'ಮಜಾ ಟಾಕೀಸ್' ಜೊತೆಯಲ್ಲೇ ಹೊಸ ಶೋ ಆರಂಭಿಸಿದ ಸೃಜನ್
Recommended Video

'ಮಜಾ ಟಾಕೀಸ್' ಮೂಲಕ ಟಿವಿ ಪ್ರೇಕ್ಷಕರನ್ನ ಮನರಂಜಿಸುತ್ತಿರುವ ಕಿರುತೆರೆಯ ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಅವರು ಹೊಸದೊಂದು ಕಾರ್ಯಕ್ರಮ ಆರಂಭಿಸಿದ್ದಾರೆ.
ತಮ್ಮ 'ಲೋಕೇಶ್ ಪ್ರೊಡಕ್ಷನ್' ಅಡಿಯಲ್ಲಿ ವಿಭಿನ್ನವಾದ, ವಿಶೇಷವಾದ ಶೋವನ್ನ ಪ್ರಾರಂಭಿಸಿದ್ದು, ಇದಕ್ಕೆ ಕನ್ನಡ ಕಲಾತಾರೆಯರು ಸಾಥ್ ನೀಡುತ್ತಿದ್ದಾರೆ.
ಹೌದು, 'ಸದಾ ನಿಮ್ಮೊಂದಿಗೆ' ಎಂಬ ಹೆಸರಿನಲ್ಲಿ ಕಾರ್ಯಕ್ರಮ ಬರಲಿದ್ದು, ಹಿರಿಯ ನಟಿ ಜೂಲಿ ಲಕ್ಷ್ಮಿ ನಿರೂಪಣೆ ಮಾಡುತ್ತಿದ್ದಾರೆ. ಸಮಾಜಿಕ ಕಳಕಳಿಯ ಉದ್ದೇಶದಿಂದ ಮೂಡಿಬರ್ತಿರುವ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ.

ಸಮಾಜದಲ್ಲಿ ಜನಸಾಮಾನ್ಯರ ಪ್ರತಿನಿತ್ಯದ ಕೆಲಸ ಹೇಗಿರುತ್ತೆ.? ಅವರ ಕಷ್ಟಗಳು ಹೇಗಿರುತ್ತೆ.? ಅವರು ಕೆಲಸದ ವಾತಾವರಣ ಹೇಗಿರಲಿದೆ.? ಅವರ ಬದುಕಿನ ದಿನಚರಿ ಬಗ್ಗೆ ಬಿತ್ತರಿಸುತ್ತಾ, ಅವರ ಕೆಲಸದಲ್ಲಿ ಸಿನಿ ಕಲಾವಿದರು ಜೊತೆಯಾಗಿ ಅವರಿಗೆ ಸಹಾಯ ಮಾಡುವಂತಹ ವಿಶೇಷವಾದ ಶೋ ಇದು.
ಈಗಾಗಲೇ ಪ್ರೋಮೋಗಳು ಮೂಲಕ 'ಸದಾ ನಿಮ್ಮೊಂದಿಗೆ' ಹೆಚ್ಚು ನಿರೀಕ್ಷೆ ಮೂಡಿಸಿದೆ. ನಟ ಧ್ರುವ ಸರ್ಜಾ, ನಟಿ ರಶ್ಮಿಕಾ ಮಂದಣ್ಣ, ಶ್ರೀಮುರಳಿ, ಸೃಜನ್ ಲೋಕೇಶ್, ಪ್ರಿಯಾಮಣಿ, ಧನಂಜಯ್ ಸೇರಿದಂತೆ ಹಲವರು ಈ ಶೋನಲ್ಲಿ ಭಾಗವಹಿಸಿ, ಜನರಿಗೆ ನೆರವಾಗಲಿದ್ದಾರೆ.
ಅಂದ್ಹಾಗೆ, ಈ ಕಾರ್ಯಕ್ರಮ ಜುಲೈ 15 ರಿಂದ ರಾತ್ರಿ 9 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











