ಹನಿಮೂನ್ ಟ್ರಿಪ್‌ನಲ್ಲಿ ತೇಜಸ್ವಿನಿ ಪ್ರಕಾಶ್ ಮತ್ತು ಪತಿ!

By ಪ್ರಿಯಾ ದೊರೆ

ಸ್ಟಂಟ್ ಮ್ಯಾನ್ ವಿನಯ್ ಪ್ರಕಾಶ್ ಪುತ್ರಿ, ಕನ್ನಡದ ನಟಿ ತೇಜಸ್ವಿನಿ ಪ್ರಕಾಶ್ ಸದ್ಯ ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಬಬ್ಲಿ ಹುಡುಗಿ ತೇಜಸ್ವಿನಿ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಸದ್ಯ ಹನಿಮೂನ್ ಟೂರ್‌ನಲ್ಲಿರುವ ತೇಜಸ್ವಿನಿ ಎಂಜಾಯ್ ಮಾಡುತ್ತಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ತೇಜಸ್ವಿನಿ ಹಲವು ಸ್ಟಾರ್ ನಟರ ಜೊತೆಗೆ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಕೆಲ ವರ್ಷಗಳಿಂದ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿರುವ ತೇಜಸ್ವಿನಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿದ್ದರು.

ಎರಡು ವರ್ಷಗಳ ಹಿಂದೆ ತೇಜಸ್ವಿನಿ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ಕಾರಣದಿಂದಾಗಿ ಅವರು ಇಹಲೋಕ ತ್ಯಜಿಸಿದ್ದರು. ಸದ್ಯ ತೇಜಸ್ವಿನಿ ಅವರು ವಿವಾಹವಾಗಿದ್ದು, ನಟನೆಯ ಜೊತೆಗೆ ಹೊಸ ಜೀವನವನ್ನೂ ಆರಂಭಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿನಿ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿನಿ!

ತೇಜಸ್ವಿನಿ ಅವರು ಇತ್ತೀಚೆಗಷ್ಟೆ ವಿವಾಹವಾಗಿದ್ದರು. ತಮ್ಮ ಬಾಲ್ಯದ ಸ್ನೇಹಿತನಾದ ಫಣಿ ವರ್ಮ ನದೀಂಪಳ್ಳಿ ಎಂಬುವರೊಂದಿಗೆ ಹಸೆಮಣೆ ಏರಿದ್ದರು. ವಿವಾಹ ಮಹೋತ್ಸವ ಮಾರ್ಚ್ 20 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಮದುವೆಗೆ ಆಶಿತಾ ಚಂದ್ರಪ್ಪ, ಕಿರುತೆರೆ ನಟಿ ವೀಣಾ ರಾವ್, ನಟಿ ಕಾರುಣ್ಯ ಸೇರಿದಂತೆ ಸೆಲೆಬ್ರಿಟಿಗಳು ಆಗಮಿಸಿದ್ದರು. ಇನ್ನು ಮದುವೆಯ ಅರಿಶಿನ ಶಾಸ್ತ್ರ, ಮುಹೂರ್ತದ ಫೋಟೋಗಳನ್ನು ತೇಜಸ್ವಿನಿ ಪ್ರಕಾಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಪ್ಯಾರಿಸ್‌ಗೆ ಹಾರಿದ ಜೋಡಿ ಹಕ್ಕಿಗಳು!

ಪ್ಯಾರಿಸ್‌ಗೆ ಹಾರಿದ ಜೋಡಿ ಹಕ್ಕಿಗಳು!

ಸದ್ಯ ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ತೇಜಸ್ವಿನಿ ಪ್ರಕಾಶ್ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟೀವ್ ಆಗಿರುತ್ತಾರೆ. ವರ್ಕೌಟ್, ರೀಲ್ಸ್ ಗಳನ್ನು ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ತೇಜಸ್ವಿನಿ ಪ್ರಕಾಶ್ ಅವರು ತಮ್ಮ ಪತಿಯ ಜೊತೆಗೆ ಹನಿಮೂನ್‌ಗೆ ತೆರಳಿದ್ದಾರೆ. ಅದೂ ಕೂಡ ತಮ್ಮ ಇಷ್ಟದ ಸ್ಥಳವಾದ ಪ್ಯಾರಿಸ್‌ಗೆ ಹೋಗಿದ್ದಾರೆ. ತಮ್ಮ ಹನಿಮೂನ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿನಿ ಪ್ರಕಾಶ್ ಅವರು ಅಪ್ ಲೋಡ್ ಮಾಡಿಕೊಂಡಿದ್ದಾರೆ.

ಸ್ಟಾರ್ ನಟರ ಜೊತೆ ಅಭಿನಯ!

ಸ್ಟಾರ್ ನಟರ ಜೊತೆ ಅಭಿನಯ!

2008ರಲ್ಲಿ ತೆರೆಕಂಡ ದರ್ಶನ್ ಅಭಿನಯದ ಗಜ ಚಿತ್ರದ ಮೂಲಕ ತೇಜಸ್ವಿನಿ ಪ್ರಕಾಶ್ ಸ್ಯಾಂಡಲ್‌ವುಡ್ ಗೆ ಪಾದಾರ್ಪಣೆ ಮಾಡಿದರು. ಗಜ ಚಿತ್ರದಲ್ಲಿ ಪಾತ್ರವೊಂದರಲ್ಲಿ ತೇಜಸ್ವಿನಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ವಿಷ್ಣುವರ್ಧನ್ ಅಭಿನಯದ ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಬಂಧು ಬಳಗ, ನಿತ್ಯ ಜತೆ ಸತ್ಯ, ಅರಮನೆ ಮೊದಲಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಇತ್ತೀಚೆಗೆ ರಾಬರ್ಟ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಟಿಸಿದ್ದಾರೆ. ಇನ್ನು ಕನ್ನಡ, ತೆಲುಗು ಸೇರಿದಂತೆ ಇದುವರೆಗೂ 22 ಚಿತ್ರಗಳಲ್ಲಿ ತೇಜಸ್ವಿನಿ ಅವರು ನಟಿಸಿದ್ದಾರೆ.

ಕಿರುತೆಯಲ್ಲೂ ತೇಜಸ್ವಿನಿ ಹವಾ!

ಕಿರುತೆಯಲ್ಲೂ ತೇಜಸ್ವಿನಿ ಹವಾ!

ಕಳೆದ ಕೆಲ ವರ್ಷಗಳ ಹಿಂದೆ ಕಿರುತೆರೆಗೂ ಎಂಟ್ರಿ ಕೊಟ್ಟ ತೇಜಸ್ವಿನಿ ಪ್ರಕಾಶ್ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ನಿಹಾರಿಕಾ ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಇದೀಗ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ತೇಜಸ್ವಿನಿ ಅವರು ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ತೇಜಸ್ವಿನಿ ಅವರ ಜೊತೆಗೆ ನಟ ಜಯರಾಮ್ ಕಾರ್ತಿಕ್, ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

More from Filmibeat

English summary
Newly Married Actress Tejaswini Prakash Enjoying Honeymoon With Husband, Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X