twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮುದ್ದುಲಕ್ಷ್ಮಿ'

    By Bharath Kumar
    |

    ಹೊಸ ಬಗೆಯ ಕಾರ್ಯಕ್ರಮಗಳಿಂದ ಕನ್ನಡ ಪ್ರೇಕ್ಷಕರನ್ನ ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನ ಪ್ರಸಾರ ಮಾಡುತ್ತಿದೆ. ಈ ಧಾರಾವಾಹಿಯ ಹೆಸರು 'ಮುದ್ದುಲಕ್ಷ್ಮಿ'.

    ಗುಣಕ್ಕಿಂತ ಸೌಂದರ್ಯಕ್ಕೆ ಬೆಲೆ ಕೊಡುವ ಈ ಕಾಲದಲ್ಲಿ, ಬೆಳ್ಳಗಾಗಲು ಏನೆಲ್ಲಾ ಕಸರತ್ತು ಮಾಡುವ ಯುವಪೀಳಿಗೆಯ ನಡುವೆ ತನ್ನ ಬಣ್ಣವನ್ನು ಹೆಮ್ಮೆಯಿಂದ ಸ್ವೀಕರಿಸಿ, ತನ್ನ ಸ್ಪಟಿಕದಂತ ಗುಣಕ್ಕೆ ಆದ್ಯತೆ ನೀಡುವ ಕೃಷ್ಣಸುಂದರಿಯ ಕಥೆಯೇ 'ಮುದ್ದುಲಕ್ಷ್ಮಿ'. ಜಗತ್ತು ಹೆಣ್ಣನ್ನು ಸೌಂದರ್ಯದಿಂದ ಅಳೆಯುತ್ತಿರುವುದರಿಂದ ರೂಪವಿರದ-ಬಣ್ಣವಿರದ ಹೆಣ್ಣಿಗೆ ಕೀಳರಿಮೆ ಕಾಡುತ್ತದೆ. ಆ ಕೀಳರಿಮೆಯನ್ನು ಮೆಟ್ಟಿ, ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯವೇ ಮೇಲೆಂದು ನಂಬಿ, ತನ್ನವರಿಗೆಲ್ಲಾ ವಾತ್ಸಲ್ಯದ ಕಸ್ತೂರಿ ಸೂಸಲು ಬರಲಿದ್ದಾಳೆ ಲಕ್ಷ್ಮಿ.

    ಚಿಕ್ಕ ವಯಸಲ್ಲೇ ತಾಯಿಯನ್ನು ಕಳೆದುಕೊಂಡು ಮಲತಾಯಿ, ಮಲತಂಗಿಯರ ಹಂಗಿನಲ್ಲಿ ಬೆಳೆದವಳು. ಸೌಂದರ್ಯದ ಪ್ರತೀಕ ಅವಳ ತಂಗಿ, ಐಶ್ವರ್ಯ, ಮಿಸ್ ಬೆಂಗಳೂರು ಪಟ್ಟ ಮುಡಿಗೇರಿಸಿಕೊಂಡ ಚಂದಗಾತಿ. ತನ್ನ ಅಂದಕ್ಕೆ ಬೀಗಿ ಅಕ್ಕಳನ್ನು ಹಿಯಾಳಿಸಿದರೂ ನಗುಮೊಗದಲ್ಲಿ ಸದಾ ತಂಗಿಯ ಏಳಿಗೆಯನ್ನು ಬಯಸುವಳು ಅಕ್ಕ. ಇವರ ಜೀವನದಲ್ಲಿ ಬರುವ ರಾಜಕುಮಾರನೇ, ದೃವಂತ್. ಸ್ಪುರದ್ರೂಪಿ, ಶ್ರೀಮಂತ, ಗುಣವಂತ, ಯಾವ ಹುಡುಗಿಯೂ ಮೊದಲ ನೋಟದಲ್ಲೇ ಸೂರೆಗೊಳ್ಳುವ ಎಲ್ಲ ಲಕ್ಷಣವನ್ನೂ ಪಡೆದ ವೈದ್ಯ, ಹೃದಯ ತಜ್ಞ .ರೂಪದ ರತಿ ಐಶ್ವರ್ಯ ಇವನನ್ನು ಪಡೆಯಬೇಕೆಂದು ಹಂಬಲಿಸಿದರೆ, ಇವನು ಪ್ರೀತಿಸುವುದು ಗುಣದ ಗಣಿ ಲಕ್ಷ್ಮಿಯನ್ನು.

    New Serial Muddulakshmi in Star Suvarna tv from jan 22nds

    ಇವರ ನಡುವೆ ಸೌಂದರ್ಯದ ಮುಂದೆ ಮತ್ತೆಲ್ಲವೂ ಶೂನ್ಯ ಎಂದೇ ನಂಬಿದ ದೃವಂತ್ ತಾಯಿ 'ಸೌಂದರ್ಯ', ತನ್ನ ಮನೆ ಕೆಲಸದಾಳನ್ನು ಆಯ್ಕೆ ಮಾಡುವುದೂ ಸಹ ಅವರ

    ಸೌಂದರ್ಯ ನೋಡಿ. ದೃವಂತ್ ಲಕ್ಷ್ಮಿಯನ್ನು ಪ್ರೀತಿಸಿದರೆ, ಅವನ ತಾಯಿ ಅವಳ ಕಪ್ಪು ರೂಪವನ್ನು ದ್ವೇಷಿಸುತ್ತಾಳೆ. ತಾಯಿ ಐಶ್ವರ್ಯಳನ್ನು ಒಪ್ಪಿದರೆ, ಮಗ ಅವಳ ಕಪ್ಪು ಗುಣವನ್ನು ತಿರಸ್ಕರಿಸುತ್ತಾನೆ. ಈ ನಾಲ್ವರ ನಡುವಿನ ಸಾಮಾಜಿಕ ಸಂಘರ್ಷವೇ 'ಮುದ್ದುಲಕ್ಷ್ಮಿ' ಧಾರಾವಾಹಿಯ ಕಥಾಹಂದರ.

    ಮುದ್ದುಲಕ್ಷ್ಮಿ ಪಾತ್ರವನ್ನು ಸುಂದರ ಕಂಗಳ ಕೃಷ್ಣಸುಂದರಿ ಅಶ್ವಿನಿ ತನ್ನದಾಗಿಸಿಕೊಂಡಿದ್ದಾಳೆ. ದೃವಂತ್ ಪಾತ್ರಕ್ಕೆ ಜೀವ ತುಂಬಿ ನಿಮ್ಮ ಮನಸನ್ನು ಗೆಲ್ಲಲು ಬರುತ್ತಿದ್ದಾನೆ, ಚರಿತ್ ಬಾಲಣ್ಣ. ಸ್ಟಾರ್ ಸುವರ್ಣದ 'ಅಮ್ಮ' ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವಹಿಸಿ, ತಮ್ಮ ಪ್ರಬುದ್ದ ನಟನೆಯಿಂದ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಐಶ್ವರ್ಯ ಪಾತ್ರಕ್ಕೆ ಹೇಳಿ ಮಾಡಿಸಿದ ರೂಪವತಿ, ಅನು ಪೂವಮ್ಮ. ಕೊಡಗು ಮೂಲದ ಈಕೆ ಕೂಡ ಮಾಡೆಲಿಂಗ್ ಕ್ಷೇತ್ರದಿಂದ ಬಂದವಳು. ಈಗಾಗಲೇ 5 ಸಿನೆಮಾದಲ್ಲಿ ನಾಯಕಿ ನಟಿಯಾಗಿ ನಟಿಸಿರುವ ಈಕೆಗೆ ಈ ಧಾರಾವಾಹಿಯಲ್ಲಿ ಆಕರ್ಷಿಸಿದ್ದು, ಈ ಪಾತ್ರದ ಠೀವಿ, ಗತ್ತು ಮತ್ತು ನಟನೆಯ

    ಆಳ. ಮೊದಲ ಬಾರಿ ಕಿರುತೆರೆಗೆ ಕಾಲಿಡುತ್ತಿರುವ ಈಕೆ ತನ್ನ ಮಾಡೆಲಿಂಗ್ ರೂಪದಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಸಂಶಯವೇ ಇಲ್ಲ.

    ಅರ್ಚನಾ ಅನಂತವೇಲು, ದೃವಂತ್ ತಾಯಿ ಸೌಂದರ್ಯಳ ಪಾತ್ರವಹಿಸುತ್ತಿದ್ದಾರೆ. ಲಕ್ಷ್ಮಿಯ ತಾಯಿ ಪಾತ್ರದಲ್ಲಿ ವಾಣಿಶ್ರೀ ಮತ್ತು, ತಂದೆ ಪಾತ್ರದಲ್ಲಿ ಎನ್.ಟಿ. ರಾಮಸ್ವಾಮಿ

    ನಟಿಸುತ್ತಿದ್ದಾರೆ. ದೃವಂತ್ ತಮ್ಮನ ಪಾತ್ರದಲ್ಲಿ ರಕ್ಷಿತ್ ಹಾಗೂ ತಂದೆಯ ಪಾತ್ರದಲ್ಲಿ ಮೈಕೋ ಶಿವು ಅಭಿನಯಿಸುತ್ತಿದ್ದಾರೆ.

    'ಮುದ್ದುಲಕ್ಷ್ಮಿ', ತಳಿರು ಪ್ರೊಡಕ್ಷನ್ಸ್‍ನ ಮೊದಲ ಕಾಣಿಕೆ. ಈ ಮುಂಚೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಪ್ರಖ್ಯಾತರಾದ ಹರೀಶ್ ಬಾಬು ಇದರ ನಿರ್ಮಾಪಕರು.

    ಹಲವಾರು ಯಶಸ್ವಿ ಧಾರಾವಾಹಿಗಳನ್ನು ನೀಡಿದ ಧರಣಿ ಜಿ ರಮೇಶ್ ನಿರ್ದೇಶಕರಾಗಿದ್ದು, ಸಿ. ನಾಗರಾಜ್ ಅವರು ಛಾಯಾಗ್ರಹಕರಾಗಿ, ಅನಿ ಸಂಕಲನಕಾರರಾಗಿದ್ದಾರೆ.

    "ಮುಸ್ಸಂಜೆ ಮಾತು", "ಕೃಷ್ಣನ್ ಲವ್ ಸ್ಟೋರಿ", "ಕೃಷ್ಣ-ಲೀಲಾ" ಸಿನೆಮಾಗಳ ಬ್ಲಾಕ್‍ ಬಸ್ಟರ್ ಹಾಡುಗಳನ್ನು ನೀಡಿದ ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದರೆ, ಕೆ

    ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ಜನವರಿ 22ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:30ಕ್ಕೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ನಿಮ್ಮ

    English summary
    Karnataka’s leading entertainment channel star suvarna is launching a new serial called 'Muddulakshmi' from January 22nd every Monday to saturday at 7.30 PM.
    Monday, January 22, 2018, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X