತ್ತೆ , ಮುದ್ದಿನ ಮಗಳಿಗೆ ಪ್ರತಿ ರಾತ್ರಿ ಗ್ರಹಣ ಎಂದು ಪ್ರೋಮೋದಲ್ಲಿದೆ. ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಅಭಿನಯಿಸಿದ್ದಾರೆ.

ನಾಯಕಿ ಪಾತ್ರದಲ್ಲಿ ಮಿಂಚಲಿರುವ ಅಮೂಲ್ಯ

ಪ್ರೋಮೋ ಮಾತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಮುಖ್ಯ ಭೂಮಿಕೆಯಲ್ಲಿ 'ಕಮಲಿ' ಧಾರಾವಾಹಿಯ ಅಮೂಲ್ಯ ಗೌಡ ಅಭಿನಯ ಮಾಡಿದ್ದಾರೆ. ಹಾಗೆಯೇ ನಾಯಕ ನಟ ಯಾರು ಎಂಬುವುದನ್ನು ಇನ್ನಷ್ಟೇ ರೀವಿಲ್ ಮಾಡಬೇಕಾಗಿದೆ. ಕಲರ್ಸ್ ಕನ್ನಡದ ಮೂಲಕ ಮೊದಲ ಬಾರಿಗೆ ಗೌರಿ ಆಗಿ ತೆರೆ ಹಂಚಿಕೊಳ್ಳುತ್ತಾ ಇರುವ ಅಮೂಲ್ಯ ಗೌಡಗೆ ಅಭಿಮಾನಿಗಳು ಗುಡ್ ಲಕ್ ಎಂದು ಹೇಳಿದ್ದಾರೆ.

ಅಮೂಲ್ಯ ಮೊದಲು ಅನುರಾಗ ಸಂಗಮ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ, ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಅಮೂಲ್ಯ ಗೌಡಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಧಾರಾವಾಹಿ ಕಮಲಿ. ಈ ಧಾರಾವಾಹಿಯಲ್ಲಿ ಸುಮಾರು ನಾಲ್ಕುವರೆ ವರುಷಗಳ ತನಕ ಅಮೂಲ್ಯ ಗೌಡ ನಿಭಾಯಿಸಿಕೊಂಡು ಬಂದಿದ್ದರು. ಇದಾದ ಬಳಿಕ ಇವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕಿತು. ಬಿಗ್ ಬಾಸ್ ಮನೆಯಲ್ಕೂಲೂ ಉತ್ತಮವಾದ ಪ್ರದರ್ಶನ ನೀಡಿ ಎಲ್ಲರ ಮನೆ ಮಾತಾಗಿದ್ದರು. ಅದಾದ ಬಳಿಕ ಇವರು ಪ್ರಸ್ತುತ ಶ್ರೀಗೌರಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ.

More from Filmibeat

English summary
Actress Amulya Gowda to play lead role in New serial ShriGowri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X