ಅಂತೂ ನಿರಂಜನ್ ಕೋಟಿನ ಸಮಸ್ಯೆ ಬಗೆ ಹರಿಯಿತು
ಮಗಳು ಜಾನಕಿ ಧಾರಾವಾಹಿಯಲ್ಲಿ ನಿರಂಜನ್ ಕೋಟಿನ ಬಟನ್ ಕಿತ್ತೋಗಿರುವ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಮಾವ ಭಾರ್ಗಿ ಮನೆಯಲ್ಲಿ ಅವಮಾನವಾಗುತ್ತಿದ್ದರು ನಿರಂಜನ್ ಮತ್ತು ಜಾನಕಿ ಇಬ್ಬರು ಸಹಿಸಿಕೊಂಡು ಇದ್ದಾರೆ. ಅವಮಾನಗಳನ್ನು ಎದುರಿಸಿ ನಿಶ್ಚಿತಾರ್ಥದ ಸಂಭ್ರದಲ್ಲಿ ಭಾಗಿಯಾಗಿದ್ದಾರೆ.
ಚಂಚಲ ನಿಶ್ಚಿತಾರ್ಥದ ಸಂಭ್ರಮ, ಸಡಗರ ಜೋರಾಗಿದೆ. ಚಂಚಲ ಕುಟುಂಬದವರು ಮಾತ್ರ ನಿಶ್ಚಿತಾರ್ಥ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಚಿರಂತನ್ ಕುಟುಂಬದವರು ಯಾರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.
ಬಾರ್ಗಿ ಅವಮಾನ ಮಾಡಿದ್ದಲ್ಲದೆ ಚಿರಂತನ್ ಕೂಡ ಜಾನಕಿಯನ್ನು ಕೆಣಕಿದ್ದಾರೆ. ಎಲ್ಲರಲ್ಲು ಕ್ರಿಮಿನಲ್ ಎನ್ನುವ ಭಾವನೆ ಬಿತ್ತುತ್ತಿದ್ದೀರ ಎಂದು ಜಾನಕಿ ವಿರುದ್ಧ ರೊಚ್ಚಿಗೆದ್ದಾನೆ ಚಿರಂತನ್. ಆದ್ರೆ ಚಿರಂತನ್ ಗೆ ಜಾನಕಿ ಸರಿಯಾಗೆ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ.

ಶ್ರೀಮಂತರ ಮನೆ ಅಳಿಯ ಆಗಲು ಯೋಗ್ಯತೆ ಇಲ್ಲ
ನಿಶ್ಚಿತಾರ್ಥದಲ್ಲಿ ನಿರಂಜನ್ ಕೋಟು ಭಾರಿ ಚರ್ಚೆಯಾಗುತ್ತಿದೆ. ಕೋಟು ಕೈಯಲ್ಲಿ ಹಿಡಿದು ಸಪ್ಪೆಮೊರೆಹಾಕಿಕೊಂಡು ನಿಂತಿದ್ದ ನಿರಂಜನ್ ಅನ್ನು ಜಾನಕಿ ಕೇಳಿದ್ದಾರೆ. ನಿರಂಜನ್ ನಡೆದ ವಿಚಾರ ಹೇಳಿ ನಿಶ್ಚಿತಾರ್ಥವನ್ನು ಅರ್ಧದಲ್ಲೆ ನಿಲ್ಲಿಸಿ ಹೋಗುವ ನಿರ್ಧಾರ ಮಾಡಿದ್ದಾರೆ. ಆದ್ರೆ ರಶ್ಮಿ ಅವರು ಇಬ್ಬರನ್ನು ಹೊರಡಲ ಬಿಡದೆ ನಿಶ್ಚಿತಾರ್ಥ ಮುಗಿಸಿಕೊಂಡು ಹೋಗುವಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ.

ನಿರಂಜನ್ ವಿರುದ್ಧ ಭಾರ್ಗಿ ದೂರು
ನಿರಂಜನ್ ಬಟ್ಟೆಯ ವಿಚಾರವಾಗಿ ಭಾರ್ಗಿ ಸಿಟ್ಟಿಗೆದ್ದಿದ್ದಾರೆ. ನಿರಂಜನ್ ಹರಿದ ಕೋಟು ಹಾಕಿಕೊಂಡ ಬಂದು ಅವಮಾನ ಮಾಡುತ್ತಿದ್ದಾರೆ ಎಂದು ಭಾರ್ಗಿ ಪತ್ನಿ ರಶ್ಮಿ ಅವರ ಬಳಿ ಗಲಾಟೆ ಮಾಡುತ್ತಿದ್ದಾರೆ. ಅವಮಾನ ಮಾಡಬೇಕು ಅಂತಾನೆ ನಿರಂಜನ್ ದೂರಿಂದ ಬಂದಿದ್ದಾನೆ ಎಂದು ಭಾರ್ಗಿ ಅವರು ನಿಶ್ಚಿತಾರ್ಥದಲ್ಲಿ ಕಿರುಚಾಡುತ್ತಿದ್ದಾರೆ. ಆದ್ರೆ ರಶ್ಮಿ ಅವರು ಭಾರ್ಗಿ ಅವರನ್ನು ಸಮಾಧಾನ ಪಡಿಸಿದ್ದಾರೆ.

ಬಗೆ ಹರಿಯಿತು ಕೋಟಿನ ಸಮಸ್ಯೆ
ಭಾರ್ಗಿ ಮಾಡಿದ ಅವಮಾನದಿಂದ ನಿರಂಜನ್ ಬೇಸರ ಆಗಿದ್ದಾರೆ ಎಂದು ರಶ್ಮಿ ಅವರು ನಿರಂಜನ್ ಗೆ ಕೋಟನ್ನು ಕೊಟ್ಟಿದ್ದಾರೆ. ನಿರಂಜನ್ ಮದುವೆಯಲ್ಲಿ ತಂದಿದ್ದ ಕೋಟನ್ನು ರಶ್ಮಿ ಮತ್ತು ಚಂಚಲ ಇಬ್ಬರು ಕೊಟ್ಟಿದ್ದಾರೆ. ಆದ್ರೆ ನಿರಂಜನ್ ತಗೊಳುವುದಿಲ್ಲ ಅಂತಾನೆ ಹೇಳುತ್ತನೆ ಚಂಚಲ ಒತ್ತಾಯದ ಮೇರೆಗೆ ಕೋಟನ್ನ ಧರಿಸಿದ್ದಾರೆ.

ಜಾನಕಿ ಬಳಿ ರೊಚ್ಚಿಗೆದ್ದ ಚಿರಂತನ್
ನಿಶ್ಚಿತಾರ್ಥದ ಯಾವುದೆ ಸಂಭ್ರದಲ್ಲಿ ಜಾನಕಿ ಮತ್ತು ನಿರಂಜನ್ ಭಾಗಿಯಾಗುತ್ತಿಲ್ಲ. ದೂರದಿಂದನೆ ಎಲ್ಲವನ್ನು ನಿಂತು ಗಮನಿಸುತ್ತಿದ್ದಾರೆ. ಆದ್ರೆ ಚಿರಂತನ್ ಜಾನಕಿ ಬಳಿ ಬಂದು, ನನ್ನ ಬಗ್ಗೆ ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಖಾರವಾಗಿಯೆ ಕೇಳುತ್ತಿದ್ದಾರೆ. ಕ್ರಿಮಿನಲ್ ಎನ್ನುವ ಭಾವನೆಯನ್ನು ಎಲ್ಲರಲ್ಲೂ ಬಿತ್ತುತ್ತಿದ್ದೀರಿ ಎಂದು ಜಾನಕಿ ವಿರುದ್ಧ ಚಿರಂತನ್ ರೊಚ್ಚಿಗದ್ದಿದ್ದಾರೆ. ಚಿರಂತನ್ ಹೀಗೆ ಮಾತನಾಡುತ್ತಿದ್ದರೆ ಹಳೆಯ ವಿಚಾರವನ್ನು ಕೆದಕಿ ತನಿಖೆ ಮಾಡಬೇಕಾಗುತ್ತೆ ಎಂದು ಹೇಳಿ ಚಿರಂತನ್ ಬಾಯಿ ಮುಚ್ಚಿಸಿದ್ದಾರೆ ಜಾನಕಿ.


Click it and Unblock the Notifications











