Ninagagi: ಜಗತ್ತಿನ ಬೆಸ್ಟ್ ಗೋಬಿ ರೆಸ್ಟೋರೆಂಟ್ ಇಲ್ಲಿದೆ ನೋಡಿ; ತಿನ್ಬೇಕು ಅಂದ್ರೆ ಡೈರೆಕ್ಟರ್ ಪರ್ಮಿಷನ್ ಬೇಕು..!
ಕಲರ್ಸ್ ಕನ್ನಡದಲ್ಲಿ 'ನಿನಗಾಗಿ' ಧಾರಾವಾಹಿ ಎಲ್ಲರ ಮನತಟ್ಟಿದೆ. ಯಾಕಂದ್ರೆ ಅಲ್ಲೊಂದು ಅಮ್ಮ ಮಗಳ ಎಮೋಷನಲ್ ಕಥೆಯಿದೆ. ಹೆತ್ತ ತಾಯಿಯೇ ಅಲ್ಲದೇ ಹೋದರೂ ಆ ಮಗುವಿಗಾಗಿ ಅವಳ ಮನಸ್ಸು ಮಿಡಿದಿದೆ. ಒಂದು ಹೆಣ್ಣಿನಲ್ಲಿ ಸಾಮಾನ್ಯವಾಗಿಯೇ ಒಬ್ಬಳು ತಾಯಿ ಇರುತ್ತಾಳೆ. ತಾಯಿಯ ಪ್ರೀತಿ ತೋರುವ ಸಮಯ ಬಂದಾಗ ಆ ತಾಯಿಯ ಭಾವನೆ ಹೊರಗೆ ಬರಲಿದೆ. ಈಗ ನಿನಗಾಗಿ ಧಾರಾವಾಹಿಯಲ್ಲೂ ಅದೇ ಆಗುತ್ತಿರೋದು.
ಕೃಷ್ಣಾಳಿಗೆ ಹುಟ್ಟಿದಾಗಿನಿಂದ ತಾಯಿ ಇಲ್ಲ. ತಾಯಿ ಪ್ರೀತಿ ಹೇಗಿರುತ್ತೆ ಎಂಬ ಕಲ್ಪನೆಯೂ ಅವಳಿಗಿಲ್ಲ. ಹಾಗಂತ ತಂದೆ ಹೇಗೆ ಬೇಕೋ ಹಾಗೇನು ನೋಡಿಕೊಳ್ಳುತ್ತಿಲ್ಲ. ಇಬ್ಬರ ಪ್ರೀತಿಯನ್ನು ಒಬ್ಬನೇ ಕೊಟ್ಟಿದ್ದಾನೆ. ಅಮ್ಮ ಬೇಕು ಎಂದಾಗೆಲ್ಲಾ ಜೀವ ಮಗಳನ್ನು ಸಂಭಾಳಿಸುವುದಕ್ಕೆ ಅಮ್ಮ ಸ್ಟಾರ್ ಆಗಿದ್ದಾಳೆ. ಭೂಮಿಹೆ ಬರಲ್ಲ ಎಂದೇ ಹೇಳಿದ್ದಾನೆ. ಆದರೆ ಸೂಪರ್ ಸ್ಟಾರ್ ರಚನಾಳನ್ನೇ ಈಗ ಕೃಷ್ಣಾ ತನ್ನ ತಾಯಿಯೆಂದು ಅಪ್ಪಿಕೊಂಡಿದ್ದಾಳೆ.

ಟ್ಯಾಂಕರ್ ಒಳಗೆ ಅವಿತು ಕುಳಿತ ರಚನಾ
ಅಶ್ವಿನ್ ರಚನಾಳ ಹಿಂದೆ ಬಿದ್ದಿದ್ದಾನೆ. ಅವಳನ್ನ ಕಿಡ್ನ್ಯಾಪ್ ಮಾಡಲು ಹೇಳಿದ್ದ. ಅತ್ತ ರೌಡಿಗಳಿಂದ ತಪ್ಪಿಸಿಕೊಳ್ಳಲು ನೀರಿನ ಟ್ಯಾಂಕರ್ ಒಳಗೆ ಕುಳಿತು ಬಿಟ್ಟಿದ್ದಳು. ಹೀಗಾಗಿ ರೌಡಿಗಳಿಗೆ ಸಿಗಲಿಲ್ಲ. ಅತ್ತ ಕೃಷ್ಣಾ ಕೊಟ್ಟಿದ್ದ ಗ್ರಾಮಾ ಫೋನ್ ಪ್ರಯೋಜನಕ್ಕೆ ಬಂದಿದ್ದು, ಅದರಿಂದಾನೇ ಜೀವ ರಚನಾಳನ್ನು ಕಾಪಾಡಿದ್ದಾನೆ.
ಟ್ಯಾಂಕರ್ ಒಳಗೆ ಚಿತ್ರೀಕರಣಕ್ಕೆ ಹರಸಾಹಸ
ಧಾರಾವಾಹಿಯಲ್ಲಿ ಕೆಲವೊಂದು ದೃಶ್ಯವನ್ನು ಶೂಟ್ ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ. ಅದರ ಹಿಂದೆ ಸಾಕಷ್ಟು ಜನರ ಪರಿಶ್ರಮವಿರುತ್ತೆ. ಇದೀಗ ಟ್ಯಾಂಕರ್ ನ ಒಳಗೆ ಶೂಟ್ ಮಾಡುವುದಕ್ಕೆ ಇಡೀ ಟೀಂ ಕಷ್ಟಪಟ್ಟ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ತೋರಿಸುವಾಗ ಹೋಗುತ್ತಿದ್ದ ಟ್ಯಾಂಕರ್ ನಲ್ಲಿ ಶೂಟ್ ಮಾಡಿದಂತೆ ತೋರಿಸಿದ್ದಾರೆ. ಆದರೆ ಆ ಒಂದು ಶೂಟ್ ಗಾಗಿ ಒಂದು ದೊಡ್ಡ ಟ್ಯಾಂಕರ್ ಅನ್ನು ಶೂಟಿಂಗ್ ಸ್ಪಾಟ್ ಹತ್ತಿರ ಇಟ್ಟು, ಅದಕ್ಕೆ ನೀರು ತುಂಬಿಸಿ, ಟ್ಯಾಂಕರ್ ಅಲ್ಲಾಡುವಂತೆ ಸ್ಪಾಟ್ ಹುಡುಗರು ನೋಡಿಕೊಂಡಿದ್ದಾರೆ.
ಗೋಬಿ ತಿನ್ನುತ್ತಾ ಕೂತ ರಚನಾ-ಜೀವ
ಇನ್ನು ಅಷ್ಟೊಳ್ಳೆ ಎಫರ್ಟ್ ನ ಸುಮ್ನೆ ಹಾಳು ಮಾಡುವಂಗಿಲ್ಲ. ಅದರಿಂದ ಒಂದಷ್ಟು ಮೆಮೋರಿಯಲ್ಲಿ ಇರುವಂತ ಫೋಟೋ, ವಿಡಿಯೋಸ್ ಗಳಿದ್ದರೆ ಆ ನೆನಪುಗಳು ಹಾಗೇ ಉಳಿಯುತ್ತವೆ ಅಲ್ಲವೆ. ಹೀಗಾಗಿ ಜೀವ ಮತ್ತು ರಚನಾ ಅಲ್ಲಿಯೇ ಕುಳಿತು ಗೋಬಿ ತಿಂದಿದ್ದಾರೆ. ನೀರಲ್ಲಿ ಇಬ್ಬರು ಬಿದ್ದಿದ್ದ ಕಾರಣಕ್ಕೆ ಚಳಿ ಬೇರೆ ಆಗ್ತಾ ಇತ್ತು. ಆ ವಿಡಿಯೋ ನೋಡಿದರೇನೆ ಇಬ್ಬರು ನಡುಗುತ್ತಾ ಇದ್ದದ್ದು ಕಾಣಿಸುತ್ತಿದೆ. ನಡುಗುತ್ತಲೇ ಗೋಬಿ ತಿಂದಿದ್ದಾರೆ.
ನಿರ್ದೇಶಕರ ಸ್ಪೆಷಲ್ ರೆಸ್ಟೋರೆಂಟ್
'ನಿನಗಾಗಿ' ಧಾರಾವಾಹಿಯನ್ನು ಸಂಪೃಥ್ವಿ ನಿರ್ದೇಶನ ಮಾಡುತ್ತಿರುವುದು. 'ನಮ್ಮ ಲಚ್ಚಿ' ಸೇರಿದಂತೆ ಹಲವು ಧಾರಾವಾಹಿಗಳನ್ನು ಮಾಡಿದ್ದಾರೆ. ಒಂದು ದೃಶ್ಯ ಅದ್ಭುತವಾಗಿ ಬಂದಿರುವುದರ ಹಿಂದಿನ ಶ್ರಮ ಎಷ್ಟಿತ್ತು ಎಂಬುದನ್ನು ಆಗಾಗ ವಿಡಿಯೋ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಗೋಬಿ ತಿನ್ನುತ್ತಾ ಇರುವ ವಿಡಿಯೋ ಹಂಚಿಕೊಂಡಿರುವ ಸಂಪೃಥ್ವಿ, ಜಗತ್ತಿನ ಬೆಸ್ಟ್ ಗೋಬಿ ರೆಸ್ಟೊರೆಂಟ್ ಎಂದು ಬರೆದುಕೊಂಡಿದ್ದಾರೆ. ಈ ರೆಸ್ಟೊರೆಂಟ್‌ನಲ್ಲಿ ಆಸೆ ಪಟ್ಟು ಗೋಬಿ ತಿನ್ನುವುದಕ್ಕೆ ಹೋದರೆ ಖಂಡಿತ ಸಂಪೃಥ್ವಿ ಅವರ ಅನುಮತಿ ಬೇಕಾಗಿದೆ. ಯಾಕಂದ್ರೆ ಇದು ಅವರದ್ದೇ ರೆಸ್ಟೊರೆಂಟ್. ಅವರೇ ಸೃಷ್ಟಿಸಿರುವ ರೆಸ್ಟೊರೆಂಟ್ ಆಗಿದೆ.


Click it and Unblock the Notifications











