ಪಾರು ಆದಿ ಮದುವೆಗೆ ನೂರೆಂಟು ವಿಘ್ನ: ಟ್ವಿಸ್ಟ್‌ನಲ್ಲಿ ಎಂಟ್ರಿ ಕೊಟ್ಟಿದ್ದಾಳೆ ಹೊಸ ವಿಲನ್!

ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಮನೆ ಮಾತಾಗಿವೆ. ಅದರಲ್ಲಿ ಹಲವು ಧಾರಾವಾಹಿಗಳು ಜನರ ಮನಸಲ್ಲಿ ಅಚ್ಚು ಮೆಚ್ಚಿನ ಸ್ಥಾನ ಗಿಟ್ಟಿಸಿಕೊಂಡಿವೆ. ಅಂಹತ ಧಾರಾವಾಹಿಗಳಲ್ಲಿ 'ಪಾರು' ಕೂಡ ಒಂದು. ಪಾರು ಧಾರಾವಾಹಿ ಪ್ರಮುಖವಾಗಿ ಲವ್ ಸ್ಟೋರಿ ಮೇಲೆ ನಿಂತಿದೆ.

ಇಲ್ಲಿ ನಾಯಕ ನಟಿ ಪಾರು ಮನೆ ಕೆಲಸದಾಕೆ, ನಟ ಆದಿತ್ಯ ಮನೆಯ ಯಜಮಾನ. ಈ ಇಬ್ಬರ ನಡುವೆ ಪ್ರೀತಿ ಚಿಗುರಿ ಅವರು ಒಂದಾಗುವುದೇ ಮೂಲ ಕಥಾ ವಸ್ತು. ಆದರೆ ಇವರ ಪ್ರೇಮಕ್ಕೆ ನೂರಾರು ಅಡ್ಡ, ಆತಂಕ, ಕಂಟಕ. ಎಲ್ಲಾ ಸವಾಲುಗಳನ್ನ ಎದುರಿಸಿ ಬೇಸತ್ತ ಪಾರು, ಆದಿತ್ಯ ತಾವೇ ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದಾರೆ.

ಪಾರು ಪ್ರೀತಿ ತ್ಯಾಗ ಮಾಡಲು ನಿರ್ಧರಿಸಿದ್ದು ಆಗಿದೆ. ಆದರೆ ಆದಿತ್ಯನಿಗೆ ಪಾರ್ವತಿಯನ್ನು ಬಿಟ್ಟು ಬೇರೆ ಪ್ರಪಂಚ ಇಲ್ಲ. ಇವರ ಪ್ರೀತಿಗೆ ಮನೆಯವರೆಲ್ಲಾ ಸಹಾಯ ಮಾಡುತ್ತಿದ್ದಾರೆ, ಇನ್ನೇನು ಈ ಜೋಡಿ ಒಂದಾಗುತ್ತೆ ಎಂದು ನೀವು ಊಹಿಸಿದರೆ ಅದು ತಪ್ಪಾಗ ಬಹುದು. ಯಾಕೆಂದರೆ ಈಗ ಹೊಸ ವಿಲನ್ ಹುಟ್ಟಿಕೊಂಡಿದ್ದಾಳೆ. ಅದು ಮತ್ಯಾರು ಅಲ್ಲಾ ಯಾಮಿನಿ.

ಆದಿ-ಪಾರು ಪ್ರೀತಿಗೆ ಯಾಮಿನಿಯೇ ವಿಲನ್?

ಆದಿ-ಪಾರು ಪ್ರೀತಿಗೆ ಯಾಮಿನಿಯೇ ವಿಲನ್?

ಸದ್ಯಕ್ಕೆ ಪಾರು ಧಾರಾವಾಹಿಯಲ್ಲಿ ಹೊಸದೊಂದು ಟ್ವಿಸ್ಟ್ ಬಂದಿದೆ. ತಮ್ಮ ಪ್ರೀತಿ ವಿಚಾರ ಅಖಿಲಾಂಡೇಶ್ವರಿಗೆ ತಿಳಿಯ ಬಾರದು ಎಂದು ಪಾರು ಆದಿತ್ಯ ಮತ್ತು ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಿದ್ದಾಳೆ. ಆದಿತ್ಯನ ಕೈ ಹಿಡಿಯಲು ಬಂದಿರುವ ಯಾಮಿನಿ ಇಷ್ಟು ದಿನ ಒಳ್ಳೆಯವಳೇ ಆಗಿದ್ದಳು. ಆದರೆ ಈಗ ಆಕೆಯೆ ವಿಲನ್ ಆಗಿ ಬದಲಾಗುತ್ತಿದ್ದಾಳೆ. ಪಾರು, ಆದಿ ಪ್ರೀತಿ ಗೊತ್ತಿದ್ದರು, ಯಾಮಿನಿ ನಾಜೂಕಾಗಿ ತನಗೇನು ಗೊತ್ತಿಲ್ಲ ಎನ್ನುವ ರೀತಿ ನಡೆದು ಕೊಂಡಿದ್ದಾಳೆ. ಅಷ್ಟೇ ಅಲ್ಲಾ ಈಗ ಆದಿತ್ಯನ ಪಡೆಯುವ ಹಠದಲ್ಲಿ ಪಾರು ಮತ್ತು ಆದಿಯನ್ನು ದೂರ ಮಾಡಲು ಮುಂದಾಗಿದ್ದಾಳೆ.

ಅಪ್ಪನ ಸಪೋರ್ಟ್ ಇದ್ದರು ಅಮ್ಮನ ಸಪೋರ್ಟ್ ಸಿಗುತ್ತಿಲ್ಲ!

ಅಪ್ಪನ ಸಪೋರ್ಟ್ ಇದ್ದರು ಅಮ್ಮನ ಸಪೋರ್ಟ್ ಸಿಗುತ್ತಿಲ್ಲ!

ಇನ್ನು ಆದಿತ್ಯ ಪಾರು ಪ್ರೀತಿಗೆ ಮನೆಯಲ್ಲಿ ಬಹುತೇಕ ಎಲ್ಲರ ಸಪೋರ್ಟ್ ಸಿಕ್ಕಿದೆ. ಆದರೆ ಮುಖ್ಯವಾಗಿ ಬೇಕಾಗಿರುವು ಮನೆಯ ಒಡತಿ, ಆದಿತ್ಯನ ತಾಯಿ ಅಖಿಲಾಂಡೇಶ್ವರಿ ಅವರದ್ದು. ಹಾಗಾಗಿ ಅಖಿಲ ಅವರಿಗೆ ಇವರ ಪ್ರೀತಿ ವಿಷಯ ತಿಳಿಸಲು ಮನೆಯವರೆಲ್ಲಾ ಹರ ಸಾಹಸ ಪಡುತ್ತಿದ್ದಾರೆ. ಇನ್ನೇನು ಆದಿ-ಪಾರು ಪ್ರೀತಿ ವಿಚಾರ ಅಖಿಲಾಂಡೇಶ್ವರಿಗೆ ತಿಳಿಯಿತು ಎನ್ನುವಷ್ಟರಲ್ಲೇ ಯಾಮಿನಿ ಎಂಟ್ರಿ ಆಗಿ ಎಲ್ಲವನ್ನೂ ಹಾಳು ಮಾಡಿದ್ದಾಳೆ.

ಆದಿಗಾಗಿ ವಿಲನ್ ಆಗುತ್ತಾಳಾ ಯಾಮಿನಿ?

ಆದಿಗಾಗಿ ವಿಲನ್ ಆಗುತ್ತಾಳಾ ಯಾಮಿನಿ?

ಇನ್ನೂ ಈ ಧಾರಾವಾಹಿಯಲ್ಲಿ ಸದ್ಯ ಅಂತಹ ದೊಡ್ಡ ವಿಲನ್ ಯಾರು ಇಲ್ಲ. ಹಾಗಾಗಿ ಯಾಮಿನಿ ವಿಲನ್‌ ಆಗಿ, ಆದಿ ಪಾರು ಪ್ರೀತಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಾಳಾ ಎನ್ನುವ ಅನುಮಾನ ಹುಟ್ಟಿದೆ. ಇತ್ತೀಚೆಗೆ ಆಕೆಯ ಪಾತ್ರವನ್ನು ಕೂಡ ಹಾಗೆ ಕಟ್ಟಿ ಕೊಡಲಾಗುತ್ತಿದೆ.

ಆದಿ ಪಾರು ಮದುವೆಗೆ ಇನ್ನೆಷ್ಟು ತೊಂದಗಳು ಬರಲಿವೆ?

ಆದಿ ಪಾರು ಮದುವೆಗೆ ಇನ್ನೆಷ್ಟು ತೊಂದಗಳು ಬರಲಿವೆ?

ಈಗಾಗಲೇ ನಿತ್ಯವೂ ಆದಿ ಮತ್ತು ಪಾರು ಮದುವೆ ವಿಚಾರದಲ್ಲಿ ಒಂದಲ್ಲಾ, ಒಂದು ವಿಘ್ನ ಎದುರಾಗುತ್ತಲೇ ಇದೆ. ಇದು ಸದ್ಯಕ್ಕೆ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಹಾಗಾಗಿ ಮತ್ತಷ್ಟು ಟ್ವಿಸ್ಟ್‌ಗಳು ಧಾರಾವಾಹಿಯಲ್ಲಿ ಖಂಡಿತವಾಗಿ ಬರುತ್ತವೆ. ಹಾಗಾಗಿ ಯಾಮಿನಿ ಜೊತೆಗೆ ಮತ್ತಷ್ಟು ವಿಲನ್‌ಗಳು ಹುಟ್ಟಿಕೊಂಡರು ಆಶ್ಚರ್ಯ ಇಲ್ಲ. ಆದರೆ ನಿರ್ದೇಶಕನ ತಲೆಯಲ್ಲಿ ಏನಿದೆ ಎನ್ನುವುದನ್ನು ಧಾರಾವಾಹಿಯಲ್ಲಿ ನೋಡಬೇಕು.

More from Filmibeat

English summary
New Villain Entry In New Twist In Zee Kannada Serial 'Paaru', It Trigger The Curiosity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X