DKD: ರೊಮ್ಯಾಂಟಿಕ್ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡಿ ಸ್ಪರ್ಧಿ ಕೆನ್ನೆಗೆ ಮುತ್ತಿಟ್ಟ ನಟಿ ನಿಶ್ವಿಕಾ ನಾಯ್ಡು
ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ವೀಕೆಂಡ್‌ನಲ್ಲಿ ವೀಕ್ಷಕರನ್ನು ರಂಜಿಸ್ತಿದೆ. ಶಿವರಾಜ್‌ಕುಮಾರ್, ವಿಜಯ್ ರಾಘವೇಂದ್ರ ಹಾಗೂ ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಒಳ್ಳೆ ಪರ್ಫಾರ್ಮೆನ್ಸ್‌ಗೆ ತಮ್ಮದೇ ಶೈಲಿಯಲ್ಲಿ ಮೆಚ್ಚುಗೆ ಸೂಚಿಸುತ್ತಾರೆ.
ವಾರದ ಹಿಂದೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಶೋಗಳ ಮಹಾಸಂಗಮ ನಡೆದು ವೀಕ್ಷಕರ ಮನಗೆದ್ದಿತ್ತು. ಈ ವಾರ ಡಿಕೆಡಿಯಲ್ಲಿ ವಿಭಿನ್ನ ಪರ್ಫಾರ್ಮೆನ್ಸ್‌ಗಳಿವೆ. ಈ ವೀಕೆಂಡ್ 'ಲವ್ & ರೊಮ್ಯಾನ್ಸ್' ರೌಂಡ್ ಕಾನ್ಸೆಪ್ಟ್‌ನಲ್ಲಿ ಪರ್ಫಾರ್ಮನ್ಸ್ ನಡೀತಿದೆ. ಸ್ಪರ್ಧಿಗಳು ರೊಮ್ಯಾಂಟಿಕ್ ನಂಬರ್‌ಗಳಿಗೆ ಪರ್ಫಾರ್ಮ್ ಮಾಡುತ್ತಿದ್ದಾರೆ.

ಅಂದಹಾಗೆ ಹಾಸ್ಯನಟ ಹುಲಿ ಕಾರ್ತಿಕ್ 'ಜಂಗ್ಲಿ' ಚಿತ್ರದ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ದುನಿಯಾ ವಿಜಯ್ ಹಾಗೂ ಐಂದ್ರಿತಾ ರೇ ಮಿಂಚಿದ್ದ ಹಾಡಿಗೆ ಕಾರ್ತಿಕ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಶಿವಣ್ಣ, ನಿಶ್ವಿಕಾ, ವಿಝಯ್ ರಾಘವೇಂದ್ರ ಎಲ್ಲರೂ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಹೈ ಬಜೆಟ್ ಆಲ್ಬಮ್ ಸಾಂಗ್ ತರ ಇತ್ತು ಎಂದು ನಿಶ್ವಿಕಾ ನಾಯ್ಡು ಮೆಚ್ಚಿಕೊಂಡಿದ್ದಾರೆ.
ಇಡೀ ಪರ್ಫಾರ್ಮೆನ್ಸ್‌ನಲ್ಲಿ ನಿನ್ನ ಸ್ವ್ಯಾಗ್ ಸೂಪರ್, ಬ್ಯಾಂಗ್ ಬ್ಯಾಂಗ್ ಎಂದು ಶಿವಣ್ಣ ಕಾಮೆಂಟ್ಸ್ ಕೊಟ್ಟಿದ್ದಾರೆ. ಕೊನೆಗೆ ನಿಶ್ವಿಕಾ 10 ಸಾವಿರ ರೂಪಾಯಿ ಬೇಕಾ? ಒಂದು ಮುತ್ತು ಬೇಕಾ? ಎಂದು ಕೇಳಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಈ ಅವಕಾಶ ಮತ್ತೆ ಸಿಗಲ್ಲ. ಮುತ್ತು ತಗೋ ಹೋಗು ಎಂದಿದ್ದಾರೆ. ಕಾರ್ತಿಕ್ ಕೆನ್ನೆಗೆ ನಿಶ್ವಿಕಾ ಸಿಹಿಮುತ್ತು ಕೊಟ್ಟಿದ್ದಾರೆ. ಪ್ರೋಮೊ ಫುಲ್ ವೈರಲ್ ಆಗಿದೆ.
ಕನ್ನಡ ನಟಿಯರಲ್ಲಿ ನಿಶ್ವಿಕಾ ನಾಯ್ಡು ಒಳ್ಳೆ ಡ್ಯಾನ್ಸರ್ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. 'ಹಿತ್ತಲಕ ಕರಿಬ್ಯಾಡ' ಹಾಡಿನಲ್ಲಿ ಪ್ರಭುದೇವಗೆ ಸರಿಸಮನಾಗಿ ನಿಶ್ವಿಕಾ ಹೆಜ್ಜೆ ಹಾಕಿ ರಂಗೇರಿಸಿದ್ದರು. ಇತ್ತೀಚೆಗೆ ಶಿವಣ್ಣ ಕೂಡ ನನಗೆ ನಿಶ್ವಿಕಾ ಅವರ ಡ್ಯಾನ್ಸ್ ಬಹಳ ಇಷ್ಟ ಎಂದು ಕಿಲಾಡಿ ಜೂನಿಯರ್ಸ್-ಡಿಕೆಡಿ ಮಹಾಸಂಗಮ ವೇದಿಕೆಯಲ್ಲಿ ಹೇಳಿದ್ದರು. ನನಗೆ ಶ್ರೀದೇವಿ ಹಾಗೂ ಮಾಧುರಿ ದೀಕ್ಷಿತ್ ಇಷ್ಟ. ಅವರಿಬ್ಬರ ಡ್ಯಾನ್ಸ್ ಹಾಗೂ ಅಪಿಯರೆನ್ಸ್ ಇಷ್ಟವಾಗುತ್ತೆ. ಅದೇ ರೀತಿ ಕನ್ನಡದಲ್ಲಿ ನಿಶ್ವಿಕಾ ನಾಯ್ಡು ಡ್ಯಾನ್ಸ್ ಬಹಳ ಇಷ್ಟ ಎಂದಿದ್ದರು.
ನಿಶ್ವಿಕಾ ಅವರ ಹಾಡೊಂದನ್ನು 50 ಸಲ ನೋಡಿದ್ದೀನಿ ಎಂದು ಶಿವಣ್ಣ ಹೇಳಿದ್ದರು. 'ಕರಟಕ ದಮನಕ' ಚಿತ್ರದಲ್ಲಿ ಇಬ್ಬರು ನಟಿಸಿದ್ದರು. ಆದರೆ ಶಿವಣ್ಣಗೆ ಪ್ರಿಯಾ ಆನಂದ್ ನಾಯಕಿ ಆಗಿದ್ದರು. ಪ್ರಭುದೇವ ಜೋಡಿಯಾಗಿ ನಿಶ್ವಿಕಾ ಮಿಂಚಿದ್ದರು. ಇತ್ತೀಚೆಗೆ ಬಂದ 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಹಾಡಿಗೆ ನಿಶ್ವಿಕಾ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದು ಗೊತ್ತೇಯಿದೆ.
8 ವರ್ಷಗಳ ಹಿಂದೆ 'ಅಮ್ಮ ಐ ಲವ್ ಯು' ಚಿತ್ರದ ಮೂಲಕ ನಿಶ್ವಿಕಾ ಬಣ್ಣದಲೋಕಕ್ಕೆ ಬಂದಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ತಮ್ಮ ಡ್ಯಾನ್ಸ್ ಮೂಲಕ ನಿಶ್ವಿಕಾ ಮೋಡಿ ಮಾಡ್ತಾ ಬರ್ತಿದ್ದಾರೆ. 'ಗರಡಿ' ಚಿತ್ರದಲ್ಲಿ 'ಹೊಡಿಲೆರೆ ಹಲಗಿ' ಹಾಡಿಗೆ ನಿಶ್ವಿಕಾ ಕುಣಿದಿದ್ದರು.
ಜೀ ಕನ್ನಡ ವಾಹಿನಿಯ 'ಮಹಾನಟಿ' ಕಾರ್ಯಕ್ರಮದ ತೀರ್ಪುಗಾರ್ತಿಯಾಗಿ ಕೂಡ ನಿಶ್ವಿಕಾ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಶೋಗಳಿಗೂ ತೀರ್ಪುಗಾರ್ತಿಯಾಗಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿದ್ದಾರೆ.


Click it and Unblock the Notifications











