BBK 11: ಈ ವಾರ ಎಲಿಮಿನೇಷನ್ ಆಗಿದ್ಯಾರು? ಭಾನುವಾರ ಎಪಿಸೋಡ್‌ನಲ್ಲಿ ಏನಾಯ್ತು?

ಬಿಗ್‌ಬಾಸ್ ಕನ್ನಡ ಸೀಸನ್ 11 ಅಂತಿಮ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿಯಿದೆ. ಮತ್ತೊಂದು ವೀಕೆಂಡ್ ಬಂದಿದ್ದು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಆದರೆ ಬಹುತೇಕರಿಗೆ ಈ ವಾರದ ಎಲಿಮಿನೇಷನ್ ಬಗ್ಗೆ ಸುಳಿವು ಸಿಕ್ಕಿದೆ.

ಈ ವಾರ ಬಿಗ್‌ಬಾಸ್ ಶೋ ಬಹಳ ಕಲರ್‌ಫುಲ್ ಆಗಿತ್ತು. ಕಾರಣ ಸ್ಪರ್ಧಿಗಳ ಕುಟುಂಬ ಸದಸ್ಯರು ಮನೆಯೊಳಗೆ ಬಂದಿದ್ದರು. ಎಲ್ಲರೂ ಹೇಗೆ ಆಡುತ್ತಿದ್ದಾರೆ, ಮುಂದೆ ಹೇಗಿರಬೇಕು ಎನ್ನುವ ಬಗ್ಗೆ ತಿಳಿಹೇಳಿ ಬಂದಿದ್ದಾರೆ. ಇನ್ನು ಮನೆಯಿಂದ ಬಂದ ರುಚಿಯಾದ ಊಟ ಸವಿದಿದ್ದಾರೆ. ಹನುಮಂತನ ಪೋಷಕರು ಮನೆಮಂದಿಗೆಲ್ಲಾ ಊಟ ತಂದು ಬಡಿಸಿದ್ದರು.

No eviction again on Bigg Boss kannada 11 Makers Plan Major Twist next week

ಕಿಚ್ಚನ ಪಂಚಾಯ್ತಿ ಮುಗಿದಿದೆ. ಎಂದಿನಂತೆ ತಪ್ಪು ಮಾಡಿದವರಿಗೆ ಕಿಚ್ಚನ ಮಾತಿನ ಪೆಟ್ಟು ಬಿದ್ದಿದೆ. ತ್ರಿವಿಕ್ರಂ ದುರಂಹಕಾರದ ಮಾತಿಗೆ ಸುದೀಪ್ ಗುದ್ದು ಕೊಟ್ಟಿದ್ದಾರೆ. ದಿನಸಿ ಟಾಸ್ಕ್‌ನಲ್ಲಿ ಆಟಗಾರರನ್ನು ಆಯ್ಕೆ ಮಾಡುವ ವಿಚಾರಕ್ಕೆ ತ್ರಿವಿಕ್ರಂ ನಡೆದುಕೊಂಡ ರೀತಿ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದರು. ಈ ಸಂಬಂಧ ಹನುಮಂತಗೂ ಕಿಚ್ಚ ಪ್ರಶ್ನೆ ಮಾಡಿದರು.

ಪಂಚಾಯ್ತಿ ವೇಳೆ ಸುದೀಪ್ ಒಂದು ಆಕ್ಟಿವಿಟಿ ಟಾಸ್ಕ್ ಕೊಟ್ಟರು. ಈ ವೇಳೆ ಮಂಜು ಆಗೂ ಗೌತಮಿ ತಮ್ಮಿಬ್ಬರ ಫ್ರೆಂಡ್‌ಶಿಪ್ ಕಟ್ ಮಾಡಿಕೊಳ್ಳುವ ಮಾತನಾಡಿದರು. ಯಾರು ಇಲ್ಲದೇ ಇದ್ದರೆ ತಮ್ಮ ಆಟ ಚೆನ್ನಾಗಿರುತ್ತದೆ ಅಂತವರ ಫೋಟೊ ಕಟ್ ಮಾಡುವ ಟಾಸ್ಕ್ ಅದು. ಮಂಜು ಹೋಗಿ ಗೌತಮಿ ಫೋಟೊ ಕಟ್ ಮಾಡಿ ಕಾರಣ ಕೊಟ್ಟರು. ಅದೇ ರೀತಿ ಗೌತಮಿ ಸಹ ಮಂಜು ಫೋಟೊ ತೆಗೆದುಕೊಂಡರು.

ಇನ್ನು ಎಲಿಮಿನೇಷನ್ ವಿಚಾರಕ್ಕೆ ಬಂದರೆ ಈ ವಾರ ಯಾರೂ ಕೂಡ ಮನೆಯಿಂದ ಹೊರ ಬಂದಿಲ್ಲ. 3 ದಿನಗಳ ಹಿಂದೆಯೇ ಈ ಬಗ್ಗೆ ವೀಕ್ಷಕರಿಗೆ ಸುಳಿವು ಸಿಕ್ಕಿತ್ತು. ಕಾರಣ ವೋಟಿಂಗ್ ಲೈನ್ ಓಪನ್ ಆಗಿರಲಿಲ್ಲ. ಎಲಿಮಿನೇಷನ್ ನಡೆಯದ ವಾರಗಳಲ್ಲಿ ಈ ರೀತಿ ಆಗುತ್ತದೆ. ಈ ವಾರವೂ ಅದೇ ಜರುಗಿತ್ತು.

ಸದ್ಯ ಇಬ್ಬರು ವೈಲ್ಡ್‌ಕಾರ್ಡ್ ಎಂಟ್ರಿ ಸೇರಿ 9 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಇದ್ದಾರೆ. ಶೀಘ್ರದಲ್ಲೇ ಫಿನಾನೆ ಇರುವುದರಿಂದ ಮುಂದಿನ ವಾರದ ನಡುವೆಯೇ ಬಿಗ್‌ಬಾಸ್ ಮನೆಯಿಂದ ಯಾರಾದರೂ ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಇಬ್ಬರು ಮನೆಯಿಂದ ಹೊರ ಬಂದರೂ ಅಚ್ಚರಿಪಡಬೇಕಿಲ್ಲ.

ಅದ್ಯಾಕೋ ಪದೇ ಪದೆ ಎಲಿಮಿನೇಷನ್‌ ಪ್ರಕ್ರಿಯೆ ಮುಂದೂಡಲಾಗುತ್ತಿದೆ. ಈ ಸೀಸನ್‌ನಲ್ಲಿ ನೋ ಎಲಿಮಿನೇಷನ್ ವಾರಗಳೇ ಜಾಸ್ತಿಯಿದೆ. ಆದರೆ ಹಿಂದಿನ ಸೀಸನ್‌ಗಳಲ್ಲಿ ಈ ರೀತಿ ಆಗುತ್ತಿರಲಿಲ್ಲ. ಈ ಬಗ್ಗೆ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ. 100 ದಿನಗಳು ಮುಗಿಯುತ್ತಾ ಬಂದರೂ ಮನೆಯೊಳಗೆ 9 ಮಂದಿ ಸ್ಪರ್ಧಿಗಳು ಉಳಿದಿರುವುದು ವಿಶೇಷ ಎನಿಸಿದೆ.

ಬಿಗ್‌ಬಾಸ್ ಫಿನಾಲೆಗೆ ಮೂರು ವಾರ ಬಾಕಿಯಿದೆ ಎಂದು ಸುದೀಪ್ ಶನಿವಾರದ ಎಪಿಸೋಡ್‌ನಲ್ಲಿ ಹೇಳಿದ್ದಾರೆ. ಹಾಕಿದ್ದರೆ ಇನ್ನೆರಡು ವಾರದಲ್ಲಿ ಮೂರರಿಂದ ನಾಲ್ಕು ಜನ ಹೊರ ಬರಲಿದ್ದಾರೆ. ಫಿನಾಲೆಗೆ 5ರಿಂದ 6 ಜನ ಹೋಗುವ ಸಾಧ್ಯತೆಯಿದೆ. ಈ ಬಾರಿ ಕೂಡ 100 ದಿನ ದಾಟಿ ಶೋ ನಡೆಯಲಿದೆ.

ಈ ಸೀಸನ್‌ ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದೆ. ಲಾಯರ್ ಜಗದೀಶ್ ಹಾಗೂ ರಂಜಿತ್ ಶಿಕ್ಷೆ ಅನುಭವಿಸಿ ಮನೆ ತೊರೆದರು. ಶೋಭಾ ಶೆಟ್ಟಿ ಹಾಗೂ ಗೋಲ್ಡ್ ಸುರೇಶ್ ತಾವಾಗಿಯೇ ಶೋ ಕ್ವಿಟ್ ಮಾಡಿ ಹೊರ ಬಂದರು. ಆದರೂ ಇನ್ನು ಮನೆಯೊಳಗೆ 9 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು.

More from Filmibeat

English summary
Who Got Eliminated From Bigg Boss kannada 11 this weekend?;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X