For Quick Alerts
  ALLOW NOTIFICATIONS  
  For Daily Alerts

  ಜಾನಕಿಯೇ ಸೊಸೆ ಎಂದು ನಿರಂಜನ್ ಮನೆಯವರಿಗೆ ಗೊತ್ತಾಗುತ್ತಾ?

  |

  ಮಗಳು ಜಾನಕಿ ಧಾರಾವಾಹಿ ಇಂಟ್ರಿಂಗ್ ಹಂತದಲ್ಲಿ ಬಂದು ನಿಂತಿದೆ. ಜಾನಕಿ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೇನಿದ್ರು ಪತಿ ನಿರಂಜನ್ ಜೀವನ ಸರಿಹೋಗಬೇಕು ಅಷ್ಟೆ. ನಿರಂಜನ್ ಒಂದು ಮಟ್ಟಿಗೆ ಉದ್ಯೋಗದಲ್ಲಿ ಸಕ್ಸಸ್ ಕಂಡು ಜಾನಕಿಯೆ ಮನೆಯ ಸೋಸೆ ಎಂದು ಹೇಳುವ ಸಮಯ ಬರುತ್ತೆ ಅಂತ ಕಾಯುತ್ತಿದ್ದ ಪ್ರೇಕ್ಷಕರಿಗೆ ಇಂಟ್ರಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ.

  ತಂದೆ ಭಾರ್ಗಿ, ಮಗಳನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆದು ಕೊಳ್ಳಬೇಕು ಎನ್ನುವ ಹೋರಾಟ ಒಂದೆಡೆ, ತನ್ನ ಮದುವೆಯ ಸಂಕಟದ ನಡುವೆಯೂ ಅಕ್ಕನ ಜೀವನ ಸರಿಪಡಿಸಬೇಕು ಎನ್ನುವ ಆಸೆ ಚಂಚಲ ಅವರದ್ದು, ಇತ್ತ ನಿರಂಜನ್ ನಷ್ಟದಲ್ಲಿ ಇರುವ ಕಂಪೆನಿ ಕಡೆ ತಲೆಕೆಡಿಸಿಕೊಂಡಿದ್ದಾರೆ.

  ಜಾನಕಿ ಮೇಲೆಯೆ ಅನುಮಾನ ಪಟ್ಟ ಪತಿ ನಿರಂಜನ್

  ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ನಿರಂಜನ್, ಚಿರಂತನ್ ಭೇಟಿ ಮಾಡಿ ಹಣದ ವಿಚಾರ ಮಾತನಾಡಬೇಕು ಎನ್ನುವ ತೆಲೆನೋವಿನಲ್ಲಿದ್ದಾರೆ. ಇದರ ಜೊತೆಗೀಗ ನಿರಂಜನ್ ಅಮ್ಮ ಮತ್ತು ಅಕ್ಕ ಸಂಜನಾ ಇಬ್ಬರು ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದು ನಿರಂಜನ್ ಅವರಿಗೆ ಮತ್ತಷ್ಟು ತಲೆಬಿಸಿ ಮಾಡಿದೆ.ಮುಂದೆ ಓದಿ..

  ರೋಚಕ ತಿರುವು ಪಡೆದ ಮಗಳು ಜಾನಕಿ : ಕೋರ್ಟ್ ಗೆ ಎಂಟ್ರಿ ಕೊಟ್ಟ ಸಿ ಎಸ್ ಪಿ

  ಜಾನಕಿಯೇ ಸೊಸೆ ಎಂದು ಗೊತ್ತಾಗುತ್ತಾ

  ಜಾನಕಿಯೇ ಸೊಸೆ ಎಂದು ಗೊತ್ತಾಗುತ್ತಾ

  ಜಾನಕಿ ಪತಿ ನಿರಂಜನ್ ಮದುವೆ ವಿಚಾರ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ನಿರಂಜನ್ ಅಮ್ಮ ಮತ್ತು ಅಕ್ಕ ಸಂಜನಾ ನಿರಂಜನ್ ಮದುವೆ ವಿಚಾರವನ್ನು ಜಾನಕಿ ಬಳಿ ಪ್ರಸ್ತಾಪ ಮಾಡಿದ್ದಾರೆ. ಪತಿಯ ಮದುವೆ ವಿಚಾರ ಕೇಳಿ ಜಾನಕಿ ಶಾಕ್ ಆಗಿದ್ದಾರೆ. ಏನು ಮಾತನಾಡದೆ ಒಮ್ಮೆ ಕಂಗಾಲಾಗಿದ್ದಾರೆ. ಇದೆ ಸಮಯದಲ್ಲಿ ನಿರಂಜನ್ ಮನೆಯವರಿಗೆ ಜಾನಕಿ ನಿರಂಜನ್ ಪತ್ನಿ ಎನ್ನುವ ವಿಚಾರವನ್ನು ಹೇಳಿಬಿಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

  ಪತಿಯ ಮದುವೆ ಕೇಳಿ ಜಾನಕಿ ಪ್ರತಿಕ್ರಿಯೆ ಏನಾಗಿರುತ್ತೆ

  ಪತಿಯ ಮದುವೆ ಕೇಳಿ ಜಾನಕಿ ಪ್ರತಿಕ್ರಿಯೆ ಏನಾಗಿರುತ್ತೆ

  ಜಾನಕಿ ಪತಿ ನಿರಂಜನ್ ಮದುವೆಯ ಬಗ್ಗೆ ಚರ್ಚೆಯಾಗುತ್ತಿರುವ ಸಮಯದಲ್ಲಿ ಜಾನಕಿ ಸೊಸೆ ಎಂದು ಒಪ್ಪಿಕೊಳ್ಳುತ್ತಾಳ ಅಥವಾ ನಿರಂಜನ್ ಭವಿಷ್ಯಕ್ಕಾಗಿ ವಿಚ್ಛೇದನ ನೀಡಿ ನಿರಂಜನ್ ಮದುವೆಗೆ ಸಹಾಯ ಮಾಡುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರದಲ್ಲಿದೆ. ಆದ್ರೆ ಜಾನಕಿಗೆ ಈಗಾಗಲೆ ನಿರಂಜನ್ ಮೇಲೆ ಪ್ರೀತಿ ಶುರುವಾಗಿದೆ ಹಾಗಾಗಿ ನಿರಂಜನ್ ಅನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತಾರಾ ಎನ್ನುವ ಅನುಮಾನ ಕೂಡ ಇದೆ.

  ಪೊಲೀಸ್ ಅಧಿಕಾರಿಯಾದ ಜಾನಕಿ: ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಮಗಳು

  ಮನಸ್ಸಿನಲ್ಲಿದ್ದ ಪ್ರೀತಿಯನ್ನು ವ್ಯಕ್ತಪಡಿಸುತ್ತಾರಾ ಜಾನಕಿ?

  ಮನಸ್ಸಿನಲ್ಲಿದ್ದ ಪ್ರೀತಿಯನ್ನು ವ್ಯಕ್ತಪಡಿಸುತ್ತಾರಾ ಜಾನಕಿ?

  ಜಾನಕಿಗೆ ಪತಿ ನಿರಂಜನ್ ಮೇಲೆ ಪ್ರೀತಿ ಶುರುವಾಗಿದೆ. ಮೋಸ ಮಾಡಿ ಮದುವೆಯಾದರು ನಿರಂಜನ್ ಒಳ್ಳೆಯ ಮನುಷ್ಯ ಎನ್ನುವ ಭಾವನೆ ಜಾನಕಿ ಮನಸ್ಸಿನಲ್ಲಿ ಇದೆ. ಅಲ್ಲದೆ ನಿರಂಜನ್ ಬೆನ್ನಿಗೆ ನಿಂತು ಕಷ್ಟದಲ್ಲಿರುವ ನಿರಂಜನ್ ಸಹಾಯಕ್ಕೆ ಸದಾ ನಿಂತಿರುತ್ತಾರೆ. ಅಲ್ಲದೆ ನಿರಂಜನ್ ಗೂ ಜಾನಕಿ ಮೇಲೆ ಪ್ರೀತಿ ಇದೆ. ಹಾಗಾಗಿ ಈ ಸಮಯದಲ್ಲಿ ಇಬ್ಬರ ಮನಸ್ಸಿನಲ್ಲಿರುವ ಪ್ರೀತಿಯ ವಿಚಾರ ಬಹಿರಂಗವಾಗುವ ಸಾಧ್ಯತೆ ಇದೆ.

  ರೇವತಿಯ ಎಂಟ್ರಿ

  ರೇವತಿಯ ಎಂಟ್ರಿ

  ಮಗಳು ಜಾನಕಿ ಧಾರಾವಾಹಿಗೆ ಮತ್ತೊಂದು ಹೊಸ ಪಾತ್ರ ಮತ್ತು ಕಥೆಗೆ ಟ್ವಿಸ್ಟ್ ಸಿಗುವಂತ ಪಾತ್ರ ಎಂಟ್ರಿಯಾಗಿದೆ. ನಿರಂಜನ್ ಮದುವೆ ಮಾಡಲು ಸಂಜನಾ ಕರೆದುಕೊಂಡು ಬಂದಿರುವ ಹುಡುಗಿ ರೇವತಿ. ಸಂಜನಾ ಕೆಲಸ ಮಾಡುತ್ತಿರುವ ಶಾಲೆಯ ಮೇಸ್ಟ್ರು ಮಗಳು. ರೇವತಿ ಆಗಲೆ ನಿರಂಜನ್ ಮನೆಗೆ ಬಂದು ತಾಯಿ ಮತ್ತು ಸಂಜನಾ ಹಾಗೂ ಜಾನಕಿಯನ್ನು ನೋಡಿ ಮಾತನಾಡಿಸಿಕೊಂಡು ಹೋಗಿದ್ದಾರೆ. ಆದ್ರೆ ನಿರಂಜನ್ ರೇವತಿ ಅವರನ್ನು ಮದುವೆ ಆಗುತ್ತಾರಾ ಎನ್ನುವುದು ಕಾದು ನೋಡಬೇಕು.

  ರೇವತಿ ಮದುವೆ ಯಾರ ಜೊತೆ

  ರೇವತಿ ಮದುವೆ ಯಾರ ಜೊತೆ

  ರೇವತಿಯನ್ನು ಸೊಸೆ ಮಾಡಿಕೊಳ್ಳಬೇಕು ಎನ್ನುವುದು ನಿರಂಜನ್ ಮನೆಯವರ ಆಸೆ. ಆದ್ರೆ ನಿರಂಜನ್ ಗ್ರೀನ್ ಸಿಗ್ನಲ್ ನೀಡುತ್ತಾರಾ ಎನ್ನುವ ಅನುಮಾನ ಕೂಡ ಇದೆ. ಒಂದು ವೇಳೆ ನಿರಂಜನ್ ಒಪ್ಪದ್ದಿದ್ದರೆ ನಿರಂಜನ್ ತಮ್ಮ ಪ್ರಭಂಜನ್ ಜೊತೆ ಮದುವೆಯಾಗುವ ಸಾಧ್ಯತೆ ಇದೆ. ಆದ್ರೆ ದಿಢೀರನೆ ರೇವತಿಯನ್ನು ಒಪ್ಪಿಕೊಂಡು ಮದುವೆಯಾಗ್ತಾರಾ ಪ್ರಭಂಜನ್ ಎನ್ನುವುದು ಕಾದು ನೋಡಬೇಕು.

  English summary
  Niranjan family is preparing for the second marriage to niranjan in 'Magalu Janaki'. Audience are very curious about janaki's response to niranjan marriage proposal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X