ಹೊಸ ವರ್ಷದ ಸಂಭ್ರಮದಲ್ಲಿ ಮೈ ಮೇಲೆ ಓತಿಕ್ಯಾತ ಬಿಟ್ಕೊಂಡ ನಿವೇದಿತಾ; ಒಂದೆರಡಲ್ಲ ರೀಲ್ಸ್

By ಪೂರ್ವ

ನಿವೇದಿತಾ ಗೌಡ ಹೊಸ ವರ್ಷವನ್ನು ವಿದೇಶದಲ್ಲಿ ಆಚರಣೆ ಮಾಡಿದ್ದಾರೆ. ಜಾಲಿ ಮೂಡ್‌ನಲ್ಲಿ ಇರುವ ನಿವೇದಿತಾ ಫುಲ್ ರಿಲ್ಯಾಕ್ಸ್ ಆಗುತ್ತಿದ್ದಾರೆ. ಯಾರ ಮಾತಿಗೂ ಯಾರ ಕಾಮೆಂಟ್‌ಗೂ ನಿವೇದಿತಾ ಕ್ಯಾರೆ ಎಂದಿಲ್ಲ. ತನ್ನ ಗೆಳೆಯರ ಜೊತೆ ಹಾಡುಗಳನ್ನು ಹಾಡುತ್ತಾ ಎಂಜಾಯ್ ಮಾಡಿದ್ದಾರೆ. ಅಲ್ಲಿನ ಎಂಜಾಯ್ ಮಾಡಿದ ಕ್ಷಣವನ್ನು ತನ್ನ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಾರೆ.

ಸದ್ಯ ಮತ್ತೊಂದು ರೀಲ್ಸ್ ಶೇರ್ ಮಾಡಿದ್ದಾರೆ. ಮೈ ಮೇಲೆ ಓತಿಕ್ಯಾತವನ್ನು ಬಿಟ್ಟುಕೊಂಡ ರೀಲ್ಸ್ ಅನ್ನು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ. ಕೆಲವರು ಮಂದಿಗಿಂತ ಇದು ಡೇಂಜರ್ ಏನೂ ಅಲ್ಲ ಎಂದಿದ್ದಾರೆ. ಇಷ್ಟು ಹೇಳಿದ ಮೇಲೆ ನೆಟ್ಟಿಗರು ಸುಮ್ನೆ ಇರುತ್ತಾರಾ? ನಿವೇದಿತಾ ಜಾಲಿ ಆಗಿರುವುದನ್ನು ನೋಡಿ ಅನೇಕರು ನೀವು ಇದಕ್ಕಾಗಿಯೇ ಚಂದನ್ ಶೆಟ್ಟಿ ಅವರನ್ನು ದೂರ ಮಾಡಿಕೊಂಡಿದ್ದಾ? ಎಂದು ಕಾಮೆಂಟ್ ಪಾಸ್ ಮಾಡುತ್ತಿದ್ದಾರೆ.

Nivedita Gowda new year 2025 instagram reels in thailand trending

ವಿಚ್ಛೇದನದ ಬಳಿಕ ನಿವೇದಿತಾ ಕುಗ್ಗಿಲ್ಲ. ಟೀಕೆ ಮಾಡುವವರ ಬಗ್ಗೆ ತಲೆನೂ ಕೆಡಿಸಿಕೊಂಡಿಲ್ಲ. ಹೀಗಾಗಿ ನಿವೇದಿತಾ ದಿಟ್ಟತನಕ್ಕೆ ಕೆಲ ನೆಟ್ಟಿಗರು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಹುಡುಗಿಯರು ಯಾವತ್ತೂ ಫ್ರೀ ಆಗಿಯೇ ಇರಬೇಕು ಎಂದು ಹೇಳುತ್ತಿದ್ದಾರೆ. ಈಗಾಗಲೇ ನಿವೇದಿತಾ ಗೌಡ ಸಾಕಷ್ಟು ರೀಲ್ಸ್ ಮಾಡಿ ಕೆಲವರ ಮನಸ್ಸನ್ನೂ ಗೆದ್ದಿದ್ದಾರೆ.

ಬಿಗ್ ಬಾಸ್ ಮೂಲಕ ಎಲ್ಲರಿಗೂ ಪರಿಚಿತರಾದ ನಟಿ ನಿವೇದಿತಾ ಗೌಡ. ರಿಯಾಲಿಟಿ ಶೋನಲ್ಲಿ ಕಿರುತೆರೆ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು. ಬಾರ್ಬಿ ಡಾಲ್ ಅಂತಲೇ ಫೇಮಸ್ ಆಗಿದ್ದ ನಿವೇದಿತಾ ಬಳಿಕ ಚಂದನ್ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಕೆಲವೇ ವರ್ಷಗಳಲ್ಲಿ ಈ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಆದರೆ ಕಾರಣ ಏನು ಎಂಬುವುದು ಇಬ್ಬರೂ ಹೇಳಿಕೊಂಡಿಲ್ಲ. ಹಾಗಂತ ನೆಟ್ಟಿಗರು ಸುಮ್ಮನಿರಲಿಲ್ಲ. ನಿವೇದಿತಾ ಗೌಡರನ್ನು ಇಂದಿಗೂ ಟೀಕಿಸುತ್ತಲೇ ಇದ್ದಾರೆ.

ವಿಚ್ಛೇದನದ ಬಳಿಕ ನಿವೇದಿತಾ ಗೌಡ ಬಹಳಷ್ಟು ಫ್ರೀ ಆಗಿದ್ದಾರೆ. ರಿಯಾಲಿಟಿ ಶೋ, ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಇತ್ತ ಚಂದನ್ ಶೆಟ್ಟಿ ಬಳಿ ಹಲವು ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಜೊತೆಗಿನ ವಿಚ್ಛೇದನದ ಬಗ್ಗೆ ಚಂದನ್ ಶೆಟ್ಟಿ ಮಾತಾಡಿದ್ದರು. ಎಲ್ಲೇ ಇದ್ದರೂ ಚೆನ್ನಾಗಿ ಇರಲಿ ಎಂದು ಚಂದನ್ ಶೆಟ್ಟಿ ಹೇಳಿದ್ದರು. ಇತ್ತ ನಿವೇದಿತಾ ಗೌಡ ಯಾರ ಟೀಕೆಗಳಿಗೂ ಕ್ಯಾರೆ ಅಂತನೂ ಹೇಳಿಲ್ಲ. ತನ್ನ ಇಷ್ಟದಂತೆ ಬದುಕು ಸಾಗಿಸುತ್ತಿದ್ದಾರೆ.

ಬಣ್ಣದ ಲೋಕದ ತಾರೆಯರ ಜೀವನದಲ್ಲಿ ಖುಷಿಯ ಜೊತೆಗೆ ಬಹಳಷ್ಟು ನೋವು ಇರುತ್ತೆ. ಅದೇ ರೀತಿ ನಿವೇದಿತಾ ಗೌಡ ಜೀವನದಲ್ಲಿ ಕಹಿ ಘಟನೆಗಳು ನಡೆದು ಹೋಗಿದೆ. ಆದರೆ ಮತ್ತೆ ಆ ರೀತಿ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ. ಈ ಬದುಕನ್ನು ಚೆನ್ನಾಗಿ ಎಂಜಾಯ್ ಮಾಡಿಬಿಡಬೇಕು. ಎಲ್ಲರ ಜೊತೆ ಖುಷಿಯಾಗಿ ಇರಬೇಕು ಎನ್ನುವುದು ನಿವೇದಿತಾ ಅವರ ಆಸೆ.

ಇದೀಗ ನಿವೇದಿತಾ ಗೌಡ ಹೊಸ ವರ್ಷವನ್ನು ವಿದೇಶದಲ್ಲಿ ವೆಲ್ ಕಂ ಮಾಡಿದ್ದಾರೆ. 2024ರ ಕಹಿ ಘಟನೆಗಳು ಮುಗಿದು ಹೋಗಲಿ. ಏನೇ ಇದ್ದರೂ ಸಿಹಿ ಘಟನೆಗಳು ನಮ್ಮ ಜೊತೆ ಇರಲಿ ಅಂತ ನಿವೇದಿತಾ ಎಂಜಾಯ್ ಮಾಡುವ ಮೂಡ್‌ನಲ್ಲಿ ಇದ್ದಾರೆ. ಥೈಲ್ಯಾಂಡ್‌ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಟೀಕೆ ಮಾಡುವವರಿಗೆ ರೀಲ್ಸ್ ಮೂಲಕವೇ ಡಿಚ್ಚಿಕೊಡುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಮೂಲಕ ಎಲ್ಲರ ಮನಗೆದ್ದ ಸುಂದರಿ ನಿವೇದಿತಾ ಗೌಡ 2025ರ ಪ್ಲ್ಯಾನ್ಸ್ ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

More from Filmibeat

English summary
Nivedita Gowda new year 2025 instagram reels in thailand trending;
Read more about: tv poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X