»   » ನೀವೆಲ್ಲರೂ ಬಾಯ್ಮೇಲೆ ಬೆರಳಿಡುವ ಹಾಗೆ ಮದ್ವೆ ಆಗಲಿದ್ದಾರೆ 'ಬಿಗ್ ಬಾಸ್' ನಿರಂಜನ್!

ನೀವೆಲ್ಲರೂ ಬಾಯ್ಮೇಲೆ ಬೆರಳಿಡುವ ಹಾಗೆ ಮದ್ವೆ ಆಗಲಿದ್ದಾರೆ 'ಬಿಗ್ ಬಾಸ್' ನಿರಂಜನ್!

Posted By:
Subscribe to Filmibeat Kannada

ಹೇಗೆಲ್ಲಾ ಮದುವೆ ಆಗಬಹುದು.? ಅಂತ ಯೋಜಿಸಿದರೆ... ಪ್ಯಾಲೇಸ್ ಗ್ರೌಂಡ್ ನಲ್ಲೋ, ಫೈವ್ ಸ್ಟಾರ್ ಹೋಟೆಲ್ ನಲ್ಲೋ ಧೂಂ ಧಾಂ ಆಗಿ ಆಗಬಹುದು. ಖರ್ಚು ಜಾಸ್ತಿ ಮಾಡಲ್ಲ ಅಂದ್ರೆ ದೇವಸ್ಥಾನದಲ್ಲಿ ಸಿಂಪಲ್ ಆಗಿ ಆಗ್ಬಹುದು.. ಯಾವುದೂ ಬೇಡ ಅಂದ್ರೆ ರಿಜಿಸ್ಟರ್ ಆಫೀಸ್ ಫಿಕ್ಸ್.!

ಈ ಎಲ್ಲ ಆಪ್ಷನ್ ಗಳನ್ನ ಸೈಡ್ ಗೆ ತಳ್ಳಿ, ತಾವು ಹಸೆಮಣೆ ಏರಲು ಹೊಸ ಐಡಿಯಾ ಮಾಡಿದ್ದಾರೆ 'ಬಿಗ್ ಬಾಸ್' ಖ್ಯಾತಿಯ ಆರ್.ಜೆ ನಿರಂಜನ್. ಆ ಐಡಿಯಾ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿರಿ....

ಟಿವಿಯಲ್ಲಿ ಮದುವೆ ಆಗ್ತಾರಂತೆ ನಿರಂಜನ್ ದೇಶಪಾಂಡೆ.!

ರೇಡಿಯೋ ಜಾಕಿ ಕಮ್ ಆಂಕರ್ ನಿರಂಜನ್ ದೇಶಪಾಂಡೆ 'ಟಿವಿ'ಯಲ್ಲಿ ಮದುವೆ ಆಗುವ ಆಸೆ ಹೊಂದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಸೆಮಣೆ

ನಿರಂಜನ್ ದೇಶಪಾಂಡೆ ರವರ ಆಸೆ ಈಡೇರಿಸಲು ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮನಸ್ಸು ಮಾಡಿದ್ದಾರೆ.

'ಬಿಗ್ ಬಾಸ್'ಗಾಗಿ ಮದುವೆ ಮುಂದೂಡಿದ್ದ ನಿರಂಜನ್

ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ನಿರಂಜನ್ ದೇಶಪಾಂಡೆ ಮದುವೆ ನಡೆದಿರಬೇಕಿತ್ತು. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ವಿವಾಹ ಮಹೋತ್ಸವವನ್ನು ನಿರಂಜನ್ ದೇಶಪಾಂಡೆ ಮುಂದೂಡಿದ್ದರು.

ಇನ್ನೆರಡು ತಿಂಗಳಲ್ಲಿ ನಿರಂಜನ್ ಮದುವೆ

ಇನ್ನೆರಡು ತಿಂಗಳಲ್ಲಿ ಯಶಸ್ವಿನಿ ಜೊತೆ ಕಲರ್ಸ್ ವಾಹಿನಿಯಲ್ಲಿ ನಿರಂಜನ್ ದೇಶಪಾಂಡೆ ಮದುವೆ ಆಗಲಿದ್ದಾರೆ.

ಎಲ್ಲರೂ ಟಿವಿಯಲ್ಲಿ ನೋಡಬಹುದು

ನಿರಂಜನ್-ಯಶಸ್ವಿನಿ ಮದುವೆಯನ್ನು ಎಲ್ಲರೂ ಟಿವಿಯಲ್ಲಿ ನೋಡಬಹುದು.

ನಿರಂಜನ್ ಏನಂತಾರೆ?

''ನನಗೆ ಬದುಕು ನೀಡಿದ ಕಿರುತೆರೆಯಲ್ಲೇ ಮದುವೆ ಆಗೋದಕ್ಕಿಂತ ಬೇರೆ ಭಾಗ್ಯ ಇನ್ನೇನಿದೆ?'' ಎನ್ನುತ್ತಾರೆ ನಿರಂಜನ್ ದೇಶಪಾಂಡೆ.

ಕಲರ್ಸ್ ಸೂಪರ್ ನಲ್ಲಿ ನಿರಂಜನ್ ಬಿಜಿ

ಸದ್ಯ 'ಕಲರ್ಸ್ ಸೂಪರ್' ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮವನ್ನ ಶೀತಲ್ ಶೆಟ್ಟಿ ಜೊತೆ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ.['ಬಿಗ್ ಬಾಸ್' ಸ್ವರ್ಧಿಗಳು, ಈಗ 'ಮಜಾ ಭಾರತ'ದ ಸಾರಥಿಗಳು!]

English summary
According to the latest buzz, RJ Niranjan of 'Bigg Boss' fame will get married to Yashaswini in Colors Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada