'ನಿನ್ನ ಜೊತೆ ನನ್ನ ಕಥೆ'ಯಲ್ಲಿ ಭಾರೀ ಬದಲಾವಣೆ ; ಹೊರ ನಡೆದ ಅನನ್ಯಾ, ಹೊಸ ನಟಿ ಯಾರು?
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ.
ಯಾಕೆಂದರೆ ಕೆಲವೊಂದು ಬದಲಾವಣೆಗಳು ಸದ್ದಿಲ್ಲದೇ ನಡೆದರೂ ಕೆಲವೊಂದು ವಿವಾದ ಸೃಷ್ಟಿಸಿ ಸುದ್ದಿಯಾಗಿವೆ. ಇನ್ನೂ ಕೆಲವರು ಉತ್ತಮ ಅವಕಾಶ ಸಿಕ್ತು ಎಂದು ಹೊರ ನಡೆದಿದ್ದು ಇದೆ. ಹೀಗಾಗಿ ಸದ್ಯ ''ನಿನ್ನ ಜೊತೆ ನನ್ ಕಥೆ'' ಸುತ್ತ ಹಲವು ಪ್ರಶ್ನೆಗಳು ಎದ್ದಿವೆ. ಯಾಕೆಂದರೆ ಈ ಧಾರಾವಾಹಿಯ ಕೇಂದ್ರ ಬಿಂದು ಅನನ್ಯಾ ಮೋಹನ್ ಹೊರ ಬಂದಿದ್ದಾರೆ. ಇವರ ಜಾಗಕ್ಕೆ ಬೇರೆ ನಟಿ ಬಂದಿದ್ದಾರೆ.

ಹೌದು,''ನಿನ್ನ ಜೊತೆ ನನ್ನ ಕಥೆ''.. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುತ್ತಾ ಬಂದ ಈ ಧಾರಾವಾಹಿಯಲ್ಲಿ ಅನನ್ಯ ಮೋಹನ್ ಕಳೆದ ಎರಡು ವರ್ಷಗಳಿಂದ ಅಂಜನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಆದರೆ ಈಗ ಏಕಾಏಕಿ ಈ ಪಾತ್ರ ಬದಲಾಗಿದೆ. ಅಂಜನಾ ಈ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಇತ್ತೀಚಿನ ಸಂಚಿಕೆಯಲ್ಲಿ ಅಂಜನಾ ಬದಲು ಪೂಜಾ ಮಂಜುಳಾ ಕಾಣಿಸಿಕೊಂಡಿದ್ದಾರೆ.


Click it and Unblock the Notifications