ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ಕ್ಷಮಾ': ಮುಂದಿನ ವಾರದಿಂದ ಪ್ರಾರಂಭ

ಹೊಸ ಹೊಸ ಧಾರಾವಾಹಿಗಳ ಮುಖಾಂತರ ವೀಕ್ಷಕರ ಮನ ಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುವ ವಾಹಿನಿ ಉದಯ ಟಿವಿ. ಇದೀಗ ಉದಯ ಟಿವಿಯಲ್ಲಿ ಮಹಿಳಾ ಪ್ರಧಾನ ಸೀರಿಯಲ್ ವೊಂದು ನಿಮ್ಮ ಮುಂದೆ ಬರಲು ಸಜ್ಜಾಗಿದೆ.

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ. ಮನೆಯನ್ನು ಸೌಹಾರ್ದಯುತವಾಗಿ ನಡೆಸುವುದರಿಂದ ಹಿಡಿದು ಕಾರ್ಯಕ್ಷೇತ್ರದಲ್ಲೂ ಅಗ್ರಸ್ಥಾನವನ್ನು ಸಾಧಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಹೀಗಾಗಿ ಕ್ಷಮೆಗೆ ಮತ್ತೊಂದು ಹೆಸರೇ ಹೆಣ್ಣು ಎನ್ನುತ್ತಾರೆ. ಭೂಮಿಗೆ ಮತ್ತೊಂದು ರೂಪ ಎನ್ನುತ್ತಾರೆ.

ಇಂತಹ ಭೂಮಿ ತೂಕದ ಹೆಣ್ಣಿನ ಕಥೆ 'ಕ್ಷಮಾ' ನಿಮ್ಮ ಉದಯ ಟಿವಿಯಲ್ಲಿ ಮಾರ್ಚ್ 4ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಶುರುವಾಗಲಿದೆ.

New serial in Udaya TV Kshama to telecast from March 4th

ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವ ಕಷ್ಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಭವಿಸುವ ಪರಿಪಾಟಲುಗಳು 'ಕ್ಷಮಾ' ಕಥೆಯ ಜೀವಾಳ.

ಕ್ಷಮಾ ಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ಹೋದಾಗ ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತ ವೀರ ಮಹಿಳೆ. ತನ್ನ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡುವಲ್ಲಿ ಸಫಲಳಾಗುತ್ತಾಳಾ? ಸಮಾಜ ಒಂಟಿ ಮಹಿಳೆಗೆ ಸೂರು ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾ? ಇಂತಹ ಸೂಕ್ಷ್ಮ ಎಳೆಯೊಂದಿಗೆ ಸಾಗುವ ಕಥೆ 'ಕ್ಷಮಾ'.

ಧಾರಾವಾಹಿ ರಂಗದಲ್ಲಿ ಹತ್ತಾರು ಸೂಪರ್ ಹಿಟ್ ಧಾರಾವಾಹಿ ಕೊಟ್ಟಿರುವ ಭಾರತೀಶ್ ನಿರ್ದೇಶನ ಮತ್ತು ಮೀಡಿಯಾ ಹೌಸ್ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಮುಖ್ಯಭೂಮಿಕೆಯಲ್ಲಿ ಕ್ಷಮಾ ಪಾತ್ರಧಾರಿಯಾಗಿ ಶ್ವೇತಾ ರಾವ್ ಮಾಡುತ್ತಿದ್ದು, ಇತರ ತಾರಾಗಣದಲ್ಲಿ ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರು ಇದ್ದಾರೆ.

More from Filmibeat

English summary
New serial in Udaya TV 'Kshama' to telecast from March 4th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X