ಯೋಗೀಶ್ ಕಂಕುಳ ಕೆಳಗೆ ನೋಡಿದ ನಿಕಿತಾ
ಮನೆಯಲ್ಲಿ ನೀರಿಲ್ಲದೆ ಪರಿತಪಿಸಿದ ಎಲ್ಲರೂ ಸ್ನಾನವನ್ನೂ ಮಾಡದೆ ಹಾಗೆಯೇ ಕಾಲ ತಳ್ಳಿದರು. ಇದೆಲ್ಲಕ್ಕೂ ನಾನೇ ಕಾರಣ ಎಂದು ನಿಕಿತಾ ಕಣ್ಣೀರಿಟ್ಟರು. ಆಕೆಯನ್ನು ಸಮಾಧಾನ ಪಡಿಸಿದ ರಾಘು.
ಇನ್ನೊಂದು ಕಡೆ ನೀರಿಲ್ಲದೆ ತೇವದ ಬಟ್ಟೆಯಲ್ಲಿ ಮೈಕೈ ಒರೆಸಿಕೊಳ್ಳುತ್ತಿದ್ದ ಯೋಗಿ ಹಾಗೂ ರಾಘುಗೆ ನಿಕಿತಾ ಸಹಾಯ ಮಾಡಿದರು. ಯೋಗಿ ಕಂಕುಳ ಕೆಳಗೆ ನೋಡಿ ಓಕೆ ಎಂದರು ನಿಕಿತಾ. ರಾಘುಗೆ ಕಂಕುಳ ಕೆಳಗೆ ಕ್ಲೀನ್ ಮಾಡಿಕೊಳ್ಳಲು ಸಹಕರಿಸಿ ಬಳಿಕ ಬೆನ್ನು, ಮೈ ಕೈ ಒರೆಸಿ ಶುಚಿ ಮಾಡಿದರು.

ಮನೆಯಲ್ಲಿ ನೀರಿನ ಹಾಹಾಕಾರ ಮೇರೆ ಮೀರಿ ನರೇಂದ್ರ ಬಾಬು ಶರ್ಮಾ ಅವರಂತೂ ಕಂಗಾಲಾಗಿ ಹೋಗಿದ್ದರು. ಇದೇ ಸಂದರ್ಭದಲ್ಲಿ ತಾನು ಬಾಡಿಗೆ ಮನೆಯಲ್ಲಿದಾಗ ನೀರು ಹೊರೆದ ಘಟನೆಯನ್ನೂ ನೆನಪಿಸಿಕೊಂಡರು. ಕಡೆಗೂ ನೀರು ಬರದೆ ಇದ್ದಾಗ ಕ್ಯಾಮೆರಾ ಮುಂದೆ ನಿಂತು ಅಲವತ್ತುಕೊಂಡರು...
ಬಿಗ್ ಬಾಸ್ ನೀರು ಬಿಡಪ್ಪ. ತೊಳೆದುಕೊಳ್ಳೇದ್ದಕ್ಕೆ ಬೇಡವೆ... ವಾಸನೆ ಬಂದುಬಿಡುತ್ತದೆ...ಅಯ್ಯೋ ಕರ್ಮ. ಮೂರು ಬಕೆಟ್ ನೀರು ಕೊಟ್ಟುಬಿಡು ನನಗೆ ಸಾಕು. ಒಂದು ತೊಳೆದುಕೊಳ್ಳಲು, ಇನ್ನೆರಡು ಸ್ನಾನಕ್ಕೆ ಎಂದು ಶರ್ಮಾ ಗೋಗರೆದರು. ಆದರೂ ಬಿಗ್ ಬಾಸ್ ಗೆ ಮನಸ್ಸು ಕರಗಲಿಲ್ಲ.


Click it and Unblock the Notifications











