ಪ್ರೀತಿಸಿ ವರಿಸಿದ ಹೆಣ್ಣಿಗೆ ಮೋಸ ; ಸ್ಟಾರ್ ಸುವರ್ಣದಲ್ಲಿ ಸೋಮವಾರದಿಂದ ಬರುತ್ತಿದ್ದಾಳೆ ಕಸ್ತೂರಿ

By ಪ್ರಿಯಾ ದೊರೆ

ಸುಂದರಿಯಾಗಿ ಮಿಂಚಿ ಈಗ ಸ್ಟಾರ್ ಸುವರ್ಣವಾಹಿನಿಯಲ್ಲಿ ಕಸ್ತೂರಿ ಆಗಿ ವೀಕ್ಷಕರ ಮನ ಗೆಲ್ಲಲು ಮರಳಿ ಬರುತ್ತಿದ್ದಾರೆ ಕನ್ನಡದ ಕಿರುತೆರೆ ನಟಿ ಐಶ್ವರ್ಯ ಪಿಸ್ಸೆ. ಹೌದು, ಇತ್ತೀಚೆಗೆ ಕನ್ನಡ ಮನರಂಜನೆ ವಾಹಿನಿಗಳಲ್ಲಿ ಡಬ್ಬಿಂಗ್ ಧಾರಾವಾಹಿಗಳ ಹಾವಳಿ ಜೋರಾಗಿದೆ. ಒಂದಾದ ಮೇಲೆ ಒಂದರಂತೆ ಪರಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗುತ್ತಲೇ ಇವೆ. ಇದೀಗ ಕಸ್ತೂರಿಯ ಸರದಿ. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರಗೊಂಡಿದ್ದ ಕಸ್ತೂರಿ ಎಂಬ ತೆಲುಗು ಧಾರಾವಾಹಿ ಈ ಡಬ್ ಆಗಿ ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

ಸೋಮವಾರದಿಂದ ಬರುತ್ತಿದ್ದಾರೆ ಕಸ್ತೂರಿ

ರಾಜಕೀಯ ಕ್ಷೇತ್ರದಲ್ಲಿ ಮುನ್ನುಗ್ಗುವ ಸಲುವಾಗಿ ವ್ಯಕ್ತಿಯೊಬ್ಬ ಪ್ರೀತಿಸಿ ವರಿಸಿದ ಹೆಣ್ಣಿಗೆ ಮೋಸ ಮಾಡಿರುತ್ತಾನೆ. ಹೆಂಡತಿಯನ್ನು ಕೊಲೆ ಮಾಡಲು ಸಹ ಮುಂದಾಗಿರುತ್ತಾನೆ. ಆದರೆ ಆಕೆ ಬದುಕುಳಿದಿದ್ದಲ್ಲದೇ, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ. ಆ ಮಗುವಿನ ಹೆಸರೇ ಕಸ್ತೂರಿ. ಕಸ್ತೂರಿ ತನ್ನ ತಾಯಿಗೆ ಆದ ಅನ್ಯಾಯದ ವಿರುದ್ದ ಹೋರಾಡುವುದೇ ಈ ಧಾರಾವಾಹಿಯ ಪ್ರಮುಖ ಕಥೆ. ಇದರಲ್ಲಿ ಕಸ್ತೂರಿಗೆ ಜೋಡಿಯಾಗಿ ಶ್ರೀಕರ್ ಜೊತೆಯಾಗಿದ್ದಾರೆ. ಇನ್ನೂ ಧಾರಾವಾಹಿ ತೆಲುಗಿನಲ್ಲಿ ಹಿಟ್ ಆಗಿತ್ತು. ಇದೀಗ ಕನ್ನಡದಲ್ಲಿ ಕಮಾಲ್ ಮಾಡಲು ಫೆಬ್ರವರಿ 12ರಿಂದ ಮಧ್ಯಾಹ್ನ 1.00 ಗಂಟೆಗೆ ಪ್ರಸಾರವಾಗುತ್ತಿದೆ. ಸ್ಟಾರ್ ಸುವರ್ಣ ವೀಕ್ಷಕರು ಧಾರಾವಾಹಿಯನ್ನು ನೋಡಲು ಫುಲ್ ಖುಷಿಯಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.

New Serial Kasturi in star suvarna

ಕನ್ನಡದ ಸುಂದರಿ ಐಶ್ವರ್ಯ ಪಿಸ್ಸೆ

ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಟಿ ನಮ್ ಕನ್ನಡದ ಸುಂದರಿ ಐಶ್ವರ್ಯ ಪಿಸ್ಸೆ ಅನ್ನೋದು ವಿಶೇಷ . ಹೌದು, ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ ಪರಭಾಷೆಯಲ್ಲಿ ಮಿಂಚುತ್ತಿರುವ ನಟಿ ಐಶ್ವರ್ಯ ಪಿಸ್ಸೆ ಕಸ್ತೂರಿ ಧಾರಾವಾಹಿಯ ನಾಯಕಿ. ಹಲವು ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿದ 'ಅನುರೂಪ' ಧಾರಾವಾಹಿಯಲ್ಲಿ ಮುದ್ದುಮುಖದ ಚೆಲುವೆಯಾಗಿ ಮಿಂಚಿದ್ದ ಐಶ್ವರ್ಯ ಪಿಸ್ಸೆ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಸುಂದರಿ.ಹಲವು ವರ್ಷಗಳ ಹಿಂದೆ ಎರಡು ಯುವ ಜೋಡಿಗಳ ಪ್ರೀತಿ ಹಾಗೂ ಜೀವನದ ಕಥೆ ಹೊಂದಿದ್ದ 'ಅನುರೂಪ' ಎಂಬ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು.

ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ

ತಮ್ಮ ಮುಗ್ಧ ನಟನೆಯಿಂದಲೇ ಎಲ್ಲರ ಮನೆ ಮಗಳಾಗಿದ್ದ ಐಶ್ವರ್ಯ ಪಿಸ್ಸೆ 'ಪುನರ್ ವಿವಾಹ' ಎಂಬ ಧಾರಾವಾಹಿ ಮೂಲಕ ಮೊದಲು ಕಿರುತೆರೆಗೆ ಕಾಲಿಟ್ಟರು. ಶೃತಿ ನಾಯ್ಡು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ 'ಪುನರ್ ವಿವಾಹ' ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರದ ಮೂಲಕ ಅಭಿನಯಕ್ಕೆ ಕಾಲಿಟ್ಟ ಐಶ್ವರ್ಯಾ ಅವರಿಗೆ ನಂತರ 'ಅನುರೂಪ' ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸಲು ಅವಕಾಶ ದೊರಕಿತು. ಈ ಧಾರಾವಾಹಿಯಲ್ಲಿ ಮೇಘನಾ ಎಂಬ ಪಾತ್ರದ ಮೂಲಕ ಮಿಂಚಿದ್ದ ಈಕೆ ನಂತರ ಒಂದು ಪೌರಾಣಿಕ ಧಾರಾವಾಹಿಯಲ್ಲೂ ಕಾಣಿಸಿಕೊಂಡರು. ಆ ನಂತರ 'ಗಿರಿಜಾ ಕಲ್ಯಾಣ' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ ಐಶ್ವರ್ಯ ಪಿಸ್ಸೆ ಅವರು ನಂತರ ಕುಲವಧು ಧಾರಾವಾಹಿಯಲ್ಲೂ ಕಾಣಿಸಿಕೊಂಡರು.

New Serial Kasturi in star suvarna

ಸಿನಿಮಾದಲ್ಲೂ ಬಣ್ಣ ಹಚ್ಚಿದ್ದ ಬೆಡಗಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ' ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಕೋವಿಡ್ ಕಾರಣದಿಂದ ಈ ಧಾರಾವಾಹಿಯು ಅರ್ಧಕ್ಕೆ ನಿಲ್ಲಬೇಕಾಯಿತು. ʼಅಗ್ನಿಸಾಕ್ಷಿ' ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟ ಐಶ್ವರ್ಯ ಪಿಸ್ಸೆ ಗೌರಿ ಪಾತ್ರದ ಮೂಲಕ ಮನೆ ಮಾತಾದರು. ತದ ನಂತರ 'ಕಸ್ತೂರಿ' ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರಕ್ಕೆ ಜೀವ ತುಂಬಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ನಲ್ಲಿ ಯಶ್ ಅವರ ತಂಗಿಯಾಗಿ ಅಭಿನಯಿಸಿದ್ದ ಇವರು ಸದ್ಯಕ್ಕೆ ತೆಲುಗಿನಲ್ಲೇ ಬಿಡಾರ ಹೂಡಿದ್ದಾರೆ.

More from Filmibeat

English summary
Actress aishwarya pisse serial kasturi dubbing in star suvarna channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X