»   » ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?

ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?

Posted By:
Subscribe to Filmibeat Kannada

ಕನ್ನಡ ಸುದ್ದಿ ವಾಹಿನಿಗಳನ್ನ ತಪ್ಪದೇ ನೋಡುವವರಿಗೆ ನಿರೂಪಕ ಚಂದನ್ ಶರ್ಮಾ ಪರಿಚಿತ. ಬಿಟಿವಿ ವಾಹಿನಿಯಲ್ಲಿ ನ್ಯೂಸ್ ಆಂಕರ್ ಆಗಿ ಗುರುತಿಸಿಕೊಂಡಿರುವ ಚಂದನ್ ಶರ್ಮಾ, ಕಳೆದ ಕೆಲ ದಿನಗಳಿಂದ ಟಿವಿ ಪರದೆ ಮೇಲೆ ಪತ್ತೆ ಆಗಿಲ್ಲ.

ಹೇಗಿದ್ರೂ 'ಬಿಗ್ ಬಾಸ್ ಕನ್ನಡ-4' ಶುರು ಆಗ್ತಿದ್ಯಲ್ಲಾ...ಕಳೆದ ವರ್ಷ ಟಿವಿ9 ವಾಹಿನಿಯಿಂದ ರೆಹಮಾನ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ಹಾಗೆ, ಈ ಬಾರಿ ಪ್ರಾಬಬ್ಲಿ, ಚಂದನ್ ಶರ್ಮಾ ದೊಡ್ಮನೆಗೆ ಎಂಟ್ರಿಕೊಡ್ಬಹುದು ಅಂತ ಕೆಲವರು ಊಹಿಸಿದ್ರೇನೋ...ಆದ್ರೆ ವಾಸ್ತವ ಅದಲ್ಲ.

News Anchor Chandan Sharma to make Sandalwood Debut

ನಿರೂಪಕ ಚಂದನ್ ಶರ್ಮಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಭಿನ್ನ, ಗಟ್ಟಿ ಕಥೆಯುಳ್ಳ ಕನ್ನಡ ಚಿತ್ರದ ಮೂಲಕ 'ಹೀರೋ' ಆಗಲು ನಿರ್ಧರಿಸಿದ್ದಾರೆ. [ಸಿನಿಮಾ ವರದಿಗಾರರೇ 'ಸಿನಿಮಾ' ಹೀರೋಗಳಾಗವ್ರೆ.!]

News Anchor Chandan Sharma to make Sandalwood Debut

ಈ ಕುರಿತು ಚಂದನ್ ಶರ್ಮಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರೂ, ಅವರು ಅಭಿನಯಿಸುತ್ತಿರುವ ಚಿತ್ರದ ಬಗ್ಗೆ 'ಗುಟ್ಟು' ಬಿಟ್ಟುಕೊಟ್ಟಿಲ್ಲ. [ವಿಶೇಷ ವರದಿ: ನ್ಯೂಸ್ ಚಾನೆಲ್ ವರದಿಗಾರರ ಗೋಳು ಕೇಳೋರು ಯಾರು.?]

ಒಂದ್ ಸಲಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ರೆ, ಹಳೇ ಕೆಲಸಕ್ಕೆ ಮರಳುವುದು ಡೌಟೇ. ಆದರೂ, 'ಪತ್ರಿಕೋದ್ಯಮ ನನ್ನ ಉಸಿರು. ಬಿಟಿವಿಯಿಂದ ಹೊರ ಹೋಗುವ ಪ್ರಶ್ನೆಯೇ ಇಲ್ಲ' ಎಂಬುದನ್ನೂ ಚಂದನ್ ಶರ್ಮಾ ಕ್ಲಿಯರ್ ಮಾಡಿದ್ದಾರೆ.

English summary
BTV News Anchor Chandan Sharma has taken his Facebook Account to announce his Sandalwood Debut. More details are awaited.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada