"ದೊಡ್ಡ ಪಾತ್ರವೇ ಬೇಕೆಂದಿಲ್ಲ ಚಿಕ್ಕ ಪಾತ್ರವಾದರೂ ಜನರು ಗುರುತಿಸುವ ಪಾತ್ರಬೇಕು"; ನಿರುಷಾ ಗೌಡ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಇದೀಗ ಬಹಳಷ್ಟು ಪಾಪ್ಯುಲಾರಿಟಿಯನ್ನು ಗಳಿಸುತ್ತಿದೆ. ಇದರ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ನಿರುಷಾ ಗೌಡ ಅವರು ತಮ್ಮ ಪಾತ್ರ ಅಭಿನಯ ಹಾಗೂ ಧಾರಾವಾಹಿಯ ಬಗ್ಗೆ ಒಂದಷ್ಟು ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನಟಿ ನಿರುಷ ಗೌಡ ಅವರು ಒಂದು ವಿಭಿನ್ನ ಪಾತ್ರದ ಮೂಲಕ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರಿಗಂತೂ ಬಹಳ ಸಂತಸ ತಂದಿದೆ. ನಟಿ ನಿರುಷ ಗೌಡ ಅವರು ಅವರ ಇಡೀ ನಟನ ಜರ್ನಿಯ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಖಾಸಗಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Actress Nirusha Gowda about her role selection

'ನನಗೆ ನಟನೆಗೆ ಬರುವ ಯೋಚನೆಯೇ ಇರಲಿಲ್ಲ. ನಾನು ಮೂಲತಃ ಕಥಕ್ ಡ್ಯಾನ್ಸರ್ ಆಗಿದ್ದು ನನ್ನ ಕಾಲೇಜಿನಲ್ಲಿ ಒಮ್ಮೆ ಪರ್ಫಾರ್ಮೆನ್ಸ್ ನೀಡಿದ್ದೆ. ಆಗ ಯಾರೋ ನನ್ನ ಫೋಟೋ ಕ್ಲಿಕ್ಕಿಸಿ ಅದರಿಂದ ನನಗೆ ಬೇರೆ ಭಾಷೆಯ ಸಿನಿಮಾ ಒಂದರಲ್ಲಿ ಆಫರ್ ಬಂತು. ಆದರೆ ನನ್ನ ತಾಯಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಲು ಹೇಳಿದ್ದರಿಂದ ನಾನು ಆಫರ್ ಅನ್ನು ರಿಜೆಕ್ಟ್ ಮಾಡಿದೆ. ಅದಾದ ಮೇಲೆ ಕಾಲ ಕ್ರಮೇಣ ಕನ್ನಡದಲ್ಲಿಯೇ ನನಗೆ ಆಫರ್‌ಗಳು ಬಂದವು. ಮೊದಲಿಗೆ ಸಿರಿಗನ್ನಡ ವಾಹಿನಿಯಲ್ಲಿ ಒಂದು ಒಳ್ಳೆ ಅವಕಾಶ ಸಿಕ್ಕಿತು. ಅದಾದ ನಂತರ 'ಗಂಡ ಹೆಂಡತಿ' ಎಂಬ ಧಾರಾವಾಹಿಯಲ್ಲಿ ಸ್ವಾತಿ ಎಂಬ ಪಾತ್ರದ ಮೂಲಕ ವೀಕ್ಷಕರಿಗೆ ಪರಿಚಯವಾದೆ. ನಂತರ ಇದೀಗ ನಿನ್ನ ಜೊತೆ ನನ್ನ ಕಥೆ ಧಾರವಾಹಿಯಲ್ಲಿ ಭೂಮಿ ಪಾತ್ರದಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ. " ಎಂದು ತಮ್ಮ ನಟನಾ ಜರ್ನಿ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಹೇಳಿದ್ದಾರೆ ನಟಿ ನಿರುಷ ಗೌಡ.

" ಕಥೆ ಬಹಳ ವಿಭಿನ್ನವಾಗಿ ಹೋಗುತ್ತಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿರುವುದರಿಂದ ನನಗೂ ಖುಷಿ ಇದೆ. ಪೊಲೀಸ್ ಪೇದೆಯ ಸುತ್ತ ಸುತ್ತುವ ಕಥೆ ಆದ್ದರಿಂದ ಕೆಲವರಿಗೆ ಇದರಲ್ಲಿ ಒಂದಷ್ಟು ಕ್ರೌರ್ಯ ಹೆಚ್ಚಿದೆ ಅಂತ ಅನಿಸಿರಬಹುದು. ಮತ್ತು ಧಾರಾವಾಹಿ ಮನೆ ಮನೆಗಳಲ್ಲಿ ನಡೆಯುವ ಕಥೆಯನ್ನೇ ವಿಭಿನ್ನವಾಗಿ ಹೇಳುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಹೀಗಾಗಿ ಸಿಟ್ಟು ಸೆಡವು ರಾಗ ದ್ವೇಷ ಎಲ್ಲವೂ ಈ ಧಾರಾವಾಹಿಯಲ್ಲಿಯೂ ಮಿಳಿತಗೊಂಡಿದೆ. ಮನೆ ಮನೆಯಲ್ಲಿಯೂ ಪರಸ್ಪರ ಎಷ್ಟೋ ಜನರ ನಡುವೆ ದ್ವೇಷವಿರುತ್ತದೆ, ನೇರವಾಗಿ ವಿಷ ಹಾಕದಿದ್ದರೂ ದ್ವೇಷ ವಿಷದ ರೀತಿಯೇ ಸಂಬಂಧಗಳನ್ನು ಕೆಡಿಸುತ್ತದೆ. ಇದೇ ವಿಚಾರವನ್ನು ಧಾರಾವಾಹಿಗಳು ಸ್ವಲ್ಪ ವಿಭಿನ್ನ ರೀತಿಯಲ್ಲಿ ಹೇಳುವ ಪ್ರಯತ್ನದಲ್ಲಿದೆ" ಎಂದು ತಮ್ಮ ಧಾರಾವಾಹಿ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ ನಟಿ ನಿರುಷ ಗೌಡ.

Actress Nirusha Gowda about her role selection

ಸದ್ಯಕ್ಕಂತೂ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿನ , ನಟಿ ನಿರುಷ ಗೌಡ ಅವರ ಅಭಿನಯ ಜನಮನ ಗೆದ್ದಿದ್ದು, ಮುಂದೆ ಯಾವ ರೀತಿಯ ಪಾತ್ರಗಳನ್ನು ನಟಿಸಲು ಇಚ್ಛೆ ಪಡುತ್ತಾರೆ ಎಂಬ ಪ್ರಶ್ನೆಗೂ ಒಂದಷ್ಟು ಮಾಹಿತಿ ನೀಡಿದ್ದಾರೆ ಈ ನಟಿ.

"ನಟನೆಗೆ ಬರುತ್ತೇನೆ ಎಂಬ ಊಹೆಯೂ ಇಲ್ಲದೆ ಈ ಕ್ಷೇತ್ರಕ್ಕೆ ಬಂದು ನಿಂತಿದ್ದೇನೆ. ಮೊದ ಮೊದಲಿಗೆ ಎಲ್ಲವೂ ಭಯವನ್ನು ಹುಟ್ಟಿಸುತ್ತಿತ್ತು. ಆದರೆ ಈಗ ವರ್ಷವಿಡೀ ಒಂದೇ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಲು ಸಿದ್ಧಳಿದ್ದೇನೆ. ಅಷ್ಟರ ಮಟ್ಟಿಗೆ ನನಗೆ ಈ ನಟನಾ ವೃತ್ತಿ ಇಷ್ಟವಾಗಿದೆ. ಮುಂದೆಯೂ ಸಿನಿಮಾ ಅಥವಾ ಧಾರಾವಾಹಿ ಯಾವುದೇ ಕ್ಷೇತ್ರದಲ್ಲಾಗಲಿ ಪ್ರಮುಖ ಪಾತ್ರ ಸಿಗದಿದ್ದರೂ ಪರವಾಗಿಲ್ಲ ಪ್ರೇಕ್ಷಕರಿಗೆ ಮನಮುಟ್ಟುವಂತಹ ಪಾತ್ರಗಳನ್ನೇ ನಟಿಸಲು ಇಚ್ಛಿಸುತ್ತೇನೆ. ದೊಡ್ಡ ದೊಡ್ಡ ಪಾತ್ರಗಳು ನನಗೆ ಸಿಗಬೇಕೆಂದಿಲ್ಲ. ಚಿಕ್ಕ ಪಾತ್ರವಾದರೂ ಜನರು ಅದನ್ನು ಇಷ್ಟಪಟ್ಟರೆ ನನಗೂ ಖುಷಿ ಎಂದಿದ್ದಾರೆ ನಟಿ ನಿರುಷ ಗೌಡ.

More from Filmibeat

English summary
Nirusha Gowda said that it doesn't matter if she gets a small role but people should appreciate her
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X