ನಿಶಾ ರವಿಕೃಷ್ಣನ್ ಹೊಸ ಮನೆ ಗೃಹಪ್ರವೇಶ; ಯಾರೆಲ್ಲಾ ಸಾಕ್ಷಿಯಾಗಿದ್ರು

ಸ್ವಂತ ಮನೆ ಕಟ್ಟಿಸುವುದು ಎಲ್ಲರಿಗೂ ಕನಸು. ಇದನ್ನು ನನಸು ಮಾಡಿಕೊಳ್ಳಲು ಎಲ್ಲರೂ ಹೋರಾಡುತ್ತಲೇ ಇರುತ್ತಾರೆ. ಮನೆ ನಿರ್ಮಾಣವಾಗಿ ಆಪ್ತರನ್ನೆಲ್ಲಾ ಕರೆದು ಗೃಹಪ್ರವೇಶ ಮಾಡುವುದಕ್ಕಿಂತ ಸಂಭ್ರಮ ಮತ್ತೊಂದಿಲ್ಲ. ಸದ್ಯ ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಇದೇ ಸಂತಸದಲ್ಲಿದ್ದಾರೆ.

ನಿಶಾ ರವಿಕೃಷ್ಣನ್ ಹೊಸದಾಗಿ ಮನೆ ಕಟ್ಟಿಸಿದ್ದರು ಗೃಹ ಪ್ರವೇಶ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲಿ ಕೂಡ ಆಕೆ ಈಗ ನಟಿಸುತ್ತಿದ್ದಾರೆ. ತೆಲುಗು ವೀಕ್ಷಕರ ಮನಗೆದ್ದಿದ್ದಾರೆ. 'ಸರ್ವ ಮಂಗಳ ಮಾಂಗಲ್ಯೆ' ನಿಶಾ ನಟಿಸಿದ ಮೊದಲ ಧಾರಾವಾಹಿ. ಬಳಿಕ 'ಗಟ್ಟಿಮೇಳ' ಧಾರಾವಾಹಿಯ ಅಮೂಲ್ಯ ಪಾತ್ರದ ಮೂಲಕ ಮೋಡಿ ಮಾಡಿದ್ದರು. ರೌಡಿ ಬೇಬಿ ಎಂದೇ ಗಮನ ಸೆಳೆದಿದ್ದರು.

Nisha Ravikrishnan moves into new home shares housewarming ceremony pictures

'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗಲೇ 'ಮುತ್ಯಮಂಥಾ ಮುದ್ದು' ಎಂಬ ತೆಲುಗು ಧಾರಾವಾಹಿಗೆ ಆಯ್ಕೆ ಆಗಿದ್ದರು. ಗೀತಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರ ಬೆನ್ನಲ್ಲೇ 'ಅಮ್ಮಾಯಿಗಾರು' ಧಾರಾವಾಹಿಯ ಲೀಡ್ ರೋಲ್‌ನಲ್ಲಿ ನಟಿಸುವಂತಾಗಿತ್ತು. ಜೊತೆ ಕನ್ನಡದಲ್ಲಿ ಈಗ 'ಅಣ್ಣಯ್ಯ' ಧಾರಾವಾಹಿಯ ಪಾರು ಆಗಿ ವೀಕ್ಷಕರ ಮನಗೆದ್ದಿದ್ದಾರೆ.

ತಾವು ಕೂಟಿಟ್ಟ ಹಣದಲ್ಲಿ ಮನೆ ಕಟ್ಟಿಸಿ ನಿಶಾ ಸಂತಸಪಟ್ಟಿದ್ದಾರೆ. ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪೋಷಕರ ಜೊತೆ ಪೂಜೆಯಲ್ಲಿ ಭಾಗಿ ಆಗಿದ್ದಾರೆ. 'ಗಟ್ಟಿಮೇಳ' ಹಾಗೂ 'ಅಣ್ಣಯ್ಯ' ಧಾರಾವಾಹಿಯ ಸಹ ಕಲಾವಿದರೆಲ್ಲಾ ನಿಶಾ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭದಲ್ಲಿ ಭಾಗಿ ಆಗಿ ಉಡುಗೊರೆ ನೀಡಿ ಅಭಿನಂದನೆ ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿದ್ದು ಮೂಲಿಮನಿ, ಚೈತ್ರಾ ಆಚಾರ್, ವಿಕಾಶ್ ಉತ್ತಯ್ಯ, ರವಿಚಂದ್ರ, ಗುಂಡಮ್ಮ ಖ್ಯಾತಿಯ ರಶ್ಮಿ, ಜಿಮ್ ಸೀನಾ ಖ್ಯಾತಿಯ ಸುಷ್ಮಿತ್ ಜೈನ್, ಹಿರಿಯ ನಟಿ ಸುಧಾ ನರಸಿಂಹರಾಜು, ನಟಿ ಅಶ್ವಿನಿ ಸೇರಿದಂತೆ ಹಲವರು ನಿಶಾ ರವಿಕೃಷ್ಣನ್ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಆ ಫೋಟೊಗಳನ್ನು ನಿಶಾ ಹಂಚಿಕೊಂಡಿದ್ದಾರೆ.

ಚಿಕ್ಕಂದಿನಲ್ಲೇ ಚಿಂಟು ಟಿವಿಯ ನಿರೂಪಕಿಯಾಗಿ ನಿಶಾ ಬಣ್ಣ ಹಚ್ಚಿದ್ದರು. 6ನೇ ತರಗತಿಯಿಂದ 10ನೇ ತರಗತಿ ಅಂದರೆ 4 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ್ದರು. ಪಿಯುಸಿ ಓದಿ ಮುಗಿಸಿದ ಬಳಿಕ ಸೀ-ಬ್ಯಾಂಗಲೂರ್ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಸಾಕಷ್ಟು ಆಡಿಷನ್ಸ್ ಕೊಟ್ಟು ಕೊನೆಗೆ 'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿ ಸಹನಟಿ ಅಂದರೆ ತಂಗಿ ಪಾತ್ರ ಸಿಕ್ಕಿತ್ತು. ಆದರೆ 'ಗಟ್ಟಿಮೇಳ' ಧಾರಾವಾಹಿಯ ನಾಯಕಿಯಾಗಿ ಬಳಿಕ ಕಮಾಲ್ ಮಾಡಿದ್ದರು.

ಅಂದಹಾಗೆ ನಿಶಾ ರವಿಕೃಷ್ಣನ್ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ತಾಲೂಕಿನ ಕಬ್ಬಿನಗದ್ದೆ ಗ್ರಾಮದವರು. ಮೂಲತಃ ಮಲೆಯಾಳಿ. ಕರ್ನಾಟಿಕ್ ಮ್ಯೂಸಿಕ್ ಹಾಗೂ ಭರತನಾಟ್ಯವನ್ನು ಕೂಡ ಕಲಿತಿದ್ದಾರೆ. ನಿಶಾ ಅವರ ತಂದೆ ರವಿಕೃಷ್ಣನ್ ಕೆಲ ದಿನಗಳ ಕಾಲ ಮಂಡ್ಯ ರಮೇಶ್ ಅವರ ನಾಟಕ ತಂಡದಲ್ಲಿ ನಟಿಸಿದ್ದರು. ಹಾಗಾಗಿ ಮಗಳನ್ನು ಕೂಡ ಬಣ್ಣದಲೋಕದತ್ತ ಪ್ರೋತ್ಸಾಹಿಸಿದ್ದರು.

'ಇಷ್ಟಕಾಮ್ಯ' ಚಿತ್ರದ 'ನೀ ನನಗೋಸ್ಕರ' ಹಾಡಿನಲ್ಲಿ ಡ್ಯಾನ್ಸರ್ಸ್ ಗುಂಪಿನಲ್ಲಿ ನಿಶಾ ಕೂಡ ಇದ್ದರು. 2019 ರ ಬೆಂಗಳೂರು ಟೈಮ್ಸ್‌ ಮೋಸ್ಟ್ ಡಿಸೆರಬಲ್ ವುಮೆನ್ ಇನ್ ಟೆಲಿವಿಷನ್ ಪಟ್ಟಿಯಲ್ಲಿ ನಿಶಾ ಸ್ಥಾನ ಪಡೆದಿದ್ದರು. ಜೀ ಕನ್ನಡ ಹಾಗೂ ಜೀ ತೆಲುಗು ಕುಟುಂಬ ಅವಾರ್ಡ್ಸ್‌ನಲ್ಲಿ ನಟನೆಗಾಗಿ ಕೆಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ನಿಶಾ ಸ್ನೇಹಿತರ ಜೊತೆ ಆಗಾಗ್ಗೆ ರೀಲ್ಸ್ ಮಾಡುತ್ತಿರುತ್ತಾರೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಧಾರಾವಾಹಿಯಲ್ಲಿ ನಟಿಸ್ತಿದ್ದು ಒಳ್ಳೆ ಸಂಭಾವನೆ ಸಹ ಸಿಗುತ್ತಿದೆ.

FAQs
Filmibeat Entertainment

More from Filmibeat

Read more about: actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X