For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಕುಣಿಯಲು ನಿತ್ಯಾನಂದನಿಗೆ ಕೋರ್ಟ್ ವೀಸಾ

  By Srinath
  |

  ಬೆಂಗಳೂರು, ಜುಲೈ 19: ಗುರುಪೂರ್ಣಿಮೆ ದಿನ ಕುಂಡಲಿನೀ ಯೋಗ ನಡೆಸಿದ್ದೇ ಬಂತು ಸ್ವತಃ ನಿತ್ಯಾನಂದ ಸ್ವಾಮಿಗೆ ಆನೆ ಬಲ ಬಂದಿದೆ! ಮೊದಲ ಜಯವಾಗಿ, ನಿತ್ಯಾನಂದ ಸ್ವಾಮಿಗೆ ನೀಡಿರುವ ಜಾಮೀನನ್ನು ರದ್ದು ಪಡಿಸಲು ತನಗೆ ಸುತರಾಂ ಇಷ್ಟವಿಲ್ಲ ಎಂದು ಹೈಕೋರ್ಟ್ ಹೇಳಿದೆ.

  ರಾಸಲೀಲೆ ಪ್ರಕರಣದಲ್ಲಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ಹೈಕೋರ್ಟ್‌ ನೀಡಿರುವ ಜಾಮೀನನ್ನು ರದ್ದು ಮಾಡಿ ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೆಎನ್ ಕೇಶವನಾರಾಯಣ ಮಾನ್ಯ ಮಾಡಿಲ್ಲ.

  ಹೀಗೆ, ನಿತ್ಯಾನಂದ ಸ್ವಾಮಿಗಳು ಇನ್ನು ಮುಕ್ತ ಮುಕ್ತ ಮುಕ್ತ ಎಂದು ಕೋರ್ಟ್ ಮೂರು ಬಾರಿ ಆರ್ಡರ್ ಮಾಡಿದೆ. ಅತ್ತ, ಅಮ್ಮ ಜಯಲಲಿತಾ 'ನನ್ನ ಪರಮ ವೈರಿ ಸನ್ ಟಿವಿಯ ವಿರುದ್ಧ ಎಷ್ಟು ಕೇಸಾದರೂ ಜಡಿ ಅದನ್ನೆಲ್ಲ ನಾನು ನೋಡ್ಕೋತೀನಿ' ಎಂದು ಅಭಯ ನೀಡಿದ್ದಾರೆ. ಇದು ಕೋತಿಗೆ ಕಳ್ಳು ಕುಡಿಸಿದಂತಾಗಿ ಅವಯ್ಯ ನಿತ್ಯಾನಂದ ಇನ್ಯಾವ ಕುಂಡಿ ಕುಣಿತಕ್ಕೆ ಥಕದಮಿ ಎನ್ನುತ್ತಾನೋ ಆ ಈಶ್ವರನೇ ಬಲ್ಲ.

  ಜತೆಗೆ, ನಿತ್ಯಾನಂದ ಸ್ವಾಮಿಗಳು ವಿದೇಶಕ್ಕೆ ಹೋಗಲು ತಮ್ಮದೇನೂ ಅಭ್ಯಂತರವಿಲ್ಲ ಎಂದೂ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಮಹಾಸ್ವಾಮಿಗಳು ಈ ಬಾರಿ ಕುಂಡಲಿನೀ ಕುಣಿತವನ್ನು ಯಾವುದಾದರೂ ವಿದೇಶದಲ್ಲಿ ಆಯೋಜಿಸುವ ಅಪಾಯಗಳು ಹೆಚ್ಚಾಗಿವೆ. ಇಷ್ಟಕ್ಕೂ, ನಿತ್ಯಾನಂದ ಸ್ವಾಮಿ ಈಶ್ವರನ ಆರಾಧಕನೋ ಅಥವಾ ಕೃಷ್ಣನ ಅಪರಾವತಾರವೋ ತಿಳಿಯದಾಗಿದೆ ಎಂದು ಬಿಡದಿ ಜನ ತಲೆ ಚಚ್ಚಿಕೊಳ್ಳುತ್ತಿದ್ದಾರೆ.

  English summary
  As the Karnataka High Court refuse to entertain the state government's plea to cancel bail given to Swami Nithyananda he is all set to go abroad and perform Kundalini dance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X