BBK10: ಎಲ್ಲರೂ ಸೇಫ್ ಎಂದು ನಿಟ್ಟಿಸಿರುಬಿಡುವಂತೆ ಮಾಡಿದ ಕಿಚ್ಚ: ಕಾರಣವೇನು?

ಬಿಗ್‌ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಈ ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಬಿಗ್‌ಬಾಸ್ ಮನೆಗೆ 17 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅದರಲ್ಲಿ 6 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವ ಕುತೂಹಲ ಇತ್ತು. ಆದರೆ ಎಲ್ಲರಿಗೂ ಒಂದು ಸರ್‌ಪ್ರೈಸ್ ಕಾದಿತ್ತು.

ವಾರದ ಕತೆ ಕಿಚ್ಚನ ಜೊತೆ ಮುಗಿದಿದೆ. 'ಸೂಪರ್ ಸಂಡೇ' ಎಪಿಸೋಡ್ ಸಹ ಮುಕ್ತಾಯವಾಗಿದೆ. ಆದರೆ ಯಾರೊಬ್ಬರು ಈ ವಾರ ಮನೆಯಿಂದ ಹೊರಬಂದಿಲ್ಲ. ಈ ವಾರ ಎಲ್ಲಾ ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾರೆ ಕಿಚ್ಚ ಸುದೀಪ್. ಅಂದಹಾಗೆ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬರಲು ವಿನಯ್, ಪ್ರತಾಪ್, ಸಿರಿ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್, ಸಂಗೀತಾ, ಮೈಕಲ್ ನಾಮಿನೇಟ್ ಆಗಿದ್ದರು.

No eviction again on Bigg Boss kannada season 10

ಶನಿವಾರದ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್, ನಮ್ರತಾ, ಡ್ರೋನ್ ಪ್ರತಾಪ್ ಸೇಫ್ ಆಗಿದ್ದರು. ವಿನಯ್, ಸಂಗೀತಾ, ತನಿಷಾ, ಮೈಕೆಲ್ ಹಾಗೂ ಸ್ನೇಹಿತ್ ಈ ಐವರಲ್ಲಿ ಒಬ್ಬರು ಈ ವಾರ ತಮ್ಮ ಆಟ ಮುಗಿಸಿ ಬರಬೇಕಿತ್ತು. ಆದರೆ ಮೊದಲಿಗೆ ವಿನಯ್‌ನ ಸೇಫ್ ಮಾಡಿದ್ದ ಕಿಚ್ಚ ಬಳಿಕ ಕ್ರಮವಾಗಿ ಸಂಗೀತಾ, ತನಿಷಾ, ಮೈಕೆಲ್‌ ಹಾಗೂ ಕೊನೆಗೆ ಸ್ನೇಹಿತ್‌ಗೂ ಮತ್ತೊಂದು ಅವಕಾಶ ಕೊಟ್ಟು ಸ್ವೀಟ್ ಶಾಕ್ ಕೊಟ್ಟರು.

ಎರಡು ವಾರದ ಹಿಂದೆ ಇಬ್ಬರು ಎಲಿಮಿನೇಟ್ ಆಗಿದ್ದರು. ಅದಕ್ಕಿಂತ ಮುನ್ನ ದಸರಾ ಹಬ್ಬದ ವಾರ ಸೇರಿದಂತೆ 2 ವಾರ ಎಲಿಮಿನೇಷನ್‌ ಇರಲಿಲ್ಲ. ಕೊನೆಯದಾಗಿ ಸ್ನೇಹಿತ್ ಹಾಗೂ ಮೈಕೆಲ್ ಉಳಿದುಕೊಂಡಿದ್ದರು. ಸ್ನೇಹಿತ್ ಈ ವಾರ ಮನೆಯಿಂದ ಹೊರಬರೋದು ಬಹುತೇಕ ಖಚಿತ ಎಂದು ವೀಕ್ಷಕರು ಅಂದುಕೊಂಡಿದ್ದರು.

ಈ ವಾರ ಇಬ್ಬರೂ ಕೂಟ ಉತ್ತಮವಾಗಿ ಆಡಿದ್ದರು. ಅದೇ ಕಾರಣಕ್ಕೆ ಯಾರನ್ನು ಮನೆಯಿಂದ ಹೊರಹಾಕಬೇಕು ಎನ್ನುವುದರಲ್ಲಿ ಗೊಂದಲ ಮೂಡಿದ್ದು ಸುಳ್ಳಲ್ಲ. ಅದೇ ಕಾರಣಕ್ಕೋ ಏನೋ ಸುದೀಪ್ ಇಬ್ಬರನ್ನು ಮನೆಗೆ ಕಳಿಸಲ್ಲ ಎಂದುಬಿಟ್ಟರು. ಅದಕ್ಕೆ ಕಾರಣವನ್ನು ಕೊಟ್ಟರು.

ಮನೆಗೆ ಈ ವಾರ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಇಬ್ಬರು ಹೊಸದಾಗಿ ಬಂದಿದ್ದಾರೆ. ಇಂತಹ ಸಮಯದಲ್ಲಿ 50 ದಿನಗಳಿಂದ ಆಡುತ್ತಾ ಬಂದಿರುವ ಗಟ್ಟಿ ಸ್ಪರ್ಧಿಗಳನ್ನು ಹೊರಹಾಕುವುದು ಸರಿಯಲ್ಲ, ಒಂದು ವೇಳೆ ಅವರಿಬ್ಬರ ಹೆಸರು ನಾಮಿನೇಷನ್‌ನಲ್ಲಿ ಇದ್ದಿದ್ದರೆ ಯಾರು ಹೊರಗೆ ಹೋಗುತ್ತಿದ್ದರು? ಎಂದಿದ್ದಾರೆ. ಹಾಗಂತ ಹೊಸಬರನ್ನು ನಾಮಿನೇಷನ್ ಲಿಸ್ಟ್‌ಗೆ ಸೇರಿಸುವಂತೆಯೂ ಇಲ್ಲ, ಅವರಿಗೂ ಕೂಡ ಅವಕಾಶ ಬೇಕು. ಇದೆಲ್ಲ ಯೋಚಿಸಿದ ಬಳಿಕ ಯಾರನ್ನು ಎಲಿಮಿನೇಟ್ ಮಾಡದಿರಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ.

ಇನ್ನು ಸ್ವತಃ ಸುದೀಪ್ ಸೇಫ್ ಮಾಡಿದ್ದ ಮೈಕೆಲ್ ಹಾಗೂ ಸ್ನೇಹಿತ್ ಇಬ್ಬರನ್ನು ತಾವೇ ನೇರವಾಗಿ ಮುಂದಿನ ವಾರ ನಾಮಿನೇಷನ್‌ ಲಿಸ್ಟ್‌ಗೆ ಸೇರಿಸಿದ್ದಾರೆ. ಇವರಿಬ್ಬರು ಹೇಗೆ ಆಡಿ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕಳೆದ 9 ಸೀಸನ್‌ಗಳಿಗಿಂತ ಸಂಥಿಂಗ್ ಸ್ಪೆಷಲ್ ಸೀಸನ್ ಸೊಗಸಾಗಿ ಮೂಡಿ ಬರ್ತಿದೆ. ಆದರೆ ಕೊನೆ ವಾರಗಳಲ್ಲಿ ಕೊಡಬೇಕಾದ ಟಾಸ್ಕ್‌ಗಳನ್ನು ಆರಂಭದಲ್ಲೇ ಕೊಡಲಾಗುತ್ತಿದೆ. ಹಾಗಾಗಿ ಕುತೂಹಲ ಮೂಡಿಸುತ್ತಿದೆ. ಹಾಗಾದರೆ ಕೊನೆಯ ವಾರಗಳಲ್ಲಿ ಶೋ ಇಷ್ಟು ಇಂಟ್ರೆಸ್ಟಿಂಗ್ ಆಗಿ ಇರುವುದಿಲ್ಲವಾ? ಎನ್ನುವ ಅನುಮಾನ ಸಹ ಮೂಡುತ್ತದೆ.

More from Filmibeat

English summary
bigg boss kannada 10; no elimination week; sudeep safes contestants again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X