ನಿಶಾ ರವಿಕೃಷ್ಣನ್ ಮುಖಕ್ಕೆ ಮುತ್ತಿಡುವ ಟಾಸ್ಕ್; ತೆಲುಗು ವೇದಿಕೆಯಲ್ಲಿ ರೌಡಿ ಬೇಬಿಗೆ ಕಸಿವಿಸಿ
ಪಾರ್ವತಿಗೆ ಬೇರೆ ಸಾಟಿ ಯಾರೂ ಇಲ್ಲ. ಕನ್ನಡ ಕಿರುತೆರೆಯಲ್ಲಿ ಪಾರ್ವತಿಯನ್ನು ನಿತ್ಯ ನೋಡಲು ಅಭಿಮಾನಿಗಳು ಟಿವಿ ಮುಂದೆ ಕಾದು ಕುಳಿತಿರುತ್ತಾರೆ. 'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವುಗೆ ಜೋಡಿಯಾಗಿರುವ ಪಾರು ಯಾರ ಜೊತೆಗೇ ನಟಿಸಿದರೂ ಸೂಪರ್ ಆಗಿಯೇ ಕಾಣುತ್ತಾರೆ. 'ಗಟ್ಟಿಮೇಳ' ಧಾರಾವಾಹಿ ಮೂಲಕ ರೌಡಿ ಬೇಬಿ ಅಮೂಲ್ಯ ಆಗಿದ್ದ ಹುಡುಗಿ ಈಗ ಪಾರ್ವತಿಯಾಗಿ ಕಂಪ್ಲೀಟ್ ಫ್ಯಾಮಿಲಿ ಗರ್ಲ್ ಆಗಿದ್ದಾರೆ.
ನಟಿ ನಿಶಾ ರವಿಕೃಷ್ಣನ್ ಕಳೆದ ಐದಾರು ವರ್ಷದಿಂದ ನಾಯಕಿಯಾಗಿ ಎಲ್ಲೆಡೆ ಮಿಂಚುತ್ತಿದ್ದಾರೆ. ಎಲ್ಲೂ ಗ್ಯಾಪ್ ಕೊಡದೇ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಸಾಮಾನ್ಯವಾಗಿ ನಾಯಕಿ ಪಾತ್ರದಲ್ಲಿ ನಟಿಸಿದ ಬಳಿಕ ಕಡಿಮೆ ಎಂದರೂ ಎರಡು ವರ್ಷಗಳ ಕಾಲ ಆ ನಾಯಕಿ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುವುದಿಲ್ಲ.

ರೌಡಿ ಬೇಬಿ ಮೋಡಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ರೌಡಿ ಬೇಬಿ ಅಮೂಲ್ಯ ಪಾತ್ರ ಮುಗಿಯುವ ಮುನ್ನವೇ ತೆಲುಗಿನ 'ಮುತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಾಯಕಿಯಾಗಿಯೇ ನಟಿಸಿದ್ದರು. ಬಳಿಕ 'ಅಮ್ಮಾಯಿಗಾರು' ಧಾರಾವಾಹಿಯಲ್ಲಿ ಹೀರೋಯಿನ್ ರೋಲ್‌ನಲ್ಲೇ ನಟಿಸುತ್ತಿದ್ದು, ಇದೇ ವೇಳೆ ಈಗ ಕನ್ನಡದ 'ಅಣ್ಣಯ್ಯ' ಧಾರಾವಾಹಿಗೂ ನಾಯಕಿಯಾಗಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ನಾಯಕಿ ರೋಲ್‌ನಲ್ಲಿ ಮಿಂಚುತ್ತಿರುವ ನಟಿ ಮುಜುಗರವನ್ನು ಎದುರಿಸುವಂತಾಗಿದೆ. ಟಿವಿ ಚಾನೆಲ್‌ಗಳಲ್ಲಿ ಒಂದಾದ ಮೇಲೆ ಒಂದು ಪೈಪೋಟಿ ನೀಡಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತವೆ. ಅದರಲ್ಲೂ ಕಾಮಿಡಿ ಶೋಗಳ ಬಗ್ಗೆ ಮಾತನಾಡುವಂತಿಲ್ಲ.
ತೆಲುಗಿನ ಸೂಪರ್ ಹಿಟ್ ಜೋಡಿ
ಎಲ್ಲಾ ವಾಹಿನಿಗಳು ಕೂಡ ಕಾಮಿಡಿ ಶೋಗಳಲ್ಲಿ ಡಬಲ್ ಮೀನಿಂಗ್‌ಗೆ ಹೆಚ್ಚು ಒತ್ತು ಕೊಡುತ್ತವೆ. ಹೀಗಿರುವಾಗ ಇತ್ತೀಚೆಗೆ ಕೆಲ ವಾಹಿನಿಗಳ ಕಾರ್ಯಕ್ರಮದಕ್ಕ ಆಗಮಿಸಿದ್ದ ಕಿರುತೆರೆ ನಟಿ ಮತ್ತು ನಟಿಯರ ವೈಯಕ್ತಿಕ ವಿಚಾರಗಳು ರಿವೀಲ್ ಆಗಿದ್ದು ಉಂಟು. ಆದರೆ ಇದೀಗ ನಟಿ ನಿಶಾ ರವಿಕೃಷ್ಣನ್ ಅವರಿಗೆ ಮುಜುಗರ ಉಂಟಾಗಿದೆ. ತೆಲುಗಿನಲ್ಲಿ ಪ್ರಸಾರವಾಗುತ್ತಿರುವ 'ಅಮ್ಮಾಯಿಗಾರು' ಧಾರಾವಾಹಿ ಸೂಪರ್ ಹಿಟ್ ಆಗಿದೆ. ಇದರ ಕನ್ನಡ ವರ್ಷನ್ ಕೂಡ ಜೀ ಕನ್ನಡದಲ್ಲಿ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿ ಪ್ರಸಾರವಾಗುತ್ತಿದೆ. ತೆಲುಗಿನಲ್ಲಿ ನಟಿ ನಿಶಾ ರವಿಕೃಷ್ಣನ್ ಅವರು ನಟ ಯಶವಂತ್ ಜೊತೆಗೆ ನಟಿಸುತ್ತಿದ್ದಾರೆ. ಸದ್ಯ ಈ ಜೋಡಿಗಳು ತೆಲುಗು ಕಿರುತೆರೆಯಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ.
ಮುಜುಗರ ತಂದ ಫನ್ ಟಾಸ್ಕ್
ಜೀ ತೆಲುಗು ವಾಹಿನಿಯಲ್ಲಿ ಸೂಪರ್ 'ಸೀರಿಯಲ್ ಚಾಂಪಿಯನ್‌ಶಿಪ್' ಕಾರ್ಯಕ್ರಮಕ್ಕೆ ನಟಿ ನಿಶಾ ರವಿಕೃಷ್ಣನ್ ಮತ್ತು ನಟ ಯಶವಂತ್ ಭಾಗವಹಿಸಿದ್ದರು. ಇದರಲ್ಲಿ ನಡೆದ ಫನ್ ಟಾಸ್ಕ್‌ಗಾಗಿ ಯಶವಂತ್ ತುಟಿಗೆ ಲಿಪ್ ಸ್ಟಿಕ್ ಹಚ್ಚಲಾಯ್ತು. ನಿಶಾ ಮುಖಕ್ಕೆ ಮುತ್ತಿತ್ತು ಲಿಪ್ ಸ್ಟಿಕ್ ಮಾರ್ಕ್ ಇಡಬೇಕು ಎಂದು ಹೇಳಲಾಯ್ತು. ಆಗ ಯಶವಂತ್ ಅವರು ನಿಶಾ ಅವರ ಹಣೆಗೆ ಮುತ್ತಿಟ್ಟರು. ಇಷ್ಟಕ್ಕೇ ಸುಮ್ಮನಾಗದ ನಿರೂಪಕರು ಮತ್ತೊಂದು ಮುತ್ತು ಕೊಡಲೇ ಬೇಕು ಹಠ ಮಾಡಿದರು. ಎಲ್ಲರ ಒತ್ತಾಯದ ಮೇರೆಗೆ ಯಶವಂತ್ ಅವರು ಕೂಡ ಮುತ್ತಿಡಲು ಮುಂದಾಗಿದ್ದು, ನಿಶಾ ಅವರಗೆ ಇದು ಇಷ್ಟವಿಲ್ಲ ಎಂಬುದು ಸ್ಪಷ್ಟವಾಗಿ ಎಲ್ಲರಿಗೂ ಕಂಡಿದೆ. ಯಾಕೆಂದರೆ ನಿಶಾ ಅವರು ಕಣ್ಸನ್ನೆಯಲ್ಲೇ ಬೇಡ ಎಂದಿದ್ದಾರೆ. ಆದರೆ ವಿಧಿಯಿಲ್ಲದೇ ಸುಮ್ಮನಾಗಿದ್ದಾರೆ. ಇದರಿಂದ ನಿಶಾ ಅವರಿಗೆ ಮುಜುಗರ ಉಂಟಾಗಿದೆ.
ನೆಟ್ಟಿಗರು ಗರಂ
ಇನ್ನು ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಬಲವಂತವಾಗಿ ಹೀಗೆ ಮಾಡಿಸಿದ್ದು ಸರಿಯಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತಷ್ಟು ಮಂದಿ ನಿಶಾ ಸುಮ್ಮನಿದ್ದಿದ್ದೇ ತಪ್ಪು ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಇನ್ನೂ ಕೆಲವರು ಕಾರ್ಯಕ್ರಮದಲ್ಲಿದ್ದ ಜಡ್ಜ್‌ಗಳನ್ನು ಬೈದಿದ್ದಾರೆ. ಒಟ್ನಲ್ಲಿ ಹಲವು ವರ್ಷಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ನಿಶಾ ಅವರಿಗೆ ಕರ್ನಾಟಕ, ತೆಲುಗು ನಾಡಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದು, ಈ ವೀಡಿಯೋದಿಂದಾಗ ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ.


Click it and Unblock the Notifications











