22 ವರ್ಷಗಳ ಬಳಿಕ ಕಿರುತೆರೆಗೆ ಮರಳಿದ ಈ ನಟಿ ಯಾರು ಗೊತ್ತೇ? 'ನಿನಗಾಗಿ' ಪಾತ್ರಕ್ಕೆ ರಮ್ಯಾಕೃಷ್ಣ ಸ್ಪೂರ್ತಿ ಹೇಗೆ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ನಿನಗಾಗಿ' ಕೂಡಾ ಒಂದು. ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯ ಭೂಮಿಕೆಯಲ್ಲಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕಿ ಸೂಪರ್ ಸ್ಟಾರ್ ರಚನಾ ಅಮ್ಮ ವಜ್ರೇಶ್ವರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪರಿಚಿತರಾಗಿದ್ದಾರೆ ಸೋನಿಯಾ ಪೊನ್ನಮ್ಮ.

ಗತ್ತಿನ ಮಹಿಳೆಯಾಗಿ ಸೋನಿಯಾ ಪೊನ್ನಮ್ಮ 'ನಿನಗಾಗಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಈ ವಜ್ರೇಶ್ವರಿ ಪಾತ್ರ ಖಳನಾಯಕಿಯಾಗಿ ಗುರುತಿಸಿಕೊಂಡಿದೆ. ತನ್ನ ಸ್ವಾರ್ಥಕ್ಕಾಗಿ ಸ್ವಂತ ಮಗಳನ್ನೇ ಬಳಸುತ್ತಿರುತ್ತಾಳೆ. ಸೂಪರ್ ಸ್ಟಾರ್ ಆಗಿರುವ ತನ್ನ ಮಗಳನ್ನು ಮುಂದಿಟ್ಟುಕೊಂಡು ಕೋಟಿಗಟ್ಟಲೇ ಹಣ ಗಳಿಸಬೇಕು ಎಂಬುದೇ ಆಕೆಯ ದೂರಲೋಚನೆ. ಮಗಳ ಮುಂದೆ ಒಳ್ಳೆಯವಳಂತೆ ನಟಿಸಿ, ಆಕೆಗೆ ಮೋಸ ಮಾಡುವ ಈಕೆಯ ಬುದ್ದಿ ಮಗಳಿಗೆ ಯಾವಾಗ ಅರಿವಾಗುತ್ತದೆ ಅನ್ನೋದನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ.

Ninagagi serial villain actress Sonia Ponnamma is also a classical dancer

ಮೂಲತಃ ಮಂಜಿನ ನಗರಿ ಮಡಿಕೇರಿಯ ಸೋನಿಯಾ ಪೊನ್ನಮ್ಮ ಅವರು ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಭರತನಾಟ್ಯ ಮಾತ್ರವಲ್ಲದೇ ಕಥಕ್ ನೃತ್ಯವನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಸೋನಿಯಾ ಅವರು ದೂರದರ್ಶನದ ಎ ಗ್ರೇಡ್ ಕಲಾವಿದೆಯೂ ಹೌದು. ಕೇವಲ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು.

'ನಿನಗಾಗಿ' ಧಾರಾವಾಹಿಯಲ್ಲಿ ಖಳನಾಯಕಿ ವಜ್ರೇಶ್ವರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಸೋನಿಯಾ ಪೊನ್ನಮ್ಮಗೆ ಇದು ಎರಡನೇ ಧಾರಾವಾಹಿ. ಅರೇ! ಇವರನ್ನು ಇದಕ್ಕಿಂತ ಮೊದಲು ಬೇರೆ ಯಾವ ಧಾರಾವಾಹಿಯಲ್ಲಿ ನೋಡಲಿಲ್ಲವಲ್ಲ ಎಂದು ನೀವು ಊಹಿಸುತ್ತಿದ್ದರೆ ನಿಮ್ಮ ಊಹೆ ನಿಜ. ಯಾಕೆಂದರೆ ಆಕೆ ಮೊದಲ ಬಾರಿಗೆ ಬಣ್ಣ ಹಚ್ಚಿ ಬರೋಬ್ಬರಿ 22 ವರ್ಷ ಕಳೆದಿದೆ.

Ninagagi serial villain actress Sonia Ponnamma is also a classical dancer

ಹೌದು, 22 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಕೊಡವ ಧಾರಾವಾಹಿಯೊಂದರಲ್ಲಿ ಈಕೆ ನಟಿಸಿದ್ದರು. ಇನ್ನು ಪತಿಯೊಡನೆ ದೂರದ ಸಿಂಗಾಪುರದಲ್ಲಿ ನೆಲೆಸಿರುವ ಈ ನಟಿ ವಜ್ರೇಶ್ವರಿ ಪಾತ್ರಕ್ಕೆ ಆಯ್ಕೆಯಾದುದು ಕೂಡಾ ರೋಚಕ ಸಂಗತಿ. ಡ್ಯಾನ್ಸ್ ಕಾರ್ಯಕ್ರಮದ ಸಲುವಾಗಿ ಸೋನಿಯಾ ಅವರು ಆಗಾಗ ಸಿಂಗಾಪುರದಿಂದ ಬೆಂಗಳೂರಿಗೆ ಬರುತ್ತಿದ್ದರಂತೆ. ಆ ಸಮಯದಲ್ಲಿ 'ನಿನಗಾಗಿ' ಧಾರಾವಾಹಿಯ ಆಡಿಶನ್‌ನಲ್ಲಿ ಭಾಗವಹಿಸುವಂತೆ ನಿರ್ಮಾಪಕರಿಂದ ಕರೆ ಬಂದಿತಂತೆ. ಆಡಿಶನ್‌ಗೆ ಹೋದ ಆಕೆ ವಜ್ರೇಶ್ಚರಿ ಪಾತ್ರಕ್ಕೆ ಆಯ್ಕೆಯೂ ಆದರಂತೆ.

ಮೊದಲಿನಿಂದಲೂ ಅಭಿನಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಸೋನಿಯಾ ಸದ್ಯ 'ನಿನಗಾಗಿ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಡ್ಯಾನ್ಸ್ ಶೋಗಳಿಗೂ ಕೊಂಚ ಬ್ರೇಕ್ ಕೂಡಾ ಹಾಕಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುತ್ತಿರುವ ಸೋನಿಯಾ ನಿಜಜೀವನದಲ್ಲಿ ತುಂಬಾನೇ ಸಾಫ್ಟ್. ತನ್ನದಲ್ಲದ ಪಾತ್ರಕ್ಕೆ ಜೀವ ತುಂಬಿ ಯಶಸ್ವಿಯಾಗಿರುವ ಇವರಿಗೆ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ನಟಿ ರಮ್ಯಾಕೃಷ್ಣ ಅವರೇ ಸ್ಫೂರ್ತಿ. ರಮ್ಯಾಕೃಷ್ಣ ಅವರ ಬಾಹುಬಲಿ ಸಿನಿಮಾದ ಲುಕ್ ಸೋನಿಯಾ ಅವರ ವಜ್ರೇಶ್ವರಿ ಪಾತ್ರಕ್ಕೆ ಪ್ರೇರಣೆ.

More from Filmibeat

English summary
Sonia Ponnamma, who plays Vajreswari in the serial Ninagagi is a classical dancer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X