ಒಂದು ವರ್ಷ ಪೂರೈಸಿದ 'ಅವನು ಮತ್ತೆ ಶ್ರಾವಣಿ'; ಮುಂದಿನ ದಿನಗಳಲ್ಲಿ ನಿಶಿತಾಗೆ ಮೋಸ ಮಾಡಿದ್ದು ಯಾರು ಅಂತ ಗೊತ್ತಾಗುತ್ತೆ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅವನು ಮತ್ತು ಶ್ರಾವಣಿ' ಕೂಡಾ ಒಂದು. ಕೌಟುಂಬಿಕ ಕಥಾಹಂದರವುಳ್ಳ ಈ ಧಾರಾವಾಹಿಯು ಇದೀಗ ಒಂದು ವರ್ಷವನ್ನು ಪೂರೈಸಿದೆ. 'ಅವನು ಮತ್ತು ಶ್ರಾವಣಿ'ಯಲ್ಲಿ ನಾಯಕಿ ಶ್ರಾವಣಿ ತಂಗಿ ನಿಶಿತಾ ಆಗಿ ನಟಿಸುತ್ತಿರುವ ಪೂಜಾ ರಮೇಶ್ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
"ಅವನು ಮತ್ತು ಶ್ರಾವಣಿ ಧಾರಾವಾಹಿಯು ಒಂದು ವರ್ಷ ಪೂರೈಸಿದೆ. ನನಗಂತೂ ತುಂಬಾನೇ ಖುಷಿಯಾಗುತ್ತಿದೆ. ನಾನು ಕೂಡಾ ಈ ಧಾರಾವಾಹಿಯ ಭಾಗವಾಗಿದ್ದೇನೆ ಎನ್ನುವುದೇ ನನಗೆ ಸಂತಸದ ವಿಚಾರ. ಕಿರುತೆರೆ ವೀಕ್ಷಕರು ನಿಶಿತಾ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಧಾರಾವಾಹಿಯನ್ನು ಕೂಡಾ ಕಿರುತೆರೆ ವೀಕ್ಷಕರು ಇಷ್ಟಪಟ್ಟಿದ್ದಾರೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ಪೂಜಾ ರಮೇಶ್ ಹೇಳಿಕೊಂಡಿದ್ದಾರೆ.

"ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಸೀರಿಯಲ್ ಅವನು ಮತ್ತು ಶ್ರಾವಣಿ ಎನ್ನುವುದು ಕೂಡಾ ಖುಷಿಯ ವಿಚಾರವೇ. ಇನ್ನು ಈ ಧಾರಾವಾಹಿಯು ನನಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ಅದು ಏನು ಎಂದು ಈಗ ಡಿಟೈಲ್ ಆಗಿ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಕಾಯ್ತಾ ಇರಿ. ಸದ್ಯದಲ್ಲಿಯೇ ಇನ್ನು ಖುಷಿಯ ವಿಚಾರಗಳನ್ನು ಶೇರ್ ಮಾಡುತ್ತೇನೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಪೂಜಾ ರಮೇಶ್ ಹಂಚಿಕೊಂಡಿದ್ದಾರೆ.
"ಅಂದ ಹಾಗೇ ಮುಂದಿನ ದಿನಗಳಲ್ಲಿ ನಿಶಿತಾ ಪಾತ್ರದಲ್ಲಿಯೂ ಬದಲಾವಣೆ ಆಗ್ತಿದೆ. ನಿಶಿತಾಳಿಗೆ ಯಾರೆಲ್ಲಾ ಮೋಸ ಮಾಡ್ತಿದ್ದಾರೆ ಅಂತ ಗೊತ್ತಾಗಿದೆ. ತನಗೆ ಮೋಸ ಮಾಡಿದವರಿಗೆ ಪಾಠ ಕಲಿಸಬೇಕು ಎಂದು ನಿಶಿತಾ ನಿರ್ಧರಿಸಿದ್ದಾಳೆ. ಇನ್ನು ಮುಂದೆ ನಿಶಿತಾ ಪಾತ್ರ ನೆಗೆಟಿವ್ ಪಾತ್ರವಾಗಿ ಬದಲಾಗಲಿದೆ. ಒಟ್ಟಿನಲ್ಲಿ ಇನ್ನು ಮುಂದೆ ವೀಕ್ಷಕರು ನಿಶಿತಾ ಅವರ ಮಗದೊಂದು ಮುಖವನ್ನು ಕೂಡಾ ನೋಡಬಹುದು" ಎಂದು ನಟಿ ಪೂಜಾ ರಮೇಶ್ ಹೇಳಿಕೊಂಡಿದ್ದಾರೆ.
'ಅವನು ಮತ್ತೆ ಶ್ರಾವಣಿ' ಪೂಜಾ ರಮೇಶ್ ಅವರಿಗೆ ಇದು ಎರಡನೇ ಧಾರಾವಾಹಿ ಹೌದು. ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಿದ್ದ ಪೂಜಾ ರಮೇಶ್ ಅವರು ಕಿರುತೆರೆಗೆ ಕಾಲಿಟ್ಟದ್ದು 'ಗಿಣಿರಾಮ' ಧಾರಾವಾಹಿಯ ಮೂಲಕ. 'ಗಿಣಿರಾಮ' ಧಾರಾವಾಹಿಯಲ್ಲಿ ಅನಘಾ ಅಣ್ಣಾಜಿ ಪಾತ್ರದಲ್ಲಿ ನಟಿಸಿದ್ದ ಪೂಜಾ ರಮೇಶ್ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. 'ಗಿಣಿರಾಮ' ಧಾರಾವಾಹಿಯು ಸಂಪೂರ್ಣ ಉತ್ತರ ಕನ್ನಡ ಸೊಬಗಿನದಾಗಿದ್ದು, ಅನಘಾ ಅಣ್ಣಾಜಿ ಪಾತ್ರಕ್ಕಾಗಿ ಉತ್ತರ ಕನ್ನಡದ ಗ್ರಾಂಥಿಕ ಭಾಷೆಯನ್ನು ಕೂಡಾ ಈಕೆ ಕಲಿತುಕೊಂಡಿದ್ದರು.

'ಅವನು ಮತ್ತು ಶ್ರಾವಣಿ'ಯ ನಿಶಿತಾ ಪಾತ್ರಕ್ಕೂ ಪೂಜಾ ರಮೇಶ್ ಅವರಿಗೂಲ ಸಾಕಷ್ಟು ಸಾಮ್ಯತೆಯಿದೆ ಎನ್ನಬಹುದು. ನಿಶಿತಾ ತುಂಬಾ ಸ್ಟ್ರೈಟ್ ಫಾರ್ವರ್ಡ್. ಯಾರಿಗೂ ಹೆದರದ ಆಕೆ, ಅವಳಿಗೆ ಏನೂ ಅನ್ನಿಸುತ್ತದೋ ಅದನ್ನೇ ಮಾಡುತ್ತಾಳೆ. ಸಿಂಪಲ್ಲಾಗಿ ಹೇಳಬೇಕೆಂದರೆ ಅದು ಒಂದು ಬಬ್ಲಿ ಪಾತ್ರ ಎಂದು ಈ ಹಿಂದೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಪೂಜಾ ರಮೇಶ್ ಹೇಳಿಕೊಂಡಿದ್ದರು.
ನಟನೆಯ ಹೊರತಾಗಿ ಮಾಡೆಲಿಂಗ್ ಜಗತ್ತಿನಲ್ಲಿಯೂ ಪೂಜಾ ಗುರುತಿಸಿಕೊಂಡಿದ್ದಾರೆ. ಹತ್ತು ಹಲವು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿರುವ ಈಕೆ ಕೆಲವೊಂದು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ವಿಕ ನವತಾರೆ 2019ರ ಸ್ಪರ್ಧಿಯಾಗಿದ್ದ ಈಕೆ ವಿನ್ನರ್ ಆಗಿ ಹೊರಹೊಮ್ಮಿದ್ದರು. ಜೊತೆಗೆ ತಮಿಳುನಾಡು ಟೂರಿಸಂ ಬೋರ್ಡ್‌ನ ಜಾಹೀರಾತಿನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಇನ್ನು ಮುಖ್ಯವಾದ ವಿಚಾರವೆಂದರೆ ಸ್ಪರ್ಶ್ ಮಸಾಲ ಜಾಹೀತಾರಿನಲ್ಲಿ ಪ್ರಭುದೇವ ಅವರ ಜೊತೆಗೆ ಈಕೆ ಅಭಿನಯಿಸಿದ್ದಾರೆ.


Click it and Unblock the Notifications











