ಸ್ಟಾರ್ ಸುವರ್ಣಗೆ ರಮೇಶ್ ಅರವಿಂದ್ ಹೊಸ ಧಾರಾವಾಹಿ: 'ಆಸೆ' ಯಾವಾಗ? ಎಷ್ಟೊತ್ತಿಗೆ?

By ಅನಿತಾ ಬನಾರಿ

ಧಾರಾವಾಹಿಗಳ ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಿಸುತ್ತಿರುವುದರಲ್ಲಿ ಸ್ಟಾರ್ ಸುವರ್ಣ ಕೂಡ ಒಂದು. ಇತ್ತೀಚೆಗಷ್ಟೇ 'ಅವನು ಮತ್ತು ಶ್ರಾವಣಿ', 'ಗೌರಿಶಂಕರ' ಎನ್ನುವ ಹೊಸ ಧಾರಾವಾಹಿಗಳು ಶುರುವಾಗಿದ್ದು ವೀಕ್ಷಕರು ಮೆಚ್ಚಿಕೊಂಡಿದ್ದರು. ಇದೀಗ ಮಗದೊಂದು ಧಾರಾವಾಹಿ ವೀಕ್ಷಕರನ್ನು ರಂಜಿಸಲು ಬರುತ್ತಿದೆ.

ಹೌದು, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಆಸೆ' ಎನ್ನುವ ಹೊಚ್ಚ ಹೊಸ ಧಾರಾವಾಹಿ ಆರಂಭವಾಗಲಿದ್ದು, ಇದನ್ನು ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ರಮೇಶ್ ಅರವಿಂದ್ ಅವರ ನಿರ್ಮಾಣ ಮಾಡಲಿದ್ದಾರೆ. ಸಾಮಾನ್ಯ ಜನರ ಬದುಕಿನ ಅಸಾಮಾನ್ಯ ಕಥೆ ಇದಾಗಿದೆ.

New serial Aase will be telecasting on Star Suvarna from December 7th

ಬಾಯಿ ಬಿಟ್ಟರೆ ಒರಟಾಗಿ ಮಾತನಾಡುವ ಮೃದು ಮನಸ್ಸಿನ ಹುಡುಗನ ಹೆಸರು ಸೂರ್ಯ. ಇವನೇ ಧಾರಾವಾಹಿಯ ಕಥಾನಾಯಕ. ತಂದೆಗೆ ಈತ ಮುದ್ದಿನ ಮಗ. ಆದರೆ, ಸಣ್ಣವನಿದ್ದಾಗ ಗೊತ್ತಿಲದೇ ನಡೆದ ಒಂದು ಘಟನೆಯಿಂದಾಗಿ ಪ್ರತಿದಿನ ಮಾತ್ರವಲ್ಲ, ಪ್ರತಿಕ್ಷಣ ಅಮ್ಮನಿಂದ ದೂಷಿಸಲ್ಪಡುತ್ತಾನೆ. ಮಾತ್ರವಲ್ಲದೇ ಬದುಕಿನಲ್ಲಿ ನೊಂದು ಬೆಂದಿರುವ ನಾಯಕ ಸೂರ್ಯ ಆಕಾಂಕ್ಷೆಯನ್ನೇ ಕಳೆದುಕೊಂಡಿರುತ್ತಾನೆ.

ಇನ್ನು ಈ ಧಾರಾವಾಹಿಯ ಕಥಾ ನಾಯಕಿ ಮೀನಾ ಕೂಡಾ ಅಷ್ಟೇ. ಬಡ ಕುಟುಂಬಕ್ಕೆ ಸೇರಿದ ಈಕೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಮುಖದಲ್ಲಿನ ಮಂದಹಾಸ ಯಾವತ್ತಿಗೂ ಮಾಸುತ್ತಿರಲಿಲ್ಲ. ಮನೆಯಲ್ಲಿ ವಿಪರೀತ ಕಷ್ಟಕರವಾದ ಪರಿಸ್ಥಿತಿ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರ ಕಷ್ಟಕ್ಕಾಗಿ ಕೈ ಜೋಡಿಸುತ್ತಿರುವ ಈಕೆಯದ್ದು ಮುಗ್ಧ ಮನಸ್ಸು. ಕುಟುಂಬದ ಏಳಿಗೆಯ ಜೊತೆಗೆ ತಮ್ಮ ತಂಗಿಯರ ವಿದ್ಯಾಭ್ಯಾಸಕ್ಕಾಗಿ ಈಕೆ ಶ್ರಮಿಸುತ್ತಿರುತ್ತಾಳೆ.

ಬದುಕಿನಲ್ಲಿ ಯಾವುದೇ ಗುರಿಯಾಗಲೀ, ಆಸೆಯಾಗಲೀ ಇಲ್ಲದ ಸೂರ್ಯ ಒಂದೆಡೆಯಾದರೆ, ಮನೆಯವರಿಗಾಗಿ, ಅವರ ಸಂತೋಷಕ್ಕಾಗಿ ತುಂಬಾ ಆಸೆಯನ್ನು ಒಳಗೊಂಡಿರುವ ಮೀನಾ ಇನ್ನೊಂದೆಡೆ. ಎರಡು ತದ್ವಿರುದ್ಧ ಸ್ವಭಾವದ ನಾಯಕ ಸೂರ್ಯ ಹಾಗೂ ನಾಯಕಿ ಮೀನಾ ಇವರಿಬ್ಬರೂ ಎದುರು ಬದುರಾದರೆ ಏನಾಗಬಹುದು? ಎಂಬುದೇ ಆಸೆ ಧಾರಾವಾಹಿಯ ಮುಖ್ಯ ಸಾರಾಂಶ.

New serial Aase will be telecasting on Star Suvarna from December 7th

ನಿನಾದ್ ಹರಿತ್ಸ ನಾಯಕ ಸೂರ್ಯನಾಗಿ ನಟಿಸಿದರೆ, ನಾಯಕಿ ಮೀನಾಳಾಗಿ ಪ್ರಿಯಾಂಕಾ ಅವರು ಕಾಣಿಸಿಕೊಂಡಿದ್ದಾರೆ. ನಾಯಕನ ತಂದೆಯಾಗಿ ಮಂಡ್ಯ ರಮೇಶ್ ಹಾಗೂ ತಾಯಿಯಾಗಿ ಸ್ನೇಹಾ ಈಶ್ವರ್ ನಟಿಸಲಿದ್ದಾರೆ‌. ಉಳಿದಂತೆ ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

'ಆಸೆ' ಧಾರಾವಾಹಿಯ ಶೀರ್ಷಿಕೆ ಗೀತೆ ಈಗಾಗಲೇ ಬಿಡುಗಡೆಯಾಗಿದ್ದು ಗಾಯಕ ಕೀರ್ತನ್ ಹೊಳ್ಳ ಹಾಗೂ ಗಾಯಕಿ ಪೃಥ್ವಿ ಭಟ್ ಅವರು ದನಿ ನೀಡಿದ್ದಾರೆ. "ಆಸೆ ಆಸೆ ನನಗೊಂದು ಆಸೆ" ಎಂದು ಶುರುವಾಗುವ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನು ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ 'ಆಸೆ'ಯ ಪ್ರಸಾರ ಶುರುವಾಗಲಿದೆ.

More from Filmibeat

English summary
Star Suvarna is all set start new serial Aase on December 7th:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X