For Quick Alerts
  ALLOW NOTIFICATIONS  
  For Daily Alerts

  'ಜೊತೆ ಜೊತೆಯಲಿ' ಬದಲು ಮತ್ತೊಂದು ಧಾರಾವಾಹಿಯಲ್ಲಿ ಪುನೀತ್ ನಾಯಕಿ ಎರಿಕಾ ಫರ್ನಾಂಡಿಸ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಎರಿಕಾ ಫರ್ನಾಂಡಿಸ್ ಎಲ್ಲರಿಗೂ ಚಿರಪರಿಚಿತರು. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿ ಕಣ್ಮರೆಯಾಗಿದ್ದ ಎರಿಕಾ ಮತ್ತೆ ವರ್ಷಗಳ ಬಳಿಕ ಸ್ಯಾಂಡಲ್ ವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.

  ಎರಿಕಾ ಕನ್ನಡದ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಎರಿಕಾ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಇದು ವದಂತಿ ಅಷ್ಟೆ ಎಂದು ಧಾರಾವಾಹಿ ನಿರ್ದೇಶಕರು ಬಹಿರಂಗ ಪಡಿಸುವ ಮೂಲಕ ಎರಿಕಾ ರೀ-ಎಂಟ್ರಿ ಸುದ್ದಿಗೆ ಬ್ರೇಕ್ ಹಾಕಿದ್ದರು.

  'ಜೊತೆ ಜೊತೆಯಲ್ಲಿ' ಧಾರಾವಾಹಿಯಲ್ಲಿ 'ನಿನ್ನಿಂದಲೇ' ನಾಯಕಿ: ಎರಿಕಾ ಎಂಟ್ರಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?

  ಇದೀಗ ನಿನ್ನಿಂದಲೇ ನಟಿಯ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಎರಿಕಾ ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ ಇದು ಕನ್ನಡದ ಧಾರಾವಾಹಿ ಅಲ್ಲ. ಹಿಂದಿಯ ಪ್ರಸಿದ್ಧ 'ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ' ಸೀರಿಯಲ್ ನ ಸೀಸನ್ 3 ಪ್ರಾರಂಭವಾಗುತ್ತಿದ್ದು, ಎರಿಕಾ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಸೀಸನ್ 1 ಮತ್ತು 2ರಲ್ಲಿ ಎರಿಕಾ ಮತ್ತು ಖ್ಯಾತ ಟಿವಿ ನಟ ಶಾಹೀರ್ ಶೇಖ್ ನಟಿಸಿದ್ದರು. ಈ ಜೋಡಿ ಹಿಂದಿ ಧಾರಾವಾಹಿ ಲೋಕದಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿತ್ತು. ಇತ್ತೀಚಿಗಷ್ಟೆ ಸೀಸನ್-3 ಬರುತ್ತಿರುವ ಬಗ್ಗೆ ಬಹಿರಂಗ ಪಡುವ ಮೂಲಕ ಶಾಹೀರ್ ಅಭಿಮಾನಿಗಳಿಗೆ ಸಂತಸದ ವಿಚಾರ ನೀಡಿದ್ದರು.

  ಪಾರ್ಟ್-3ನಲ್ಲೂ ಎರಿಕಾ, ಶಾಹೀರ್ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಹಿಂದಿ ಕಿರುತೆರೆ ಲೋಕದಲ್ಲಿ ಹರಿದಾಡುತ್ತಿದೆ. ಈ ಜನಪ್ರಿಯ ಜೋಡಿಯನ್ನು ಮತ್ತೆ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  ಅಂದಹಾಗೆ ಎರಿಕಾ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಹಿಂದಿ ಧಾರಾವಾಹಿ ಲೋಕದಲ್ಲಿ ಸಕ್ರೀಯರಾಗಿದ್ದ ಎರಿಕಾ ಸದ್ಯ ಸಿನಿಮಾದಿಂದ ಅಂತರ ಕಾಯ್ದುಕೊಂಡು ಟಿವಿ ಪ್ರಪಂಚದಲ್ಲೇ ಮುಂದುವರೆಯಲು ನಿರ್ಧರಿಸಿದ್ದಾರೆ.

  English summary
  Ninnindale fame actress Erica Fernandes star opposite to shaheer sheik in kuch Rang Pyaar Ke Aise Bhi 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X