ಸೀರಿಯಲ್ ಡೈರೆಕ್ಟರ್‌ಗೆ ಸಿಕ್ಕಿತ್ತು ಸಿಎಂ ಸಿದ್ದರಾಮಯ್ಯರನ್ನು ಡೈರೆಕ್ಟ್ ಮಾಡುವ ಅವಕಾಶ!
ಕಲರ್ಸ್ ಕನ್ನಡದಲ್ಲಿ 'ನಿನಗಾಗಿ' ಸೀರಿಯಲ್ ಈಗಂತು ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳು, ಟ್ವಿಸ್ಟ್ ಅಂಡ್ ಟರ್ನಿಂಗ್ ಎಲ್ಲರನ್ನು ಹಿಡಿದಿಟ್ಟುಕೊಂಡಿದೆ. ಕೃಷ್ಣಾ ಎಂಬ ಮಗುವಿಗಾಗಿ ಸೂಪರ್ ಸ್ಟಾರ್ ರಚನಾ ಹೇಗೆಲ್ಲಾ ಬದಲಾಗುತ್ತಾರೆ ಎಂಬ ಕಥೆ. ಆದರೆ ರಚನಾ ಹಾಗೂ ಜೀವ ತಮಗೆ ಆಗಿರುವ ಸುಳ್ಳು ಮದುವೆಯನ್ನು ಜೋಪಾನವಾಗಿ ಕಾಪಾಡುವುದೇ ದೊಡ್ಡ ಕೆಲಸವಾಗಿಬಿಟ್ಟಿದೆ.
ದಿವ್ಯಾ ಉರುಡುಗ ಅವರಿಗೆ ಈ ಸೀರಿಯಲ್ ಒಳ್ಳೆ ಕಮ್ ಬ್ಯಾಕ್ ಕೂಡ ಆಗಿದೆ. ದಿವ್ಯಾ ಅವರನ್ನ ರಚನಾ ಪಾತ್ರದ ಮೂಲಕ ತೋರಿಸಿದ್ದಾರೆ. ಒಂದು ವಿಭಿನ್ನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಿನಗಾಗಿ ಸೀರಿಯಲ್ ನಿರ್ದೇಶಕ ಸಂಪೃಥ್ವಿ. ಈಗಾಗಲೇ ಹಲವು ಹಿಟ್ ಧಾರಾವಾಹಿಗಳನ್ನು ಕೊಟ್ಟಿರುವ ಖ್ಯಾತಿ ಇವರದ್ದು. ಅದರಲ್ಲೂ ಇವರ ಧಾರಾವಾಹಿಯಲ್ಲಿ ಮಕ್ಕಳೇ ಹೈಲೇಟ್. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ನಮ್ಮ 'ಲಚ್ಚಿ' ಧಾರಾವಾಹಿಯನ್ನು ನಿರ್ದೇಶಿಸಿದವರು ಇವರೆ.

ಸಿಎಂ ಜೊತೆಗೆ ಸಂಪೃಥ್ವಿ ನೆನಪುಗಳು
ಸೋಷಿಯಲ್ ಮೀಡಿಯಾಗಳೇ ಹಾಗೆ. ಮರೆತೋದಾ ಎಷ್ಟೋ ವಿಚಾರಗಳನ್ನ ನೆನಪು ಮಾಡಿ ಬಿಡುತ್ತವೆ. ಯಾವತ್ತೋ ಅಪ್ಲೋಡ್ ಮಾಡಿದ್ದ ಫೋಟೋಗಳನ್ನ ಮತ್ತೆ ರಿಮೈಂಡ್ ಮಾಡಿಸುತ್ತವೆ. ಅಂಥದ್ದೊಂದು ಸುಂದರ ನೆನಪು ಸಂಪೃಥ್ವಿ ಅವರಿಗೆ ಮರುಕಳುಹಿಸುವಂತೆ ಮಾಡಿರೋದು ಫೇಸ್ಬುಕ್. ಸಿಎಂ ಸಿದ್ದರಾಮಯ್ಯ ಅವರ ಜೊತೆಗಿನ ಫೋಟೋವನ್ನು ಅದು ನೆನಪಿಸಿದೆ.
ಡೈರೆಕ್ಷನ್ ಬಗ್ಗೆ ಹೇಳಿದ್ದೇನು?
ಸಂಪೃಥ್ವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಜೊತೆಗಿನ ಫೋಟೋ ಹಂಚಿಕೊಂಡು ಕ್ಯಾಪ್ಶನ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಡೈರೆಕ್ಟ್ ಮಾಡುವ ಅವಕಾಶ ಸಿಕ್ಕಿತ್ತು ಎಂದು ಬರೆದುಕೊಂಡಿದ್ದಾರೆ. ಇದರ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ ಸಂಪೃಥ್ವಿ, 2017ರಂದು ತೆಗೆದ ಫೋಟೋಗಳು ಅವರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಅವರಿಂದ ಒಂದು ಬೈಟ್ ತೆಗೆದುಕೊಂಡು, ಅದನ್ನ ಎಲ್ಲಾ ಥಿಯೇಟರ್‌ನಲ್ಲಿ ಪ್ರಸಾರ ಮಾಡುವುದಾಗಿತ್ತು. ಅದನ್ನ ನಾನೇ ಡೈರೆಕ್ಟ್ ಮಾಡಿದ್ದೆ' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಅಂದಿನ ದಿನಗಳನ್ನು ನೆನೆದ ನಿರ್ದೇಶಕ
ಯಾರಾದ್ರೂ ಸಿಎಂ ಮೀಟ್ ಮಾಡಬೇಕು ಅಂದ್ರೆ ಒಬ್ಬ ಸಾಮಾನ್ಯ ವ್ಯಕ್ತಿಗೆ ಆಗೋದೆ ಇಲ್ಲ. ಆದರೆ ನಾನು ಆರಾಮವಾಗಿ ಹೋಗಿ ಅವರನ್ನು ಮುಟ್ಟಿ ಮತಾಡಿಸಿಕೊಂಡು ಬಂದೇ ಬಿಟ್ಟೆ. ನಂಗೆ ಆ ದಿನಗಳನ್ನ ಈಗ ನೆನೆದರೂ ಮೈಝುಮ್ ಅನ್ನುತ್ತೆ. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ, ಮಾತಾಡಿಸಿದ್ದೀನಿ. ಆ ನೆನಪುಗಳನ್ನ ಫೇಸ್ಸುಕ್ ಈಗ ನೆನಪಿಸಿತು. ಅದಕ್ಕೆ ಹಂಚಿಕೊಂಡೆ.
ಖ್ಯಾತನಾಮರನ್ನು ಡೈರೆಕ್ಟ್ ಮಾಡಿದ ಖುಷಿ
ಜಯಂತಿ ಅಮ್ಮ ಅವರಿಗೂ ಶ್ರೀನಾಥ್ ಸರ್ ಅವರನ್ನೆಲ್ಲ ಡೈರೆಕ್ಟ್ ಮಾಡಿದ್ದೀನಿ. ಒಮ್ಮೆ ಹಿಂದೆ ತಿರುಗಿ ನೋಡಿದರೆ ಇಷ್ಟು ದೊಡ್ಡ ದಂತಕಥೆಗಳನ್ನೆಲ್ಲಾ ನಾನು ಡೈರೆಕ್ಟ್ ಮಾಡಿದ್ದೀನಾ ಎಂಬ ಆಶ್ಚರ್ಯವಾಗುತ್ತೆ. ಜೊತೆಗೆ ಖುಷಿಯೂ ಆಗುತ್ತೆ. ಸದ್ಯಕ್ಕೆ 'ನಿನಗಾಗಿ' ಧಾರಾವಾಹಿಯನ್ನ ಮಾಡ್ತಾ ಇದ್ದೀನಿ. ಜನರಿಂದ ಕೂಡ ಒಳ್ಳೆ ರೆಸ್ಪಾನ್ಸ್ ಸಿಗುತ್ತಾ ಇದೆ. ಅದರ ನಡುವೆ ಈ ಫೋಟೋಗಳು ಮನಸ್ಸಿಗೆ ಮುದ ನೀಡಿದವು. ಅದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡೆ ಎಂದು ನಿರ್ದೇಶಕ ಸಂಪೃಥ್ವಿ ತಿಳಿಸಿದ್ದಾರೆ.


Click it and Unblock the Notifications











