For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಕಲಹ; ಪತಿಯ ಅನೈತಿಕ ಸಂಬಂಧ ಬಹಿರಂಗ ಪಡಿಸಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ನಟಿ ನಿಶಾ

  |

  ಹಿಂದಿ ಕಿರುತೆರೆಯ ಸ್ಟಾರ್ ಕಪಲ್ ಕರಣ್ ಮೆಹ್ರಾ ಮತ್ತು ನಿಶಾ ನಡುವಿನ ದಾಂಪತ್ಯ ಕಲಹ ಮತ್ತೊಂದು ಹಂತಕ್ಕೆ ಹೋಗಿದೆ. ಪತಿಯ ವಿರುದ್ಧ ಹಲ್ಲೆ ಆರೋಪ ಮಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದ ನಿಶಾ ಈಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

  ನಿಶಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿನ್ನೆ (ಜೂನ್ 1) ಕರಣ್ ಮೆಹ್ರಾನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಕರಣ್ ಹೊರಬಂದು ಪತ್ನಿಯ ವಿರುದ್ಧ ಸಿಡಿದೆದ್ದಿದ್ದರು. ಪತ್ನಿಯೇ ಗೋಡೆಗೆ ತಲೆ ಗುದ್ದಿಕೊಂಡು ತನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

  ಜಾಮೀನಿನ ಮೇಲೆ ಹೊರಬಂದ ಬಳಿಕ ಪತ್ನಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಕರಣ್ ಮೆಹ್ರಾಜಾಮೀನಿನ ಮೇಲೆ ಹೊರಬಂದ ಬಳಿಕ ಪತ್ನಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಕರಣ್ ಮೆಹ್ರಾ

  ಇದೆಲ್ಲ ಬೆಳವಣಿಗೆಗಳ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಕರಣ್ ಪತ್ನಿ, ನಟಿ ನಿಶಾ ಪತಿಯ ವಿರುದ್ಧ್ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲೇ ಕರಣ್ ಅನೈತಿಕ ಸಂಬಂಧ ಬಯಲಿಗೆಳೆಯುವ ಮೂಲಕ ಕಣ್ಣೀರು ಹಾಕಿದ್ದಾರೆ. ಬೈಪೋಲರ್ ಡಿಸಾರ್ಡರ್ ಇರುವ ಬಗ್ಗೆ ಒಪ್ಪಿಕೊಂಡಿರುವ ನಿಶಾ ತಾನು ಸೈಕೋ ಅಲ್ಲ ಎಂದಿದ್ದಾರೆ. ಮುಂದೆ ಓದಿ...

  ಕರಣ್ ಗೆ ಅನೈತಿಕ ಸಂಬಂಧವಿದೆ

  ಕರಣ್ ಗೆ ಅನೈತಿಕ ಸಂಬಂಧವಿದೆ

  ಕರಣ್‌ಗೆ ಅನೈತಿಕ ಸಂಬಂಧವಿದೆ. ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಿರಂತರವಾಗಿ ನಿಂದನೆ ಮಾಡುತ್ತಾ ಬಂದಿದ್ದಾರೆ. ಆದೆರ ನಾನು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ನನ್ನ ಬಳಿ ಇದಕ್ಕೆಲ್ಲ ಸಾಕ್ಷಿಗಳಿವೆ' ಎಂದು ನಿಶಾ ಹೇಳಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕರಣ್ ಬೇರೊಬ್ಬ ಮಹಿಳೆ ಜೊತೆ ಇದ್ದಿದ್ದನ್ನು ನೋಡಿದ್ದೇನೆ. ಆಕೆಯ ಜೊತೆಗಿನ ಚಾಟ್ ಮಾಡಿದ ಸಂದೇಶಗಳನ್ನು ನೋಡಿದ್ದೇನೆ.

  ಎಲ್ಲವನ್ನೂ ನನ್ನ ಕುಟುಂಬದಿಂದ ಬಚ್ಚಿಟ್ಟಿದ್ದೆ

  ಎಲ್ಲವನ್ನೂ ನನ್ನ ಕುಟುಂಬದಿಂದ ಬಚ್ಚಿಟ್ಟಿದ್ದೆ

  'ಬಳಿಕ ಈ ಬಗ್ಗೆ ಮಾತನಾಡಲು ಮಾಡಲು ಕೇಳಿಕೊಂಡೆ. ಆದರೆ ಮಾತನಾಡಲು ಆಸಕ್ತಿ ತೋರಲಿಲ್ಲ. ಕೆಲವು ವಾರಗಳ ಹಿಂದೆ ನನ್ನ ತಾಯಿಗೆ ಈ ವಿಷಯ ಗೊತ್ತಾಗಿದೆ. ನಾನು ನನ್ನ ಸಂಸಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದರಿಂದ ನಾನು ಇದನ್ನು ಕುಟುಂಬದಿಂದ ಮತ್ತು ಸ್ನೇಹಿತರಿಂದ ಬಚ್ಚಿಟ್ಟಿದ್ದೆ.' ಎಂದಿದ್ದಾರೆ.

  ನನ್ನ ಮಗನಿಗಾಗಿ ಏನೆ ಕೆಲಸ ಮಾಡಲು ಸಿದ್ಧಳಿದ್ದೇನೆ

  ನನ್ನ ಮಗನಿಗಾಗಿ ಏನೆ ಕೆಲಸ ಮಾಡಲು ಸಿದ್ಧಳಿದ್ದೇನೆ

  'ಹೀಗೆ ಮುಂದುವರೆದರೆ ಬೇರೆ ಬೇರೆ ಆಗಬೇಕಾಗುತ್ತೆ ಎಂದ ಹೇಳಿದ್ದೆ. ಅದನ್ನು ಒಪ್ಪಿಕೊಂಡಿದ್ದರು. ಆದರೆ ಕರಣ್ ಅದನ್ನೇ ಮುಂದುವರೆಸಿದರು. ಬಳಿಕ ಬೇರೆ ಆಗಲು ನಿರ್ಧರಿಸಿ ನಾನು ಕೆಲಸ ಹುಡುಕಲು ಪ್ರಾರಂಭಿಸಿದೆ. ಮಗನಿನಾಗಿ ಏನು ಕೆಲಸ ಮಾಡಲು ಸಿದ್ಧಳಿದ್ದೇನೆ' ಎಂದು ಹೇಳಿದ್ದಾರೆ.

  ಇಬ್ಬರದ್ದು ಪ್ರೇಮ ವಿವಾಹ

  ಇಬ್ಬರದ್ದು ಪ್ರೇಮ ವಿವಾಹ

  ಕರಣ್ ಮತ್ತು ನಿಶಾ ಅವರದ್ದು ಪ್ರೇಮ ವಿವಾಹ. 7 ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದ ಇಬ್ಬರು 2012ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳಾಗಿದ್ದು, ಈ ದಂಪತಿಗೆ 4 ವರ್ಷದ ಒಬ್ಬ ಮಗನಿದ್ದಾನೆ. ಕರಣ್ ಮೆಹ್ರಾ ಹಿಂದಿ ಧಾರಾವಾಹಿ ಲೋಕದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಜೊತೆ ಹಿಂದಿ ಬಿಗ್ ಬಾಸ್ 10ರಲ್ಲೂ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇನ್ನು ಪತ್ನಿ ನಿಶಾ ಕೂಡ ಕಿರುತೆರೆಯ ಸ್ಟಾರ್.

  Read more about: tv police ಟಿವಿ
  English summary
  Nisha Rawal reveals her husband Karan Mehra having an extramarital affair.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X