ಬಿಗ್ ಬಾಸ್ ಗೆ ಯಾಮಾರಿಸಿ ಯೋಗಿ, ನಿಕ್ಕಿ ಕಣ್ಣಾಮುಚ್ಚಾಲೆ
ಇನ್ನೊಂದು ಕಡೆ ನಿಕಿತಾ ಹಾಗೂ ಯೋಗೀಶ್ ಅವರು ತಮಗೆ ಕೊಟ್ಟಿದ್ದ ಮೈಕ್ ಗೂ ಗೊತ್ತಾಗದಂತೆ ಕಿವಿಯಲ್ಲಿ ಅದೇನೋ ಗುಟ್ಟಾಗಿ ಮಾತನಾಡಿಕೊಂಡರು. ಒಟ್ಟಿನಲ್ಲಿ ಇವರಿಬ್ಬರೂ ಬಿಗ್ ಬಾಸನ್ನೇ ಯಾಮಾರಿಸಿದ್ದು ಇನ್ನೊಂದು ವಿಶೇಷ. ಆದರೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದರು ಬಿಡಿ.
ಇನ್ನೊಂದು ಕಡೆ ರಿಷಿಕಾ ಬಗ್ಗೆ ಹೊಗಳಿದ ಚಂದ್ರಿಕಾ, ಏನ್ ಡಿಸಿಪ್ಲೀನ್ಡ್ ಹುಡುಗಿ ಎಂದರು. ಆದರೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಾತ್ರ ಅವರ ಹೆಸರನ್ನೇ ಸೂಚಿಸಿದರು. ಈ ಮನೆಗೆ ಬಂದು ಇಷ್ಟು ದಿನ ಆಗಿದೆ ಇನ್ನೂ ನೆಟ್ಟಗೆ ಕನ್ನಡ ಕಲಿಯಕ್ಕೆ ಆಗಿಲ್ಲ. ನಿಕಿತಾರಂತಹ ಹುಡುಗಿಯರನ್ನು ಕನ್ನಡಿಗರು ಬೆಂಬಲಿಸುತ್ತಾರಲ್ಲಾ ಅವರಿಗೆ ದೊಡ್ಡ ನಮಸ್ಕಾರ ಎಂದು ಕೈಮುಗಿದರು.

ಬಿಗ್ ಬಾಸ್ ಮನೆಯಲ್ಲಿ ಒಂದೇ ಒಂದು ಹನಿ ನೀರಿಲ್ಲದಂತಾಗಿ ಎಲ್ಲರೂ ವಿಲವಿಲ ಎಂದು ಒದ್ದಾಡಬೇಕಾಯಿತು. ಶಿಕ್ಷೆಯ ಬಿಸಿ ಚೆನ್ನಾಗಿ ತಟ್ಟಿದ್ದು ಮಾತ್ರ ನರೇಂದ್ರ ಬಾಬು ಶರ್ಮಾ ಅವರಿಗೆ. ಅವರು ಕ್ಯಾಮೆರಾ ಮುಂದೆ ನಿಂತು, "ನೋಡಪ್ಪಾ ಬಿಗ್ ಬಾಸ್ ಅವರ್ಯಾರೋ ಮಾಡಿದ ಕರ್ಮಕ್ಕೆ ನಮಗೆಲ್ಲಾ ಶಿಕ್ಷೆ ಕೊಡೋದು ತಪ್ಪು. ನಾಳೆ ಬೆಳಗ್ಗೆ ಸ್ನಾನ ಮಾಡಬೇಕು. ಎರಡು ಬಕೆಟ್ ನೀರು ಕೊಟ್ಟು ಪುಣ್ಯ ಕಟ್ಟಿಕೋ" ಎಂದು ಒಂಥರಾ ಬೆದರಿಕೆ ಹಾಕಿದರು.
ಆದರೂ ಬಿಗ್ ಬಾಸ್ ಮನಸ್ಸು ಕರಗಲಿಲ್ಲ. ಮನೆಯಲ್ಲಿ ನೀರಿಲ್ಲದೆ ಎಲ್ಲರೂ ಪರಿತಪಿಸುವಂತಾಯಿತು. ಕಡೆಗೂ ಒಂದೆರಡು ಬಕೆಟ್ ನೀರು ಬಿಟ್ಟು ಹೋದ ಜೀವ ಬಂದಂತೆ ಮಾಡಿದ ಬಿಗ್ ಬಾಸ್. ಆದರೂ ಮನೆಯಲ್ಲಿ ನೀರಿನ ಅಭಾವದ ಕಾರಣ ಎಲ್ಲರೂ ಸುಸ್ತಾಗಿದ್ದರು. ಇದ್ದ ಅಲ್ಪಸ್ವಲ್ಪ ನೀರಿನಲ್ಲೇ ಶೌಚ ಕರ್ಮಗಳನ್ನು ಮುಗಿಸಿದರು.


Click it and Unblock the Notifications











