Yashwanth Gowda ; ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬಂದ ಯಶ್ವಂತ್,ಯಾವುದು ಧಾರಾವಾಹಿ..?
ಕನ್ಯಾಕುಮಾರಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ಈಗ ತೆಲುಗಿನಲ್ಲಿ ಲೀಡ್ ರೋಲ್ ನಲ್ಲಿ ಬ್ಯುಸಿಯಾಗಿರುವ ನಟ ಯಶ್ವಂತ್ ಗೌಡ. ಯಶ್ವಂತ್ ಗೌಡ ಅವರು ಕನ್ನಡ ಕಿರುತೆರೆಗೆ ಮರಳಿ ಬರಬೇಕು ಎಂದು ಹಲವು ಅಭಿಮಾನಿಗಳ ಆಸೆ. ಈಗ ಅಭಿಮಾನಿಗಳ ಆಸೆಯನ್ನು ಪೂರೈಸಲು ಯಶ್ವಂತ್ ಗೌಡ ಅವರು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಅವಾರ್ಡ್ ಪಡೆದಿರುವ ಯಶ್ವಂತ್ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ಮೋಡಿ ಮಾಡಿ ನಂತರ ತೆಲುಗು ಅಂಗಳದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ನಟ ಯಶ್ವಂತ್ ಅವರಿ ಕನ್ನಡಿರಿಗೆ ಬೇಸರ ಮಾಡಬಾರದು ಎಂದು ಕನ್ನಡ ಕಿರುತೆರೆಗೆ ಮರಳಿದ್ದಾರೆ.
ಕನ್ನಡ ಕಿರುತೆರೆಗೆ ಯಶ್ವಂತ್ ರೀ-ಎಂಟ್ರಿ
ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಯೊಂದಕ್ಕೆ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದಯ ಟಿವಿಯಲ್ಲಿ ಮೂಡಿ ಬರಲಿರುವ ನಾತಿಚರಾಮಿ ಎಂದ ಧಾರಾವಾಹಿಯಲ್ಲಿ ನಟ ಯಶ್ವಂತ್ ಕಾಣಿಸಿಕೊಂಡಿದ್ದಾರೆ. ನಾಯಕ ಅಗಸ್ತ್ಯನ ಪಾತ್ರಕ್ಕೆ ಬಣ್ಣ ಹಚ್ಚಿರುವ ಯಶ್ವಂತ್ ಅವರು ತಾಯಿ ಇಲ್ಲದೇ ಕೊರಗುವ ಹುಡುಗ. ಹೀಗಾಗಿ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುತ್ತಾನೆ ನಾಯಕ ಅಗಸ್ತ್ಯ. ನಾಯಕ ಅಗಸ್ತ್ಯನಿಗೆ ಜೋಡಿಯಾಗಿ ಬರುವ ಹುಡುಗಿ ಕಂಪ್ಲೀಟ್ ಆಗಿ ದೈವ ಭಕ್ತೆ. ತಾಯಿ ಬನಶಂಕರಮ್ಮನ ಭಕ್ತೆಯಾಗಿರುವ ಹುಡುಗಿಗೂ, ದೇವರ ಮೇಲೆ ಕೋಪಿಸಿಕೊಂಡಿರುವ ನಾಯಕ ಅಗಸ್ತ್ಯನು ಒಂದಾಗುವ ಕಥೆಯೇ ನಾತಿಚರಾಮಿ.

ನಾಯಕಿ ಪಾತ್ರದಲ್ಲಿ ನಟಿ ಮನಸ್ವಿ
ಇನ್ನು ನಾತಿಚರಾಮಿ ಧಾರಾವಾಹಿಯಲ್ಲಿ ನಾಯಕನಿಗೆ ಜೋಡಿಯಾಗಿ ನಟಿ ಮನಸ್ವಿ ಕಾಣಿಸಿಕೊಂಡಿದ್ದಾರೆ. ಮನಸ್ವಿ ಅವರು ಈಗಾಗಲೇ ಚಂದನ್ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಮನಸ್ವಿ ಅವರು ಧಾರಾವಾಹಿಯಲ್ಲಿ ಭಕ್ತಿ ವಿಶ್ವನಾಥ ಶಾಸ್ತ್ರಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಧಾರಾವಾಹಿ ಕತೆಯ ಪ್ರಕಾರ ನಾಯಕಿ ಭಕ್ತಿ ವಿಶ್ವನಾಥ ಶಾಸ್ತಿ ಅರಿಶಿನಕಟ್ಟೆಯ ಹುಡುಗಿ. ಈಕೆ ಬನಶಂಕರಿ ಆಹಾರ ಉತ್ಪನ್ನ ಎಂಬ ಕಂಪನಿಯ ಸಿಇಒ ಆಗಿದ್ದಾಳೆ. ಚಕ್ಕುಲಿ ವ್ಯಾಪಾರ ಮಾಡುತ್ತಿದ್ದಾಳೆ. ಭಕ್ತಿಗೆ ದೇವಿ ಬನಶಂಕರಿ ತಾಯಿ ಮೇಲೆ ಅಪಾರವಾದ ನಂಬಿಕೆ. ಹೀಗಾಗಿ ದೇವಿಯನ್ನು ಚಕ್ಕುಲಿ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾಳೆ.
ಭಕ್ತಿಗೆ ಅಗಸ್ತ್ಯನೇ ಜೋಡಿ
ಚಿಕ್ಕಂದಿನಲ್ಲಿ ಕಲಿತ ಶ್ರದ್ಧೆಗೆ ನೂರು ವರ್ಷ ಆಯಸ್ಸಂತೆ! ಭಕ್ತಿ ಬದಲಾದ್ರೂ ಅವಳ ಶ್ರದ್ಧೆ ಬದಲಾಗಿಲ್ಲ ಎಂದು ಮತ್ತೊಂದು ಪ್ರೊಮೋದಲ್ಲಿ ಹೇಳಲಾಗಿದೆ. ಹಾಗೆಯೇ ಇವಳ ಭಕ್ತಿಗೆ ಬನಶಂಕರಮ್ಮ ಒಪ್ಪುವಂತಹ ಹುಡುಗನೇ ಬೇಕಂತೆ. ಅಂತಹ ಹುಡುಗ ಸಿಕ್ಕೇ ಸಿಗುತ್ತಾನೆ ಎಂಬ ನಂಬಿಕೆ ಭಕ್ತಿಗೆ ಇದೆ. ಈತ್ತ ನಾಯಕ ಅಗಸ್ತ್ಯ ಮಾತ್ರ ತನ್ನ ತಾಯಿಯ ಬಗ್ಗೆಯೇ ಯೋಚಿಸುತ್ತಿದ್ದಾನೆ. ಇನ್ನು ನಾಯಕ ಶ್ರೀಮಂತನಾಗಿದ್ದು, ನಾಯಕಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಇನ್ನು ಈ ಧಾರಾವಾಹಿಯನ್ನು ಜೊತೆ ಜೊತೆಯಲಿ ಸೀರಿಯಲ್ ನ ನಿರ್ದೇಶಕ ರಾಮ್ ಜಿ ಅವರು ನಿರ್ದೇಶಿಸುತ್ತಿದ್ದಾರೆ.
ಧಾರಾವಾಹಿ ಪ್ರಸಾರದ ಸಮಯ
ಉದಯ ವಾಹಿನಿ ಭಕ್ತಿಯಿಂದ ನಿಮ್ಮೆಲ್ಲರಿಗೂ ಅರ್ಪಿಸುತ್ತಿದ್ದೇವೆ ಭಕ್ತಿಯ ಹೊಸ ಕಥೆ ಎಂದು ಪ್ರೊಮೋ ಹರಿಬಿಟ್ಟಿದೆ. ಈ ಪ್ರೊಮೋವನ್ನು ನೋಡಿದ ವೀಕ್ಷಕರು ಫುಲ್ ಹ್ಯಾಪಿ ಆಗಿದ್ದಾರೆ. ದೀಪಾವಳಿ ಹಬ್ಬದ ಬಳಿಕ ಉದಯವಾಹಿನಿ ನವೆಂಬರ್ 4 ರಿಂದ ಧಾರಾವಾಹಿ ಪ್ರಾರಂಭವಾಗುತ್ತಿದೆ. ಸಂಜೆ 6:30ಕ್ಕೆ ಶುರುವಾಗುತ್ತಿದೆ. ಧಾರಾವಾಹಿಯ ಪ್ರೊಮೋಗಳು ಅದ್ಭುತವಾಗಿ ಮೂಡಿ ಬಂದಿವೆ. ಅಗಸ್ತ್ಯ ನಂಬದ ದೇವಿ, ಭಕ್ತಿಯ ನಂಬಿಕೆ ಉಳಿಸಿಕೊಳ್ತಾಳಾ ಎಂಬುದೇ ಕುತೂಹಲಕಾರಿಯಾಗಿದೆ.


Click it and Unblock the Notifications











