ರಿಯಾಲಿಟಿ ಶೋನಲ್ಲಿ ಮತ್ತೆ ಕಾಣಿಸಿಕೊಂಡ ನಿವೇದಿತಾ ಗೌಡ
ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ ನಿವೇದಿತಾ ಗೌಡ. ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿರುವ ನಿವೇದಿತಾ ಗೌಡ ಇದೀಗ ಮತ್ತೆ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ. ಹೌದು ಇದೀಗ ಮತ್ತೆ ಕಿರುತೆರೆಯಲ್ಲಿ ನಿವೇದಿತಾ ಗೌಡ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋಗಳ ಮೇಲೆ ರಿಯಾಲಿಟಿ ಶೋಗಳು ನಿವೇದಿತಾ ಅವರನ್ನು ಅರಸಿಕೊಂಡು ಬರುತ್ತಿದೆ. ನಿವೇದಿತಾ ಗೌಡ ರಿಯಾಲಿಟಿ ಶೋಗಳ ರಾಣಿ ಎಂದರೂ ತಪ್ಪಾಗಲಾರದೇನೊ.
ಎಲ್ಲರೂ ಧಾರವಾಹಿ, ಸಿನಿಮಾ ಅಂತೆಲ್ಲಾ ಮಿಂಚಿದರೆ ನಿವೇದಿತಾ ಮಾತ್ರ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಫಸ್ಟ್ ಟೈಂ ಕಾಮನ್ ಜನರಿಗೆ ಅವಕಾಶವನ್ನು ನೀಡಲಾಗಿತ್ತು. ಅದ್ರಲ್ಲಿ ನಿವೇದಿತಾ ಗೌಡ ಭಾಗವಹಿಸಿದ್ದರು. ಅಲ್ಲಿಂದ ನಿವೇದಿತಾ ಅವರ ಲೈಫ್‌ಸ್ಟೈಲ್ ಬದಲಾಗಿ ಹೋಯಿತು. ಬಿಗ್ ಬಾಸ್‌ನಲ್ಲಿ ಫೈನಲಿಸ್ಟ್ ಆಗಿ ಅಪಾರ ಅಭಿಮಾನಿಗಳನ್ನು ನಿವೇದಿತಾ ಗೌಡ ಪಡೆದುಕೊಂಡರು.
ಬಿಗ್‌ಬಾಸ್‌ನಲ್ಲಿ ತಮ್ಮ ಸಹ ಸ್ಪರ್ಧಿ ಆಗಿದ್ದ ರ್ಯಾಪರ್ ಚಂದನ್ ಶೆಟ್ಟಿಯನ್ನು ಮದುವೆಯೂ ಆದರು ನಿವೇದಿತಾ. ಆ ನಂತರ ಅವರಿಗೆ ಬ್ರೇಕ್ ಕೊಟ್ಟಿದ್ದು ರಾಜಾ ರಾಣಿ ರಿಯಾಲಿಟಿ ಶೋ. ಅಲ್ಲಿ ಕೂಡ ಫೈನಲಿಸ್ಟ್ ಆಗಿ ಹೊರಬಂದರು. ಮದುವೆಯಾದ ಬಳಿಕ ನಿವೇದಿತಾ ಎರಡನೇ ಶೋ ರಿಯಾಲಿಟಿ ಶೋ ಗಿಚ್ಚಿಗಿಲಿಗಿಲಿ. ನಿವಿ ಕಾಣಿಸಿದ್ದೂ ಇದುವರೆಗೂ ನಿವೇದಿತಾ ಆಗಿಯೇ ನಾವೆಲ್ಲೂ ಅವರನ್ನು ಪಾತ್ರಧಾರಿಯಾಗಿ ನೋಡೋಕೆ ಸಿಕ್ಕಿಲ್ಲ. ಆದರೆ 'ಗಿಚ್ಚಿಗಿಲಿಗಿಲಿ'ಯಲ್ಲಿ ಪಾತ್ರಧಾರಿಯಾಗಿ ನಿವೇದಿತಾ ನಟಿಸಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ನಿವೇದಿತಾ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ನಿವೇದಿತಾ ಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ ಹಿಂಬಾಲಕರಿದ್ದಾರೆ. ಅವರು ಪೋಸ್ಟ್ ಮಾಡುವ ಪೋಟೋ ಹಾಗೂ ವಿಡಿಯೋಗಳನ್ನು ಸಾವಿರಾರು ಮಂದಿ ಲೈಕ್ ಮಾಡುತ್ತಾರೆ. ಸಾಕಷ್ಟು ರೀಲ್ಸ್‌ಗಳನ್ನು ಮಾಡಿ ಅವರು ಪೋಸ್ಟ್ ಮಾಡುತ್ತಾರೆ. ಪತಿ ಚಂದನ್ ಶೆಟ್ಟಿ ಜತೆ ಜತೆ ಸಾಕಷ್ಟು ರೀಲ್ಸ್ ಮಾಡಿ ಅವರು ಹಾಕಿದ್ದಾರೆ. ಈ ಮೂಲಕವೂ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ನಿವೇದಿತಾ ಏನೇ ಮಾಡಿದರೂ ಬೆನ್ನುತಟ್ಟುವ ಅಭಿಮಾನಿಗಳು ಅವರಿಗೆ ಇದ್ದಾರೆ. ಕನ್ನಡ ಕಿರುತೆರೆ ಬಾರ್ಬಿ ಡಾಲ್, ಚಂದನ್ ಶೆಟ್ಟಿ ಹೃದಯ ಕದ್ದ ಮುದ್ದು ಹುಡುಗಿ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಫೋಟೋ, ವಿಡಿಯೋ ಅಪ್ಲೋಡ್ ಮಾಡುವೆ ಚೆಲುವೆ ಯುಟ್ಯೂಬ್ ಲೋಕಕ್ಕೂ ಕಾಲಿಟ್ಟಿದ್ದಾರೆ.


Click it and Unblock the Notifications











