ಕೋಟ್ಯಧಿಪತಿಯಲ್ಲಿ ನಿವೇದಿತಾ ಗೌಡ ಕಮಾಲ್: ಎಷ್ಟು ಹಣ ಗೆದ್ದರು?

ಬಿಗ್ ಬಾಸ್ ಕನ್ನಡ ಶೋ ಮೂಲಕ ಕರ್ನಾಟಕದ ಗಮನ ಸೆಳೆದ ನಿವೇದಿತಾ ಗೌಡ ಈಗ ಸ್ಟಾರ್ ಸೆಲೆಬ್ರಿಟಿ. ತಮ್ಮ ವಿಶಿಷ್ಟವಾದ ಮಾತು, ಹೇರ್ ಸ್ಟೈಲ್ ಮೂಲಕ ಟಿ.ಆರ್.ಪಿ ಗಳಿಸಿಕೊಂಡಿರುವ ಗೊಂಬೆ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.

ಕಳೆದ ಶನಿವಾರ ಮತ್ತು ಭಾನುವಾರ ನಡೆದ ಸೆಲೆಬ್ರಿಟಿ ಎಪಿಸೋಡ್ ನಲ್ಲಿ ನಿವೇದಿತಾ ಹಾಟ್ ಸೀಟ್ ಗೆ ಆಯ್ಕೆಯಾಗಿದ್ದರು. ಈ ಹಿಂದೆ ನಿವೇದಿತಾ ಗೌಡ ಕನ್ನಡ ಮಾತನಾಡುವ ಶೈಲಿ ದೊಡ್ಡ ಮಟ್ಟದ ಟ್ರೋಲ್ ಆಗಿತ್ತು. ನಿವೇದಿತಾ ಗಂಭೀರ ವಿಷ್ಯವನ್ನ ಹೇಳುತ್ತಿದ್ದರೂ ಅದರಲ್ಲಿ ತಮಾಷೆ ಹುಡುಕುವಂತಾಗುತ್ತಿತ್ತು.

ಕನ್ನಡದ ಕೋಟ್ಯಧಿಪತಿಯಲ್ಲಿ ನಿವೇದಿತಾ ಅವರನ್ನ ನೋಡಿ ಈ ಹುಡುಗಿ ಎಷ್ಟು ಪ್ರಶ್ನೆಗಳಿಗೆ ಉತ್ತರ ಕೊಡ್ತಾರೋ, ಎಷ್ಟು ಗೆಲ್ತಾರೋ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದ್ರೆ, ಎಲ್ಲರಿಗೂ ಅಚ್ಚರಿ ನೀಡಿದ ಗೊಂಬೆ ಒಳ್ಳೆಯ ಮೊತ್ತ ಗೆದ್ದುಕೊಂಡು ಹೋದರು. ಹಾಗಿದ್ರೆ, ನಿವೇದಿತಾ ಗೌಡ ಗೆದ್ದ ಹಣವೆಷ್ಟು?

ನಿವೇದಿತಾ ಆಯ್ಕೆಯಾದ ಪ್ರಶ್ನೆ

ನಿವೇದಿತಾ ಆಯ್ಕೆಯಾದ ಪ್ರಶ್ನೆ

ಫಾಸ್ಟೆಸ್ಟ ಫಿಂಗರ್ ಪ್ರಶ್ನೆಯಲ್ಲಿ ಅಕುಲ್, ಕೃಷಿ ತಾಪಂಡ ಅವರಿಗಿಂತ ಮೊದಲು ನಿವೇದಿತಾ ಗೌಡ ಉತ್ತರಿಸಿದ್ದಾರೆ. ಆ ಪ್ರಶ್ನೆ ಇಲ್ಲಿದೆ.

ಚಿಕ್ಕದರಿಂದ ಪ್ರಾರಂಭಿಸಿ ಈ ಪಕ್ಷಿಗಳನ್ನು ಅವುಗಳ ಸಾಮಾನ್ಯ ವಯಸ್ಕ ಗಾತ್ರಕ್ಕೆ ಅನುಗುಣವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ?

A ಆಸ್ಟ್ರಿಚ್

B ರಣಹದ್ದು

C ಕೋಗಿಲೆ

D ಗುಬ್ಬಚ್ಚಿ

ಸರಿಯಾದ ಉತ್ತರ: D ಗುಬ್ಬಚ್ಚಿ, C ಕೋಗಿಲೆ, B ರಣಹದ್ದು, A ಆಸ್ಟ್ರಿಚ್

1.60 ಲಕ್ಷ ಉಳಿಸಿಕೊಂಡ ಗೊಂಬೆ

1.60 ಲಕ್ಷ ಉಳಿಸಿಕೊಂಡ ಗೊಂಬೆ

ಒಂಭತ್ತು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ನಿವೇದಿತಾ ಗೌಡ 1.60 ಲಕ್ಷವನ್ನ ಗೆದ್ದುಕೊಂಡರು. ತನ್ನಲ್ಲಿ ಇದ್ದ ಮೂರು ಲೈಫ್ ಲೈನ್ ಬಳಸಿಕೊಂಡು ನಿವೇದಿತಾ ಗೌಡ ಎರಡನೇ ಸೇಫ್ ಝೋನ್ ಬಳಿ ಬಂದು ಆಟವನ್ನ ಕೈಚೆಲ್ಲಿದರು. ಹತ್ತನೇ ಪ್ರಶ್ನೆಗೆ ಉತ್ತರ ಕೊಡಲು ಮುಂದಾಗಲಿಲ್ಲ. ಹಾಗಾಗಿ, 3.20 ಲಕ್ಷದ ಪ್ರಶ್ನೆಗೆ ಉತ್ತರ ಕೊಡಲಿಲ್ಲ.

ಯಾವುದು ಆ ಪ್ರಶ್ನೆ

ಯಾವುದು ಆ ಪ್ರಶ್ನೆ

2017 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ತಂಡ ಯಾವುದು?

A ಐರ್ಲೆಂಡ್

B ವೆಸ್ಟ್ ಇಂಡೀಸ್

C ಇಂಗ್ಲೆಂಡ್

D ಆಸ್ಟ್ರೇಲಿಯಾ

ಕ್ವಿಟ್ ಮಾಡಿದ ನಿವೇದಿತಾ

ಕ್ವಿಟ್ ಮಾಡಿದ ನಿವೇದಿತಾ

ಹತ್ತನೇ ಪ್ರಶ್ನೆ ನೋಡಿದ ಬಳಿಕ ಉತ್ತರ ಬಗ್ಗೆ ಯಾವುದೇ ಸ್ಪಷ್ಟನೆ ಇರದ ನಿವೇದಿತಾ ಗೌಡ, ಆಟವನ್ನ ಕ್ವಿಟ್ ಮಾಡಲು ತೀರ್ಮಾನಿಸಿದರು. ಕ್ರಿಕೆಟ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಎಂಬ ಕಾರಣ ನೀಡಿ, ಗೇಮ್ ಕ್ವಿಟ್ ಮಾಡಿದರು. ಈ ಮೂಲಕ ಒಂಭತ್ತು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದಕ್ಕೆ 1.60 ಲಕ್ಷ ಮಾತ್ರ ತನ್ನ ಖಾತೆಯಲ್ಲಿ ಉಳಿಸಿಕೊಂಡರು. 3.20 ಲಕ್ಷ ಸಿಕ್ಕಲಿಲ್ಲ.

ಧೀನ ಬಂಧು ಟ್ರಸ್ಟ್ ಮಕ್ಕಳಿಗಾಗಿ ಆಟ

ಧೀನ ಬಂಧು ಟ್ರಸ್ಟ್ ಮಕ್ಕಳಿಗಾಗಿ ಆಟ

ಅಂದ್ಹಾಗೆ, ಸೆಲೆಬ್ರಿಟಿಗಳು ಕನ್ನಡದ ಕೋಟ್ಯಧಿಪತಿ ಆಟ ಆಡಿದ್ದು ಧೀನ ಬಂಧು ಟ್ರಸ್ಟ್ ಮಕ್ಕಳಿಗಾಗಿ. ಕಿರುತೆರೆ ನಟ ಭವಾನಿ ಸಿಂಗ್ 1.60 ಲಕ್ಷ, ಜೆಕೆ 10 ಸಾವಿರ ಹಾಗೂ ನಿವೇದಿತಾ ಗೌಡ 1.60 ಲಕ್ಷ ಗೆದ್ದುಕೊಟ್ಟರು. ಹತ್ತನೇ ಪ್ರಶ್ನೆಗೆ ಸರಿಯಾದ ಉತ್ತರ: C ಇಂಗ್ಲೆಂಡ್

More from Filmibeat

English summary
Kannadada kotyadhipathi 4: Kannada actor niveditha gowda participated in Kannadada kotyadhipathi. she won bigg amount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X