For Quick Alerts
  ALLOW NOTIFICATIONS  
  For Daily Alerts

  ಎಲ್ಲರೂ ಪ್ರಗ್ನೆಂಟಾ ಅಂತ ಕೇಳ್ತಾರೆ, ನಾನು ಹೊಟ್ಟೆ ಮುಟ್ಟಿ ನೋಡಿಕೊಳ್ಳುತ್ತೀನಿ: ನಿವೇದಿತಾ ಗೌಡ

  By ಪ್ರಿಯಾ ದೊರೆ
  |

  ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ ಸ್ಯಾಂಡಲ್‌ವುಡ್ ಮುದ್ದು ಜೋಡಿಗಳಲ್ಲಿ ಒಂದು. ಇವರ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹಲವರ ಅಚ್ಚು ಮೆಚ್ಚಿನ ಈ ಜೋಡಿ ಆಗಾಗ ಸುದ್ದಿಯಲ್ಲಿರುತ್ತಾರೆ. ನಿವೇದಿತಾ ಅವರಂತೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ.

  ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿವೇದಿತಾ ಹೆಚ್ಚು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪತಿ ಚಂದನ್ ಶೆಟ್ಟಿ ಜೊತೆ ಸಾಕಷ್ಟು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಚಂದನ್ ಶೆಟ್ಟಿ ಕೂಡ ನಿವೇದಿತಾ ಅವರ ಜೊತೆಗೆ ವಿಡಿಯೋ ಮಾಡಿ ಹಂಚಿಕೊಳ್ಳುತ್ತಾರೆ. ಹಾಡು, ಡ್ಯಾನ್ಸ್, ಫೈಟ್ ಎಲ್ಲಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

  ನಿವೇದಿತಾ ಗೌಡ- ಚಂದನ್ ಶೆಟ್ಟಿ ಕಿರಿಕ್: ವಿಡಿಯೋ ವೈರಲ್!ನಿವೇದಿತಾ ಗೌಡ- ಚಂದನ್ ಶೆಟ್ಟಿ ಕಿರಿಕ್: ವಿಡಿಯೋ ವೈರಲ್!

  ಈ ಜೋಡಿ ದಿನಕ್ಕೆ ಒಂದಾದರೂ ವಿಡಿಯೋ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಮಾಡಿರುವ ಡ್ಯಾನ್ಸ್ ವಿಡಿಯೋಗಳು ಮತ್ತು ಮುತ್ತಿನ ಪ್ರಯೋಗದ ವಿಡಿಯೋ ಟ್ರೆಂಡಿಂಗ್ ಲಿಸ್ಟ್ ಸೇರಿವೆ. ನಿವೇದಿತಾ ಅವರು ಶಾಪಿಂಗ್ ಬಗ್ಗೆ, ತಮ್ಮ ಡ್ರೆಸ್, ಸ್ಯಾಂಡಲ್ಸ್ ಕಲೆಕ್ಷನ್ ಬಗ್ಗೆಯೂ ವಿಡಿಯೋ ಹಂಚಿಕೊಂಡಿದ್ದರು.

  ಬಿಗ್ ಬಾಸ್ ಮೂಲಕ ಫೇಮಸ್

  ಬಿಗ್ ಬಾಸ್ ಮೂಲಕ ಫೇಮಸ್

  ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಕನ್ನಡ ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿಯಾಗಿ ಖ್ಯಾತಿ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ಪರಿಚಯವಾಗಿತ್ತು. ದೊಡ್ಮನೆಯಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರಾದರು. ನಿವೇದಿತಾಗಾಗಿ ಚಂದನ್‌ ಬಿಗ್‌ ಬಾಸ್‌ ಮನೆಯಲ್ಲಿ ಹಾಡೊಂದನ್ನು ಸಿದ್ಧಪಡಿಸಿ ಕಂಪೋಸ್ ಮಾಡಿದ್ದರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬೆಳೆದು ಮನೆಯವರ ಸಮ್ಮುಖದಲ್ಲಿ ಮದುವೆ ಆಯ್ತು. ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ ರೀತಿಯೂ ವಿಭಿನ್ನವಾಗಿತ್ತು. ಚಂದನ್ ಶೆಟ್ಟಿ 2019ರ ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಪ್ರೊಪೋಸ್ ಮಾಡಿದ್ದರು.

  ಕನ್ನಡ ಚಿತ್ರಗಳಲ್ಲಿ ಚಾನ್ಸ್ ಸಿಕ್ಕಿಲ್ಲ ಅದಕ್ಕೆ ನಟಿಸುತ್ತಿಲ್ಲ: ನಿವೇದಿತಾ ಗೌಡ!ಕನ್ನಡ ಚಿತ್ರಗಳಲ್ಲಿ ಚಾನ್ಸ್ ಸಿಕ್ಕಿಲ್ಲ ಅದಕ್ಕೆ ನಟಿಸುತ್ತಿಲ್ಲ: ನಿವೇದಿತಾ ಗೌಡ!

   ಪ್ರೀತಿಸಿ ಹಸೆಮಣೆ ಏರಿದ್ದ ಜೋಡಿ

  ಪ್ರೀತಿಸಿ ಹಸೆಮಣೆ ಏರಿದ್ದ ಜೋಡಿ

  2020ರ ಫೆಬ್ರವರಿ 26ರಂದು ನಿವೇದಿತಾ ಹಾಗೂ ಚಂದನ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಮೈಸೂರಿನಲ್ಲಿ ಈ ಜೋಡಿಯ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ನಿವೇದಿತಾ ಮತ್ತು ಚಂದನ್ ಶೆಟ್ಟಿ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಯಾದ ಮೇಲೆ ಇಬ್ಬರೂ ಖುಷಿಯಾಗಿದ್ದು, ನಿವೇದಿತಾ ಕಿರುತೆರೆಯಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.

   ಸೋಶಿಯಲ್ ಮೀಡಿಯಾದಲ್ಲಿ ನಿವ್ವಿ ಆಕ್ಟೀವ್

  ಸೋಶಿಯಲ್ ಮೀಡಿಯಾದಲ್ಲಿ ನಿವ್ವಿ ಆಕ್ಟೀವ್

  ನಿವೇದಿತಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹತ್ತಾರು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದರಲ್ಲಿ ಹೇರ್ ಕೇರ್ ಬಗ್ಗೆ, ಡಯಟ್ ಬಗ್ಗೆ, ತಮ್ಮ ಇತರೆ ವಿಚಾರಗಳ ಬಗ್ಗೆ ಅಪ್‌ಡೇಟ್ ಕೊಡುತ್ತಿರುತ್ತಾರೆ. ಕಳೆದ ತಿಂಗಳು ತಮ್ಮ ಶಾಪಿಂಗ್ ವಿಚಾರಕ್ಕೆ ನಿವೇದಿತಾ ಮತ್ತೆ ಚರ್ಚೆಗೀಡಾಗಿದ್ದರು. ಚೌಕಾಸಿ ಮಾಡಿ ನಿವೇದಿತಾ ಶಾಪಿಂಗ್ ಮಾಡಿದ್ದರು. ಇತ್ತೀಚೆಗೆ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು ಬಂದಿದ್ದರು. ಈ ಖುಷಿಯನ್ನು ನಿವೇದಿತಾ ಗೌಡ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಕಿರೀಟ ಮುಡಿಗೇರಿಸಿಕೊಂಡ ಫೋಟೊ ವೈರಲ್ ಆಗಿತ್ತು. ಹೀಗೆ ವಿಡಿಯೋ ಮಾಡುವ ನಿವೇದಿತಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

  ನಾಯಕಿಯಾಗಿ ತೆಲುಗಿಗೆ ನಿವೇದಿತಾ ಗೌಡ ಎಂಟ್ರಿ!ನಾಯಕಿಯಾಗಿ ತೆಲುಗಿಗೆ ನಿವೇದಿತಾ ಗೌಡ ಎಂಟ್ರಿ!

   ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ ನಿವೇದಿತಾ

  ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ ನಿವೇದಿತಾ

  ನಿವೇದಿತಾ ಗೌಡ ತಮ್ಮ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೂ ಉತ್ತರಿಸಿ ಆಗಾಗ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿರುವ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಸಿನಿಮಾ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದು, ಇಲ್ಲಿಯವರೆಗೂ ನಿವೇದಿತಾ ಗೌಡ ಸಿನಿಮಾ ಮಾಡ್ತಾರೆ ಅಂತ ಎಲ್ಲೂ ಸುದ್ದಿ ಆಗಿಲ್ಲ. ಅದಕ್ಕೆ ಕಾರಣ ಯಾವುದೇ ಸಿನಿಮಾದ ಆಫರ್‌ಗಳನ್ನು ನಿವೇದಿತಾ ಗೌಡ ಒಪ್ಪಿಕೊಂಡಿಲ್ಲ. ಸಿನಿಮಾದ ಚೆನ್ನಾಗಿರದಿದ್ದರೆ ಎಂಬ ಆತಂಕ ಅವರಲ್ಲಿ ಇದ್ಯಂತೆ. ಇನ್ನು ಪ್ರೆಗ್ನೆನ್ಸಿ ಬಗ್ಗೆ ನಿವೇದಿತಾ ಮಾತನಾಡಿದ್ದು, ನಾವಿಬ್ಬರೇ ಇನ್ನಷ್ಟು ದಿನ ಲೈಫ್ ಎಂಜಾಯ್ ಮಾಡಬೇಕು, ಹಾಗಾಗಿ ಈಗಲೇ ಮಗು ಬೇಡ ಅಂದುಕೊಂಡಿದ್ದೇವೆ ಎಂದಿದ್ದಾರೆ.

  English summary
  Nivedita gowda answered some questions in youtube. And told about pregnancy.
  Tuesday, September 13, 2022, 9:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X