ಅಮ್ಮಂದಿರನ್ನು ಕಂಡು ಚಿಕ್ಕಮಕ್ಕಳಂತೆ ಅತ್ತ ಅನುಶ್ರೀ, ನಿಕಿತಾ
ನಟಿ ನಿಕಿತಾ ಅವರ ತಾಯಿ ನವೀಂದರ್ ತುಕ್ರಾಲ್ ಅವರನ್ನೂ ಕರೆಸಿ ಅವರಿಗೂ ಸರ್ ಪ್ರೈಸ್ ಕೊಟ್ಟರು. ನಿಕಿತಾ ಅವರಂತೂ ತಮ್ಮ ತಾಯಿಯನ್ನು ಕಂಡು ಚಿಕ್ಕಮಕ್ಕಳಂತೆ ಕುಣಿದಾಡಿ ಅತ್ತು ಕರೆದು ಬರಮಾಡಿಕೊಂಡರು. ಮನೆಯಲ್ಲಿ ಎಲ್ಲರೂ ಸೌಖ್ಯವನ್ನು ವಿಚಾರಿಸಿದರು. ಬುಲ್ ಬುಲ್ ಎಂದು ತಮ್ಮ ಒಡಹುಟ್ಟಿದವರನ್ನು ವಿಚಾರಿಸಿಕೊಂಡರು.
ಬಳಿಕ ಬಂದರು ಅನುಶ್ರೀ ಅವರ ತಾಯಿ ಶಶಿಕಲಾ. ತಮ್ಮ ತಾಯಿಯನ್ನು ಕಂಡು ಅನುಶ್ರೀ ಪಾಕಿಸ್ತಾನದಿಂದ ಬಿಡುಗಡೆಯಾದ ಖೈದಿಯಂತೆ ಆಡಿಬಿಟ್ಟರು. ಒಂದೇ ಒಂದು ಮಾತನ್ನೂ ಆಡದೇ ಸಂಪೂರ್ಣ ಸಮಯವನ್ನೂ ಕಣ್ಣೀರಿನಲ್ಲೇ ಮುಗಿಸಿಬಿಟ್ಟರು. ಎಷ್ಟು ಸಮಾಧಾನಪಡಿಸಿದರೂ ಅವರ ಅಳು ನಿಲ್ಲಲೇ ಇಲ್ಲ.

ಶಶಿಕಲಾ ಅವರು ಕನ್ಫೆಷನ್ ರೂಮಿನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಗಳನ್ನು ನೋಡಿದಾಗ ಮೊದಲು ದುಃಖ ಆಯ್ತು. ನಾನೂ ಅತ್ತರೆ ಅವಳು ಇನ್ನೂ ಅಳುತ್ತಾಳೆ ಎಂದು ಭಾವಿಸಿ ಅದನ್ನು ತೋರ್ಪಡಿಸಲಿಲ್ಲ ಎಂದು ಹೇಳಿಕೊಂಡರು. ಬಳಿಕ ಶಶಿಕಲಾ ಅವರು ಅಲ್ಲಿಂದ ನಿರ್ಗಮಿಸಿದರು.
ಬಿಗ್ ಬಾಸ್ ಮನೆಯಲ್ಲಿ ವಿರಹ ವೇದನೆಯಿಂದ ಬಳಲುತ್ತಿದ್ದ ಮತ್ತೊಬ್ಬ ಸ್ಪರ್ಧಿ ಎಂದರೆ ಅರುಣ್ ಸಾಗರ್. ಅವರ ಪ್ರಾಬ್ಲಂ ಸಹ ಬಿಗ್ ಬಾಸ್ ಗೆ ಅರ್ಥವಾಗಿತ್ತು ಅನ್ನಿಸುತ್ತದೆ. ಅರುಣ್ ಅವರ ಪತ್ನಿ ಮೀರಾ ಅವರನ್ನೂ ಕರೆಸಿದ್ದರು. ಪತ್ನಿಯನ್ನು ನೋಡಿ ಒಮ್ಮೆಲೆ ಹಂಡ್ರಡ್ ವ್ಯಾಟ್ಸ್ ಬಲ್ಪ್ ನಂತಾದರು ಅರುಣ್ ಸಾಗರ್.


Click it and Unblock the Notifications











