Niveditha Gowda: ಕಣ್ಣು ಮುಚ್ಚಿಕೊಂಡು ಚಿಕನ್ ಬಿರಿಯಾನಿ ತಯಾರಿಸಿದ ನಿವೇದಿತಾ ಗೌಡ

By ಪ್ರಿಯಾ ದೊರೆ

ಸದಾ ಒಂದಲ್ಲ ಒಂದು ವೀಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಡುವ ನಟಿ ನಿವೇದಿತಾ ಗೌಡ ಯಾವುದಾದರೂ ಒಂದು ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುತ್ತಾರೆ.

ಇತ್ತೀಚೆಗಷ್ಟೇ ನಿವೇದಿತಾ ತಾಯಿ ಆಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರೀಲ್ಸ್ ಒಂದನ್ನು ಮಾಡಿದ್ದರು. ಇದನ್ನು ನೋಡಿದವರೆಲ್ಲಾ ನಿವೇದಿತಾ ಗರ್ಭಿಣಿ ಆಗಿದ್ದಾರೆ ಎಂದು ಭಾವಿಸಿದ್ದರು.

ಬಳಿಕ ಚಂದನ್ ಹಾಗೂ ನಿವೇದಿತಾ ಗೌಡ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದರು. ನಿವೇದಿತಾ ಗೌಡ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಆಗಾಗ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

ಅಡುಗೆ ಮಾಡುತ್ತಿರುವ ನಿವೇದಿತಾ

ಅಡುಗೆ ಮಾಡುತ್ತಿರುವ ನಿವೇದಿತಾ

ಇತ್ತೀಚೆಗೆ ನಿವೇದಿತಾ ಗೌಡ ಕುಕಿಂಗ್ ವೀಡಿಯೋಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಅಡುಗೆ ಕಲಿತ ಹಾಗೂ ಆಗುತ್ತದೆ. ವೀಡಿಯೋ ಕೂಡ ತಯಾರಾಗುತ್ತೆ ಎಂಬುದು ನಿವೇದಿತಾ ಗೌಡ ಪ್ಲಾನ್ ಇರಬಹುದು. ಈ ಹಿಂದೆ ಖಾರ ಬಜ್ಜಿ, ಬಿಳಿ ಜಿಲೇಬಿ ರೆಸಿಪಿಗಳನ್ನು ಕೂಡ ಮಾಡಿ ತೋರಿಸಿದ್ದರು. ಇದಕ್ಕೂ ಮುನ್ನ ಅಕ್ಕಿ ರೊಟ್ಟಿ ಅನ್ನು ಮಾಡಿದ್ದರು, ಇದನ್ನು ಕಲೆಸಲು ಬ್ಲೆಂಡರ್ ಬಳಸಿದ್ದರು. ಇನ್ನು ಚಿಕನ್ ಫ್ರೈ ಮಾಡಿದ್ದರು. ಚೆಕನ್ ಫ್ರೈ ವೀಡಿಯೋ ವನ್ನು ಬರೋಬ್ಬರಿ ಒಂದು ಮಿಲಿಯನ್ ವ್ಯೂವ್ಸ್ ಆಗಿತ್ತು.

ಚಿಕನ್ ಬಿರಿಯಾನಿ ತಯಾರಿಸಿದ ನಿವೇದಿತಾ

ಚಿಕನ್ ಬಿರಿಯಾನಿ ತಯಾರಿಸಿದ ನಿವೇದಿತಾ

ಇದೀಗ ನಟಿ ನಿವೇದಿತಾ ಗೌಡ ಮನೆಯಲ್ಲಿ ಅಡುಗೆ ಮಾಡಲು ಶುರು ಮಾಡಿದ್ದಾರೆ. ಮನೆಯಲ್ಲಿ ಚಿಕನ್ ಬಿರಿಯಾನಿಯನ್ನು ಮಾಡಿದ್ದಾರೆ. ಅದೂ ಕೂಡ ಕಣ್ಣಿಗೆ ಕರ್ಚೀಫ್ ಅನ್ನು ಕಟ್ಟಿಕೊಂಡು ನಿವೇದಿತಾ ಅಡುಗೆ ಮಾಡಿದ್ದಾರೆ. ಈರುಳ್ಳಿ, ಟೊಮೆಟೋ ಎಲ್ಲವನ್ನು ಕಣ್ಣು ಮುಚ್ಚಿಕೊಂಡೇ ಕಟ್ ಮಾಡಿದ್ದಾರೆ. ಸ್ಟೌವ್ ಆನ್ ಮಾಡುವಾಗ ಮಾತ್ರ ಕಣ್ಣು ಬಿಟ್ಟಿದ್ದು, ಚಿಕನ್ ಅನ್ನು ಫ್ಲೈ ಮಾಡಿ ಅಕ್ಕಿ ಹಾಕಿ ಬಿರಿಯಾನಿ ತಯಾರಿಸಿದ್ದಾರೆ.

ಉಪ್ಪು ಹಾಕದ ಚಿಕನ್ ಬಿರಿಯಾನಿ

ಉಪ್ಪು ಹಾಕದ ಚಿಕನ್ ಬಿರಿಯಾನಿ

ಮಡದಿ ಮಾಡಿದ ಬಿರಿಯಾನಿ ಟೇಸ್ಟ್ ಮಾಡಿ ಚಂದನ್ ಉಪ್ಪೇ ಹಾಕಿಲ್ಲ ಎಂದು ಹೇಳಿದ್ದಾರೆ.ಅದಕ್ಕೆ ನಿವೇದಿಯತಾ ಚಿಕನ್ ಮಸಾಲ ಹಾಕಿದರೆ ಸಾಕು ಉಪ್ಪು ಬೇಡ ಅಂತ ಯೂಟ್ಯೂಬರ್ ಹೇಳಿದ್ರು ಎಂದು ಹೇಳುತ್ತಾಳೆ. ನಿವೇದಿತಾ ಟೇಸ್ಟ್ ಮಾಡಿ ಇದು ನೋಡೋಕೆ ಟೊಮೆಟೋ ಬಾತ್ ಇದ್ದ ಹಾಗಿದೆ. ಟೇಸ್ಟ್ ಮಾಡೋಕೆ ಚಿಕನ್ ಕಟ್ ರೈಸ್ ಥರ ಇದೆ ಎಂದಿದ್ದು ತಾನೇ ಹೊಸ ರೆಸಿಪಿ ಕಂಡು ಹಿಡಿದಿದ್ದೇನೆ ಎಂದು ಖುಷಿ ಪಟ್ಟಿದ್ದಾರೆ.

ಏನೆಲ್ಲಾ ಕಮೆಂಟ್ ಮಾಡಿದ್ದಾರೆ ನೋಡಿ

ಏನೆಲ್ಲಾ ಕಮೆಂಟ್ ಮಾಡಿದ್ದಾರೆ ನೋಡಿ

ಇನ್ನು ಈ ವೀಡಿಯೋಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದು, ಕೆಲವರು ನಿವೇದಿತಾ ನಿತ್ಯ ಅಡುಗೆ ಮಾಡುವ ವೀಡಿಯೋ ಮಾಡಲಿ ಎಂದು ಬಯಸಿದ್ದಾರೆ. ಮತ್ತೆ ಕೆಲವರು ನಿವೇದಿತಾ ಮಾತುಗಳನ್ನು ಹೊಗಳಿದ್ದಾರೆ. ಆದರೆ ವೀಡಿಯೋದ ಎಡಿಟಿಂಗ್ ಸಕತ್ತಾಗಿ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದು, ಕಣ್ಣು ಬಿಟ್ಟುಕೊಂಡು ಅಡುಗೆ ಮಾಡುವುದೇ ಕಷ್ಟ. ಅಂತಹದರಲ್ಲಿ ಅಡುಗೆ ಬರದ ನೀನು ಕಣ್ಣು ಮುಚ್ಚಿ ಅಡುಗೆ ಯಾಕ್ ಮಾಡಿದೆ. ಪಾಪ ಚಂದನ್ ಎಂದು ಕಮೆಂಟ್ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ವಿಡಿಯೋಗೆ ಸಾವಿರಾರು ವೀವ್ಸ್ ಸಿಕ್ಕಿದೆ.

More from Filmibeat

English summary
Niveditha gowda Blindfold Biryani Making Challenge Video Goes Viral. Chandan Shetty Teasted wife niveditha's Special Biryani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X