ಮತ್ತೆ ಬರ್ತಿದೆ 'ಅವನು ಮತ್ತೆ ಶ್ರಾವಣಿ': ಹೊಸ ಕಥೆಯಲ್ಲಿ ಪ್ರಮುಖ ಪಾತ್ರ ಯಾರದ್ದು ಗೊತ್ತಾ..?

By ಪ್ರಿಯಾ ದೊರೆ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಕಥೆ ಹೊತ್ತು ಬರುತ್ತಿದೆ ಮತ್ತೊಂದು ಧಾರಾವಾಹಿ. ಈ ವಾಹಿನಿಯೂ ಎಕ್ಸ್‌ಪೆರಿಮೆಂಟ್‌ ಮಾಡುತ್ತಿದ್ದು, ಹೊಸ ಹೊಸ ವಿಚಾರಗಳ ಮೇಲೆ ಕಥೆ ಬರೆದು ಧಾರಾವಾಹಿ ರೂಪದಲ್ಲಿ ಪ್ರಸಾರ ಮಾಡುತ್ತಿದೆ.

'ಅವನು ಮತ್ತೆ ಶ್ರಾವಣಿ' ಈ ಧಾರಾವಾಹಿಯಲ್ಲಿ ಶ್ವಾನ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಪ್ರೇಮಿಗಳನ್ನು ಒಂದು ಮಾಡುವ ಶ್ವಾನದ ಜೊತೆಗೆ ಈ ಧಾರಾವಾಹಿಯ ಕಥೆ ನಡೆಯಲಿದೆ.

ಈ ಹಿಂದೆ ಪ್ರಸಾರವಾಗಿದ್ದ 'ಅವನು ಮತ್ತೆ ಶ್ರಾವಣಿ' ಎಂಬ ಧಾರಾವಾಹಿ ಶೀರ್ಷಿಕೆಯನ್ನೇ ಈ ಕಥೆಗೂ ಇಟ್ಟಿದ್ದು, ಮೈಸೂರು ಮಂಜು ಅವರ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರಲಿದೆ.

Avanu-Mathe-Shravani-dog-serial

ಪ್ರೀತಿಯ ಸೇತುವೆ ಆಗಲಿರುವ ಶ್ವಾನ

'ಅವನು ಮತ್ತೆ ಶ್ರಾವಣಿ' ಧಾರಾವಾಹಿಯನ್ನು ವಾಹಿನಿ ಗ್ರ್ಯಾಂಡ್ ಆಗಿ ಪ್ರಸಾರ ಮಾಡಲು ತಯಾರಿ ನಡೆಸಲಾಗುತ್ತಿದೆ. ಸಿನಿಮಾಗಳಲ್ಲಿ ಶ್ವಾನಗಳನ್ನು ಬಳಸಲಾಗಿದೆ. ಆದರೆ, ಇದುವರೆಗೂ ಧಾರಾವಾಹಿಗಳಲ್ಲಿ ಇಂತಹ ಒಂದು ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು. ಈ ಶ್ವಾನಕ್ಕೆ ಧಾರಾವಾಹಿಯಲ್ಲಿ ಚೀಕು ಎಂದು ಹೆಸರಿಡಲಾಗಿದೆ. ಪ್ರೀತಿಸುತ್ತಿದ್ದ ಪ್ರೇಮಿಗಳು ಕಾರಣಾಂತರಗಳಿಂದ ಬೇರೆ ಆಗುತ್ತಾರೆ. ನಂತರ ಕೆಲ ವರ್ಷಗಳ ಬಳಿಕ ನಾಯಕನ ಮದುವೆ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗಲಿದ್ದು, ಪ್ರೇಮಿಗಳನ್ನು ಒಂದು ಮಾಡುವಲ್ಲಿ ನಾಯಿ ಏನೆಲ್ಲಾ ಮಾಡುತ್ತದೆ ಎಂಬುದೇ ಧಾರಾವಾಹಿಯ ಕಥೆಯಾಗಿದೆ.

ನಾಯಕ ಮತ್ತು ನಾಯಕಿ ಯಾರು..?

ಈ ಧಾರಾವಾಹಿಯಲ್ಲಿ ನಾಯಕ ಪಾತ್ರವನ್ನು ನಟ ಸ್ಕಂದ ಅಶೋಕ್‌, ಅಭಿಮನ್ಯು ಆಗಿ ನಿರ್ವಹಿಸಲಿದ್ದಾರೆ. ಈ ಹಿಂದೆ 'ರಾಧಾ ರಮಣ' ಧಾರಾವಾಹಿ ಮೂಲಕ ಜನ ಮನ ಗೆದ್ದಿದ್ದ ಸ್ಕಂದ ಅಶೋಕ್‌ 'ಈಗ ಶ್ರಾವಣಿ ಮನಸ್ಸನ್ನು ಗೆಲ್ಲುತ್ತಾರಾ ಎಂದು ನೋಡಬೇಕಿದೆ. 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲಿ ಅಭಿಮನ್ಯುವಿಗೆ ಜೋಡಿಯಾಗಿ ಶ್ರಾವಣಿ ಪಾತ್ರದಲ್ಲಿ ಪೂಜಾ ರಮೇಶ್‌ ನಟಿಸಿದ್ದಾರೆ. ಇದರಲ್ಲೇ ಮತ್ತೊಂದು ಪಾತ್ರದಲ್ಲಿ ನಟಿ ಅನುಷಾ ರಮೇಶ್ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಈ ಧಾರಾವಾಹಿ ಶೂಟಿಂಗ್‌ನಲ್ಲಿ ಪದೇ ಪದೆ ರಿಟೇಕ್ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಸ್ಕಂದ ಅವರಿಗೆ ಇದೊಂದು ಅದ್ಭುತ ಅನುಭವ ಎಂದು ಸ್ವತಃ ಅವರೇ ಹೇಳಿದ್ದಾರೆ.

Avanu-Mathe-Shravani-dog-serial

ನಟ ಸ್ಕಂದ ಸೆಕೆಂಡ್‌ ಇನ್ನಿಂಗ್ಸ್

ನಟ ಸ್ಕಂದ ಅಶೋಕ್‌ ಅವರ 'ಸರಸು' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ 'ಅವನು ಮತ್ತೆ ಶ್ರಾವಣಿ' ಮೂಲಕ ಸೆಕೆಂಡ್‌ ಇನ್ನಿಂಗ್ಸ್‌ ಪ್ರಾರಂಭಿಸಿದ್ದಾರೆ. ಮಲಯಾಳಂನ 'ನೋಟ್ ಬುಕ್', 'ಪಾಸಿಟಿವ್', 'ಎಲೆಕ್ಟ್ರಾ', ತೆಲುಗಿನ 'ಮಲ್ಲಿ ಮಲ್ಲಿ', ತಮಿಳಿನ 'ಅಂಗುಸಂ', 'ಮುಪ್ಪರಿಮಾನಂ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಯೂ ಟರ್ನ್', 'ಕಾನೂರಾಯಣ', 'ಜಿಗ್ರಿ ದೋಸ್ತ್', 'ದೇವಯಾನಿ', 'ಭೈರಾದೇವಿ' ಹಾಗೂ 'ರಣಾಂಗಣ' ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಧಾರಾವಾಹಿಗಾಗಿ ಕಾಯುತ್ತಿರುವ ವೀಕ್ಷಕರು

'ಅವನು ಮತ್ತೆ ಶ್ರಾವಣಿ' ಹೆಸರಲ್ಲಿ ಈಗಾಗಲೇ ಧಾರಾವಾಹಿ ಮೂಡಿ ಬಂದಿತ್ತು. ಇದೀಗ ಮತ್ತದೇ ಹಸರಿನಲ್ಲಿ ಹೊಸ ಕಥೆಯ ಮೂಲಕ ಧಾರಾವಾಹಿಯ ಪ್ರೋಮೋ ರಿಲೀಸ್‌ ಆಗಿದೆ. ಪ್ರೋಮೋ ನೋಡಿದ ವೀಕ್ಷಕರು ಫುಲ್‌ ಹ್ಯಾಪಿ ಆಗಿದ್ದಾರೆ. ಯಾವ ಸಮಯಕ್ಕೆ ಧಾರಾವಾಹಿ ಪ್ರಸಾರ ಮಾಡುತ್ತಾರೆ ಅನ್ನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಎಲ್ಲರೂ ಈ ಹೊಸ ಧಾರಾವಾಹಿಯನ್ನು ನೋಡಲು ಕಾಯುತ್ತಿದ್ದಾರೆ.

More from Filmibeat

English summary
Star suvarna serial avanu mathe shravani important characters details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X