ನನ್ನ ಜೀವನದಲ್ಲಿ ಇಷ್ಟೆಲ್ಲ ಆಯ್ತು, ಆದರೆ ; ಕಣ್ಣೀರು ಹಾಕಿದ ನಿವೇದಿತಾ ಗೌಡ..!
ಸಾಮಾನ್ಯ ಮಹಿಳೆಯರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿರುವ ಅನೇಕ ಮಹಿಳೆಯರೂ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಹೆಣ್ಣು ಮಕ್ಕಳು ತೊಡುವ ಬಟ್ಟೆಯಿಂದ ಹಿಡಿದು ಅವರ ಆಲೋಚನಾ ಕ್ರಮದ ತನಕ ಹಲವು ವಿಷಯಗಳು ಟ್ರೋಲಿಗರಿಗೆ ಆಹಾರವಾಗಿವೆ. ಯಾವುದೋ ರಾಜಕೀಯ ಪಕ್ಷ ಇಲ್ಲವೇ ಸಿದ್ಧಾಂತಕ್ಕೆ ಕಟ್ಟು ಬಿದ್ದವರು ತಮ್ಮ ಶ್ರೇಷ್ಠತೆಯ ವ್ಯಸನ ಮೆರೆಯಲು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡುವುದು,ಕಾಮೆಂಟ್‌ಗಳನ್ನು ಮಾಡುವುದು ನಿತ್ಯದ ವಾಡಿಕೆ ಎಂಬಂತಾಗಿದೆ.
ಕೆಲ ಮಹಿಳೆಯರು ಟ್ರೋಲಿಗರಿಗೆ ಅಲ್ಲಲ್ಲೇ ಉತ್ತರವನ್ನು ನೀಡಿದರೆ ಇನ್ನೂ ಕೆಲವರು ಬ್ಲಾಕ್ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಮತ್ತೂ ಕೆಲವರು ಮಾನಸಿಕವಾಗಿ ಕಿರಿಕಿರಿ ಅನುಭವಿಸಿ ಟ್ರೋಲಿಂಗ್‌ನ್ನು ಎದುರಿಸಲಾಗದೇ ಒಳಗೊಳಗೆ ಆತಂಕ ನೋವು ಅನುಭವಿಸುತ್ತಾರೆ. ಸಹನೆಯ ಕಟ್ಟೆ ಒಡೆದು ಕೆಲವೊಮ್ಮೆ ಸಾರ್ವಜನಿಕವಾಗಿ ಕಣ್ಣೀರು ಹಾಕುತ್ತಾರೆ. ಇದಕ್ಕೆ ನಿವೇದಿತಾ ಗೌಡ ಸದ್ಯದ ಉದಾಹರಣೆ.

ಹೌದು, ಕಳೆದೊಂದು ವರ್ಷದಲ್ಲಿ ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಗೌಡ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ನಿವೇದಿತಾ ಪ್ರತಿ ಬಾರಿ ವಿಡಿಯೋ ಮಾಡಿದಾಗ ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳು ಹೇಳಲಾಗದಷ್ಟು ಅಸಹ್ಯ ಮತ್ತು ಅಶ್ಲೀಲವಾಗಿರುತ್ತವೆ.
ಆದರೂ ಕೂಡ ನಿವೇದಿತಾ ಗೌಡ ಕ್ಯಾರೇ ಎಂದಿರಲಿಲ್ಲ. ಇಲ್ಲಿಯವರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲ ಕಾಮೆಂಟ್‌ಗಳಿಗೆ ತಿರುಗೇಟು ನೀಡಿದ್ದನ್ನು ಹೊರತು ಪಡಿಸಿದರೆ ಜನರ ಮಾತುಗಳು ತಮ್ಮ ಮೇಲೆ ಬೀರಿರುವ ಪರಿಣಾಮದ ಕುರಿತು ನಿವೇದಿತಾ ಗೌಡ ಮಾತನಾಡಿರಲಿಲ್ಲ. ಆದರೆ ಈಗ ಮಾತನಾಡಿದ್ದಾರೆ. ಮಾತನಾಡುತ್ತಾ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.
ತಮ್ಮ ಬದುಕಿನಲ್ಲಿ ತಮ್ಮ ತಂದೆಯ ಬೆಂಬಲ ಮತ್ತು ಪ್ರೋತ್ಸಾಹದ ಕುರಿತು ಮಾತನಾಡಿರುವ ನಿವೇದಿತಾ ಗೌಡನನ್ನ ಲೈಫ್‌ನಲ್ಲಿ ಏನೇನೋ ಘಟನೆಗಳು ನಡೆದ ಮೇಲೆ, ನಾನು ಇಷ್ಟೊಂದು ಸ್ಟ್ರಾಂಗ್ ಆಗಿರಲು ನನ್ನ ತಂದೆಯೇ ಕಾರಣ ಎಂದು ಹೇಳಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ ನಾನು ನಿನ್ನ ಜೊತೆಯಲ್ಲೇ ಇರುತ್ತೇನೆ ಎಂದು ನನ್ನ ತಂದೆ ನನಗೆ ಧೈರ್ಯ ತುಂಬುತ್ತಾರೆ, ನನಗೆ ಅವರೇ ಬಹುದೊಡ್ಡ ಶಕ್ತಿ ಎಂದಿರುವ ನಿವೇದಿತಾ ಗೌಡ ಆದರೆ ಅವರಿಗೆ ನನ್ನಿಂದ ಕಷ್ಟ ಆಗುತ್ತಿದೆ ಎಂದು ಹೇಳಿದ್ದಾರೆ. ಕಣ್ಣೀರು ಹಾಕಿದ್ದಾರೆ.
ನಿವೇದಿತಾ ಗೌಡ ಅವರ ಈ ಮಾತುಗಳಿಗೆ ಕಾರ್ಯಕ್ರಮದ ಜಡ್ಜ್‌ಗಳು ಮತ್ತು ಸ್ಫರ್ಧಿಗಳು ಕೂಡ ಕಣ್ಣೀರು ಹಾಕಿದ್ದಾರೆ. ಭಾವುಕರಾಗಿದ್ದಾರೆ. ಇಂದು ಈ ಕಾರ್ಯಕ್ರಮ ಪ್ರಸಾರವಾಗಲಿದ್ದು ನಿವೇದಿತಾ ಗೌಡ ತಮ್ಮ ವ್ಯೆಯಕ್ತಿಕ ಬದುಕು, ಡಿವೋರ್ಸ್ ಮತ್ತು ತಮಗೆ ಬರುವ ಅಶ್ಲೀಲ ಕಾಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರಾ ಎನ್ನುವ ಕುತೂಹಲ ಈಗ ಅನೇಕರನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋಗೆ ನಾನಾ ರೀತಿಯ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ.
ಇನ್ನುಳಿದಂತೆ ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ಜಿಎಸ್‌ಟಿ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಮಿಕ್ಕಂತೆ ನಿವೇದಿತಾ ಗೌಡ ಅವರಿಗೆ ಬೇರೆ ಬೇರೆ ಭಾಷೆಯಲ್ಲಿ ಕೂಡ ಅವಕಾಶಗಳನ್ನು ಎದುರು ನೋಡುತ್ತಿರುವ ನಿವೇದಿತಾ ಗೌಡ ತೆಲುಗಿನಲ್ಲಿ ವಾಲು ಕಳ್ಳತಾ ಎಂಬ ಆಲ್ಬಂ ಹಾಡಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಮನಸಾರೆ ನಿನ್ನ ಹೆಸರಿನಲ್ಲಿ ಈ ಹಾಡು ಕನ್ನಡದಲ್ಲಿ ಕೂಡ ಬಿಡುಗಡೆಯಾಗಿತ್ತು.


Click it and Unblock the Notifications










