'ಅತಿಯಾದ ಜಂಭ', 'ಶೋ ಆಫ್' ಎಂದು ನಿರಂಜನ್ ಕರೆದಿದ್ದು ಯಾರಿಗೆ.?
ಟಾಕ್ ಶೋ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 'ಮಿಸ್ಟರ್ ಶೋ ಆಫ್' ಎಂದು ಬಿರುದು ಕೊಟ್ಟು ನಟಿ ರಶ್ಮಿಕಾ ಮಂದಣ್ಣ ವಿವಾದಕ್ಕೆ ಒಳಗಾದರು. ಬಳಿಕ ನಟಿ ಸಂಜನಾಗೆ ಪೂಜಾ ಗಾಂಧಿ 'ಶೋ ಆಫ್' ಎಂದು ಕರೆದು ಸುದ್ದಿ ಮಾಡಿದರು. ವಿವಾದದ ಸಹವಾಸವೇ ಬೇಡ ಎಂಬ ಕಾರಣಕ್ಕೋ ಏನೋ... ತಮ್ಮನ್ನ ತಾವೇ ನಟ ಅನಂತ್ ನಾಗ್ 'ಶೋ ಆಫ್' ಎಂದು ಕರೆದುಕೊಂಡು ಬಿಟ್ಟರು.
ಈಗ ಬೇರೊಬ್ಬ ನಟನಿಗೆ 'ಬಿಗ್ ಬಾಸ್' ಖ್ಯಾತಿಯ ನಿರಂಜನ್ ದೇಶಪಾಂಡೆ 'ಶೋ ಆಫ್' ಎಂದು ಟೈಟಲ್ ನೀಡಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ... ಮುಂದೆ ಓದಿರಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಿರಂಜನ್
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಶಾಲಿನಿ, ಕುರಿ ಪ್ರತಾಪ್, ನಿರಂಜನ್ ದೇಶಪಾಂಡೆ ಅತಿಥಿಗಳಾಗಿ ಭಾಗವಹಿಸಿದರು.

ದಿಢೀರ್ ಬೆಂಕಿ
ಕಾರ್ಯಕ್ರಮದ ಪದ್ಧತಿಯಂತೆ ಮಾತುಕತೆ ಹಾಗೂ ಟಾಸ್ಕ್ ಮುಗಿದ ಬಳಿಕ 'ದಿಢೀರ್ ಬೆಂಕಿ' (Rapid Fire) ರೌಂಡ್ ಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು.

ನಟರ ಹೆಸರನ್ನು ಹೇಳಬೇಕಿತ್ತು
''ಈ ಕೆಳಗಿನ ಪದಗಳನ್ನು ಕೇಳಿದಾಗ, ಯಾವ ನಟರು ನೆನಪಾಗುತ್ತಾರೆ.?'' ಎಂದು ''ಡೌನ್ ಟು ಅರ್ಥ್, ಅತಿಯಾದ ಜಂಭ, ಸ್ವಾರ್ಥಿ, ಶೋ ಆಫ್'' ಪದಗಳನ್ನು ನಿರಂಜನ್ ದೇಶಪಾಂಡೆ ಮುಂದಿಟ್ಟರು ನಿರೂಪಕ ಅಕುಲ್ ಬಾಲಾಜಿ.

ಡೌನ್ ಟು ಅರ್ಥ್ ಯಾರು.?
'ಡೌನ್ ಟು ಅರ್ಥ್' ಎಂದು ಅಕುಲ್ ಹೇಳುತ್ತಿದ್ದಂತೆಯೇ, ಹಿಂದು ಮುಂದು ಯೋಚನೆ ಮಾಡದೆ 'ರಮೇಶ್ ಅರವಿಂದ್' ಎಂದು ಹೇಳಿಬಿಟ್ಟರು ನಿರಂಜನ್ ದೇಶಪಾಂಡೆ

ಅತಿಯಾದ ಜಂಭ ಯಾರಿಗಿದೆ.?
ನಿರಂಜನ್ ದೇಶಪಾಂಡೆ ಪ್ರಕಾರ, 'ಅತಿಯಾದ ಜಂಭ' ಪ್ರಥಮ್ ಗೆ ಇದೆ.

ಸ್ವಾರ್ಥಿ ಯಾರು.?
ನಿರಂಜನ್ ದೇಶಪಾಂಡೆ ಪ್ರಕಾರ, ನಟ ನೀನಾಸಂ ಸತೀಶ್ 'ಸ್ವಾರ್ಥಿ'

ಶೋ ಆಫ್ ಮಾಡೋದು ಯಾರು.?
ನಟ, ಕೊಡಗಿನ ಕುವರ ಭುವನ್ ಪೊನ್ನಣ್ಣ ಶೋ ಆಫ್ ಮಾಡ್ತಾರಂತೆ. ಹಾಗಂತ ನಿರಂಜನ್ ದೇಶಪಾಂಡೆ ಹೇಳಿದರು.


Click it and Unblock the Notifications











