Samprutvi: ಹೊಸ ಕಾರು ಖರೀದಿಸಿದ 'ನಿನಗಾಗಿ' ಡೈರೆಕ್ಟರ್; ನಮ್ಮಪ್ಪನ ದುಡ್ಡು ಅಲ್ವೇ ಅಲ್ಲ ಎಂದ ಸಂಪೃಥ್ವಿ!
ಕಲರ್ಸ್ ಕನ್ನಡದಲ್ಲಿ 'ನಿನಗಾಗಿ' ಧಾರಾವಾಹಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಸೀರಿಯಲ್ ಶುರುವಾಗಿ ಸುಮಾರು ತಿಂಗಳೇ ಕಳೆದಿವೆ. ಆರಂಭದಿಂದಲೂ ಧಾರಾವಾಹಿ ತೆಗೆದುಕೊಂಡು ಹೋಗುತ್ತಿರುವ ರೀತಿ ಎಲ್ಲಿಯೂ ಬೋರ್ ಎನಿಸುತ್ತಿಲ್ಲ. ಕಥೆ ಕೂಡ ಡ್ರ್ಯಾಗ್ ಮಾಡ್ತಾ ಇದಾರೆ ಎನಿಸುತ್ತಿಲ್ಲ. ಅಂದಿನ ಎಪಿಸೋಡ್‌ಗೆ ಎಷ್ಟು ಬೇಕೋ ಅಷ್ಟನ್ನೇ ತೋರಿಸುತ್ತಾರೆ. ಇದು ಸಂಪೃಥ್ವಿ ಅವರ ಕಲೆ.
'ನಿನಗಾಗಿ' ಧಾರಾವಾಹಿಯನ್ನು ನಿರ್ದೇಶನ ಮಾಡ್ತಾ ಇರೋದು ಸಂಪೃಥ್ವಿ. ಈಗಾಗಲೇ ಕೆಲ ಧಾರಾವಾಹಿಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಸ್ಟಾರ್ ಸುವರ್ಣದಲ್ಲಿ 'ನಮ್ಮ ಲಚ್ಚಿ' ಧಾರಾವಾಹಿ ನಿರ್ದೇಶನ ಮಾಡಿದ್ದರು. ಅದು ಕೂಡ ಹಿಟ್ ಆಗಿತ್ತು. ಈಗ 'ನಿನಗಾಗಿ' ಯಶಸ್ವಿ ಧಾರಾವಾಹಿಯಾಗಿದೆ.

ಕಾರು ಖರೀದಿಸಿದ ಸಂಪೃಥ್ವಿ
'ನಿನಗಾಗಿ' ನಿರ್ದೇಶಕ ಸಂಪೃಥ್ವಿಯ ಕನಸೊಂದು ನನಸಾಗಿದೆ. ಅದು ಕಾರು ತೆಗೆದುಕೊಳ್ಳ ಬೇಕೆನ್ನುವುದು. ಈಗಾಗಲೇ ಸಾಕಷ್ಟು ಹಿಟ್ ಧಾರಾವಾಹಿಗಳನ್ನು ಕೊಟ್ಟಿದ್ದರು, ಸಂಪೃಥ್ವಿ ಅವರು ಕಾರು ತೆಗೆದುಕೊಳ್ಳಲು ಆಗಿರಲಿಲ್ಲ. ಇದೀಗ ಮೊದಲ ಕಾರನ್ನ ಖರೀದಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮಿಷ್ಟದ ಕಾರಿನ ಮುಂದೆ ನಿಂತು ವಿಭಿನ್ನವಾದ ಪೋಸ್ ನೀಡಿದ್ದಾರೆ. ಆ ಸಂತಸ ಸಂಪೃಥ್ವಿ ಮುಖದಲ್ಲಿ ಎದ್ದು ಕಾಣಿಸುತ್ತಿದೆ.
ಸ್ವಂತ ದುಡಿಮೆಯಲ್ಲಿ ಕಾರು ಖರೀದಿ
ಸಂಫೃಥ್ವಿ ಕಾರಿನ ಜೊತೆಗೆ ಫೋಟೋಗಳನ್ನು ಹಾಕಿದ್ದು ಅದರ ಜೊತೆಗೆ ಸಖತ್ ಸಾಲುಗಳನ್ನು ಬರೆದಿದ್ದಾರೆ. 'Welcome home you black beauty. ನಮಪ್ಪನ ದುಡ್ಡು ಅಂತೂ ಅಲ್ವೇ ಅಲ್ಲ Bro! ಒದ್ದಾಡಿಕೊಂಡು, ಗುದ್ದಾಡಿಕೊಂಡು, ಮುದ್ದಾಡಿಕೊಂಡು ಸಂಪಾದನೆ ಮಾಡಿರೊ first car' ಎಂದು ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮಪ್ಪನ ದುಡ್ಡಲ್ಲಿ ಶೋಕಿ ಮಾಡೋದಲ್ಲ ಎಂಬ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಅದಕ್ಕೆ ಟ್ರೆಂಡಿಂಗ್ ಎಂಬಂತೆಯೂ ಹಾಕಿರುವ ಸಂಪೃಥ್ವಿ ತಾವೂ ಇಷ್ಟು ವರ್ಷ ಕಷ್ಟ ಪಟ್ಟ ಹಣದಲ್ಲಿ ತೆಗೆದುಕೊಂಡಿದ್ದೇನೆ ಎಂಬುದನ್ನು ಹೇಳಿದ್ದಾರೆ.
ಅಭಿಮಾನಿಗಳು ಏನಂದ್ರು..?
ಅಭಿಮಾನಿಗಳು ಸಂಪೃಥ್ವಿ ಅವರಿಗೆ ಕಮೆಂಟ್ ಮೂಲಕ ವಿಶ್ ತಿಳಿಸಿದ್ದಾರೆ. 'ಇದು ಇದು ಹಗಲು ರಾತ್ರಿ ದುಡಿದ್ದಕ್ಕೆ ಸಿಕ್ಕ ಬೋನಸ್. ಪೃಥ್ವಿ. ನಿಮ್ಮದೇ ವಾಹನದಲ್ಲಿ ಸುಖಪ್ರಯಾಣ ಮಾಡಿ. ದೇವರು ಇನ್ನೂ ಇನ್ನೂ ನಿಮ್ಮನ್ನು ಆಶೀರ್ವದಿಸಲಿ. ಸ್ವಂತ ದುಡ್ಡಲ್ಲಿ ಇಷ್ಟವಾದ ವಸ್ತುಗಳನ್ನು ತೆಗೆದುಕೊಳ್ಳುವುದರಲ್ಲಿ ಎಷ್ಟು ಖುಷಿ ಇರುತ್ತೆ ಅಲ್ವಾ' ಅಂತೆಲ್ಲಾ ಸಂಪೃಥ್ವಿ ಅವರಿಗೆ ಹುಮ್ಮಸ್ಸು ತುಂಬುತ್ತಿದ್ದಾರೆ.
ಜೀವ ಮನೆಯಲ್ಲಿ ರಚ್ಚು ಗಲಾಟೆ
ಇನ್ನು 'ನಿನಗಾಗಿ' ಧಾರಾವಾಹಿ ಕೂಡ ಅದ್ಭುತವಾಗಿ ರೆಸ್ಪಾನ್ಸ್ ಪಡೆಯುತ್ತಿದೆ. ರಚನಾಳನ್ನು ದುಡಿಮೆಯ ಯಂತ್ರ ಮಾಡಿಕೊಂಡಿರುವ ವಜ್ರೇಶ್ವರಿ ಒಲ್ಲದ ಮದುವೆ ಮಾಡಲು ಹೊರಟಿದ್ದಳು. ಆದರೆ ವಿಧಿ ಬೇರೆನೆ ಹೆಸರು ಬರೆದಿದೆ. ಆ ಕಾರಣಕ್ಕೇನೆ. ರಚನಾಳ ಮದುವೆ ತಪ್ಪಿಸಲು ಜೀವ ಕೂಡ ಹೋಗಿದ್ದ. ಈಗ ರಚನಾ, ಜೀವ ಮನೆಯಲ್ಲಿಯೇ ಇದ್ದಾಳೆ. ಅಷ್ಟು ಕಷ್ಟಪಟ್ಟಿದ್ದ ಜೀವನಿಗೆ ಒಂದುಮಾತು ಹೇಳದೆ ರಚನಾ ತಪ್ಪಿಸಿಕೊಂಡಿದ್ದಳು. ಅಷ್ಟೇ ಅಲ್ಲ ಮನೆಗೆ ಬಂದಾಗಲೂ ರಚನಾ ಇರುವ ವಿಚಾರವನ್ನು ಹೇಳಿರಲಿಲ್ಲ. ಅಶ್ವಿನ್ ಮುಂದೆ ಇನ್ನೇನು ಲಾಕ್ ಆಗುತ್ತಿದ್ದ. ಇದೆಲ್ಲ ಕಂಡು ಕೋಪಗೊಂಡಿರುವ ಜೀವ, ರಚನಾ ಮೇಲೆ ಕೋಳಿ ಜಗಳ ಶುರು ಮಾಡಿದ್ದಾನೆ.


Click it and Unblock the Notifications











