ಕಟೀಲು ದುರ್ಗಾ ಪರಮೇಶ್ವರಿ ಆಶೀರ್ವಾದ ಪಡೆದ ಗಟ್ಟಿಮೇಳ ಖ್ಯಾತಿಯ ನಿಶಾ, ಅನ್ವಿತಾ ಸಾಗರ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ರವಿ ಕೃಷ್ಣನ್ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ತುಳುನಾಡು ಮಂಗಳೂರಿಗೆ ಆಗಮಿಸಿದ ಅವರು ಅನ್ವಿತಾ ಸಾಗರ್ ಜೊತೆ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
ನಟಿ ಅನ್ವಿತಾ ಸಾಗರ್ ಕೂಡ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಶಿಷ್ಠನ ತಂಗಿ ಪಾತ್ರದಲ್ಲಿ ಮಿಂಚಿದ್ದಾರೆ. ಇವರು ಕೂಡ ಮೂಲತಃ ಮಂಗಳೂರಿನವರೆ ಆಗಿರುವುದರಿಂದ ಆಗಾಗ ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇನ್ನೂ ಕರಾವಳಿ ಜನತೆ ಬಹಳ ಪ್ರಾಮುಖ್ಯತೆ ಕೊಡುವುದು ದೇವರಿಗೆ. ಮಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನವು ಕೂಡ ಒಂದು. ಇಲ್ಲಿ ಬಂದು ದೇವರ ಕೃಪೆಗೆ ಪಾತ್ರರಾದರೆ ಅಂದುಕೊಂಡಿರುವುದುದೆಲ್ಲ ನಿರ್ವಿಘ್ನಾವಾಗಿ ಆಗುತ್ತದೆ ಎಂಬುವುದು ಎಲ್ಲರ ನಂಬಿಕೆ.

ಇನ್ನೂ, ನಿಶಾ ರವಿಕೃಷ್ಣನ್ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಬ್ಬಿನ ಗದ್ದೆ ಗ್ರಾಮದಲ್ಲಿ ಜನಿಸಿದವರು. ನಿಶಾ ತಂದೆಯ ಹೆಸರು ರವಿ ಕೃಷ್ಣನ್ ತಾಯಿಯ ಹೆಸರು ಉಷಾ. ಇವರಿಬ್ಬರ ಪ್ರೀತಿಯ ಪುತ್ರಿ ನಿಶಾ ರವಿಕೃಷ್ಣನ್. ನಿಶಾ ಮೊದಲು ಸರ್ವ ಮಂಗಳ ಮಾಂಗಲ್ಯೆ ಎಂಬ ಧಾರಾವಾಹಿಯಲ್ಲಿ ಮೊದಲು ಬಣ್ಣ ಹಚ್ಚಿದರು. ಆ ಬಳಿಕ ಪಾರು ಧಾರಾವಾಹಿಯಲ್ಲಿ ನಟನೆ ಮಾಡಲು ಅವಕಾಶ ಸಿಕ್ಕರೂ ಕಾರಣಾಂತರಗಳಿಂದ ಕಾಣಿಸಿಕೊಂಡಿರಲಿಲ್ಲ.
ಗಟ್ಟಿಮೇಳ ಧಾರವಾಹಿ ಮೂಲಕ ಖ್ಯಾತಿ ಪಡೆದ ನಟಿ
ಆ ಬಳಿಕ ಗಟ್ಟಿಮೇಳ ಧಾರವಾಹಿ ಮೂಲಕ ಜೀ ಕನ್ನಡದಲ್ಲಿ ಅವಕಾಶ ಸಿಕ್ಕಿತು. ಇದರಿಂದ ನಿಶಾ ಬಹಳ ಜನಪ್ರಿಯರಾಗಿ ಇದೀಗ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇದಲ್ಲದೆ ತೆಲುಗು ಧಾರವಾಹಿಗಳಲ್ಲಿಯೂ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ನಿಶಾ. ದೇವಾಲಯದ ಆನೆಯನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಆನೆಯ ಜೊತೆ ಅನ್ವಿತ ಸಾಗರ್ ಹಾಗೆಯೇ ನಿಶಾ ಬಹಳ ಹೊತ್ತು ಕಾಲ ಕಳೆದಿದ್ದಾರೆ..

ಆನೆ ಜೊತೆ ಸೆಲ್ಫಿ ತೆಗೆದುಕೊಂಡ ನಟಿಯರು
ಆನೆಯ ಜೊತೆ ಸೆಲ್ಪಿ ತೆಗೆದು ಆನೆಯ ಸೊಂಡಿಲಿಗೆ ಕಿಸ್ ಮಾಡಿದ್ದನ್ನು ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಇನ್ನೂ ಇವರು ದೇವಾಲಯಕ್ಕೆ ಹೋದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.. ಈ ಸುಂದರವಾದ ವಿಡಿಯೋಗೆ ಕಾಮೆಂಟ್ ಹಾಗೂ ಲೈಕ್‌ಗಳ ಮಹಾಪೂರ ಹರಿದು ಬರುತ್ತಿದೆ.
ಅಮ್ಮನವರ ಆಶೀರ್ವಾದ ಪಡೆದ ಪ್ರೀತಿಯ ಅಮ್ಮು
ನಿಶಾ ರವಿಕೃಷ್ಣನ್ ಹಾಗೂ ಅನ್ವಿತ ಸಾಗರ್ ಬಹಳ ಒಳ್ಳೆಯ ಗೆಳೆತಿಯರು.. ಇಬ್ಬರು ಪ್ರಮುಖ ದೇವಾಲಯಗಳ ಜೊತೆಗೆ ಹಲವಾರು ಜಾಗಗಳಿಗೆ ಪ್ರವಾಸ ಕೂಡ ಮಾಡಿದ್ದಾರೆ. ಇದೇ ರೀತಿ ಕಟೀಲು ದೇವಸ್ಥಾನಕ್ಕೆ ಆಗಮಿಸಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.


Click it and Unblock the Notifications











