ಆತ್ಮಹತ್ಯೆಗೆ ಶರಣಾದ ಜನಪ್ರಿಯ ಕಿರುತೆರೆ ನಟ...!

ಹಿಂದಿ ಕಿರುತೆರೆ ಉದ್ಯಮಕ್ಕೆ ಯಾರು ನಂಬಲು ಸಾಧ್ಯ ಇಲ್ಲದಂತಹ ವಿಚಾರ ಒಂದು ಬರಸಿಡಿಲಿನಂತೆ ಬಂದೆರಗಿದೆ. ಇನ್ನೂ ಬದುಕಿ ಬಾಳಬೇಕಿದ್ದ ಜೀವ ಒಂದು ಉಸಿರು ಚೆಲ್ಲಿದೆ. ಈ ಮೂಲಕ ಹಿಂದಿ ಕಿರುತೆರೆ ಲೋಕದ ನಕ್ಷತ್ರವೊಂದು ಕಣ್ಮರೆಯಾಗಿದೆ.

ಹೌದು, MTV ಸ್ಪಿಟ್ಸ್‌ವಿಲ್ಲಾ, ಕ್ರೈಂ ಪೆಟ್ರೋಲ್, ತೇರಾ ಯಾರ್ ಹೂ ಮೇ ಮೂಲಕ ಉತ್ತರ ಭಾರತದಲ್ಲಿ ಅನೇಕರ ಹೃದಯವನ್ನು ಗೆದ್ದಿದ್ದ ನಿತಿನ್ ಚೌಹಾಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಇನ್ನೂ ಗೊತ್ತಾಗದೇ ಇದ್ದರೂ ನಿತಿನ್ ಚೌಹಾಣ್ ಅವರ ಹಠಾತ್ ನಿಧನದಿಂದ ಹಿಂದಿ ಕಿರುತೆರೆ ವಲಯ ಶೋಕದಲ್ಲಿ ಮುಳುಗಿದೆ. ಇನ್ನೂ ನಿತಿನ್ ಚೌಹಾಣ್ ಯಾವತ್ತು ಯಾರ ಬಳಿ ಕೂಡ ತಮ್ಮ ನೋವನ್ನು ಹಂಚಿಕೊಂಡಿರಲಿಲ್ಲ. ಬದಲಿಗೆ ಎಲ್ಲರ ಜೊತೆ ನಗು ನಗುತ್ತಲೇ ಇದ್ದರು. ತಮ್ಮ ಸ್ನೇಹಿತರಿಗೆ ದೆಹಲಿಗೆ ಬರುವುದಾಗಿ ಹೇಳಿದ್ದರು. ಖತು ಶ್ಯಾಮ್ ಜೀ ದೇವಸ್ಥಾನಕ್ಕೆ ತೆರಳುವ ಬಯಕೆಯನ್ನೂ ಕೂಡ ನಿತಿನ್ ವ್ಯಕ್ತಪಡಿಸಿದ್ದರು. ಆದರೆ ಈಗ ನಿತಿನ್ ಇಲ್ಲ. ಹೀಗಾಗಿಯೇ ದಿಗ್ಬ್ರಾಂತಗೊಂಡಿರುವ ಸ್ನೇಹಿತರು ನಂಭಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸುದೀಪ್ ಸಾಹಿರ್ ಸೇರಿ ಅನೇಕರು ತಮ್ಮ ಗೆಳೆಯನಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

nitin-chauhan-actor-known-for-crime-patrol-and-splitsvilla-passes-away-at-35

ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡುತ್ತಿದ್ದ 35ರ ಪ್ರಾಯದ ನಿತಿನ್ ಚೌಹಾಣ್, ಸದಾ ಪಾಸಿಟಿವ್ ಮಾತುಗಳನ್ನಾಡುತ್ತಿದ್ದರು. ಆದರೂ ಕೂಡ ನಿತಿನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ನಿತಿನ್ ಚೌಹಾಣ್ ಕೊನೆಯದಾಗಿ 2022ರಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ತೇರಾ ಯಾರ್ ಹೂ ಮೇ ಧಾರಾವಾಹಿಯಲ್ಲಿ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದಾಚೆ ಕಿರುತೆರೆಯಿಂದ ದೂರ ಇದ್ದರು ನಿತಿನ್ ಚೌಹಾಣ್. ಈ ಕಾರಣಕ್ಕೆ ಅವಕಾಶಗಳಿಂದ ವಂಚಿತರಾಗಿ ಮಾನಸಿಕ ಖಿನ್ನತೆಗೆ ನಿತಿನ್ ಚೌಹಾಣ್ ಒಳಗಾಗಿದ್ದರಾ ಅನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಇರಬಹುದು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಮೂಲತಃ ಉತ್ತರ ಪ್ರದೇಶದ ಅಲಿಗಢ್‌ದವರಾದ ನಿತಿನ್ ಚೌಹಾಣ್, 2009ರಲ್ಲಿ ಬಿಂದಾಸ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ದಾದಾಗಿರಿ 2 ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ವಿಜೇತರಾಗಿ ಕೂಡ ಹೊರ ಹೊಮ್ಮಿದರು. ಅಲ್ಲಿಂದ ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ನಿತಿನ್ ಭಾಗವಹಿಸತೊಡಗಿದರು. ಆ ಪೈಕಿ MTV ಸ್ಪಿಟ್ಸ್‌ ವಿಲ್ಲಾ ಕೂಡ ಒಂದು. ಇನ್ನೂ ಕ್ರೈಮ್ ಪೆಟ್ರೋಲ್ ಮೂಲಕ ಅಪಾರ ಜನಪ್ರಿಯತೆಯನ್ನು ಕೂಡ ನಿತಿನ್ ಗಳಿಸಿದ್ದರು. ಇಂಥಾ ನಿತಿನ್ ತಮ್ಮ ತಂದೆ ಮತ್ತು ಸಹೋದರಿಯನ್ನು ಅಗಲಿದ್ದು ಸದ್ಯ ಸುದ್ದಿಯನ್ನು ತಿಳಿದು ನಿತಿನ್ ಚೌಹಾಣ್ ಅವರ ತಂದೆ ಮುಂಬೈಗೆ ತೆರಳಿದ್ದಾರೆ. ಅಲಿಗಢ್‌ನಲ್ಲಿ ನಿತಿನ್ ಚೌಹಾಣ್ ಅಂತ್ಯ ಸಂಸ್ಕಾರ ನಡೆಯಲಿದ್ದು, ನಿತಿನ್ ಅವರ ಅಗಲಿಕೆಗೆ ಅಭಿಮಾನಿಗಳು ಮತ್ತು ಹಿಂದಿ ಕಿರುತೆರೆಯ ಅನೇಕರು ಕಂಬನಿಯನ್ನು ಮಿಡಿದಿದ್ದಾರೆ.

More from Filmibeat

Read more about: death serial suicide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X