'Ismart ಜೋಡಿ' ಶೋನಲ್ಲಿ ಜಡ್ಜ್‌ಗಳಿಲ್ಲ: ಗೆದ್ದವರಿಗೆ ಸಿಗುತ್ತೆ ಬಂಪರ್ ಬಹುಮಾನ!

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈ ರಿಯಾಲಿಟಿ ಶೋಗಳು ಪ್ರಾರಂಭವಾದಾಗಿನಿಂದಲೂ ಪ್ರಯೋಗಗಳು ನಡೆಯೋದು ಸಾಮಾನ್ಯವಾಗಿಬಿಟ್ಟಿದೆ.

ಈಗ ಜೋಡಿಗಳದ್ದೆ ಸದ್ದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಅದ್ಧೂರಿ ಸೆಟ್ ನಿರ್ಮಿಸಿದೆ. ಸೆಲೆಬ್ರಿಟಿ ಜೋಡಿಗಳನ್ನು ಸ್ವಾಗತಿಸಲು ಪ್ರೇಕ್ಷಕರ ಬಳಗ ಕಾದು ಕುಳಿತಿದಿದೆ.

'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮದಲ್ಲಿ ಕುಣಿಸು ಕುಪ್ಪಳಿಸಲು ಸೆಲೆಬ್ರೆಟಿ ಜೋಡಿಗಳು ತಯಾರಾಗಿದ್ದಾರೆ. 40 ವರ್ಷದ ದಾಂಪತ್ಯ ಜೀವನ ನಡೆಸಿರುವ ಜೋಡಿಗಳಿಂದ ಹಿಡಿದು ಇತ್ತೀಚೆಗೆ ಮದುವೆಯಾಗಿರುವ ಕಪಲ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಇದ್ದಾರೆ. ಇದಕ್ಕೆ ಜಡ್ಜ್‌ಗಳು ಇಲ್ಲ, ಗೆದ್ದವರಿಗೆ ಬಂಪರ್ ಬಹುಮಾನ ಪಕ್ಕಾ.

'ಇಸ್ಮಾರ್ಟ್ ಜೋಡಿ'ಯಲ್ಲಿ ತೀರ್ಪುಗಾರಿಲ್ಲ!

'ಇಸ್ಮಾರ್ಟ್ ಜೋಡಿ'ಯಲ್ಲಿ ತೀರ್ಪುಗಾರಿಲ್ಲ!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ಕಾರ್ಯಕ್ರಮ ಅದ್ಧೂರಿಯಾಗಿ ಶುರುವಾಗುತ್ತಿದೆ. ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಮೆಗಾ ಓಪನಿಂಗ್ ಜುಲೈ 16ರಂದು ನಡೆಯಲಿದೆ. ಕಾರ್ಯಕ್ರಮದ ನಿರೂಪಣೆಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಮಾಡಲಿದ್ದು, ಇದರಲ್ಲಿ ತೀರ್ಪುಗಾರರು ಇಲ್ಲದಿರುವುದೇ ವಿಶೇಷ. ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ತೀರ್ಪುಗಾರರು ಇರುವುದಿಲ್ಲ. ಹಾಗಾಗಿ ಈ ಕಾರ್ಯಕ್ರಮದ ಸಂಪೂರ್ಣ ಹೊಣೆಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಹೊತ್ತುಕೊಂಡಿದ್ದಾರೆ.

ಗೆದ್ದ ದಂಪತಿಗೆ 10 ಲಕ್ಷ ರೂ. ಬಹುಮಾನ!

ಗೆದ್ದ ದಂಪತಿಗೆ 10 ಲಕ್ಷ ರೂ. ಬಹುಮಾನ!

ತೀರ್ಪುಗಾರರು ಇಲ್ಲದ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿಕೊಂಡಿರುವ ಗಣೇಶ್ ಅವರೇ ಸ್ಪರ್ಧಿಗಳಿಗೆ ಹಲವು ಟಾಸ್ಕ್‌ಗಳನ್ನು ನೀಡುತ್ತಾರೆ. ಪ್ರತೀ ಆಟದ ಪರ್ಫಾಮೆನ್ಸ್ ನೋಟ್ ಮಾಡಿಕೊಳ್ಳಲಾಗುತ್ತದೆ. ಮೊದಲ ಐದು ಕಂತುಗಳು ಮುಗಿದ ಮೇಲೆ ಎಲಿಮೆನೇಷನ್ ರೌಂಡ್ ಶುರುವಾಗುತ್ತದೆ. ಉತ್ತಮವಾಗಿ ಆಟವಾಡಿ ಗೆದ್ದ ಜೋಡಿ ಕೊನೆಗೆ ವಿನ್ ಆಗುತ್ತಾರೆ. ಗೆದ್ದ ದಂಪತಿಗೆ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ.

ಇಸ್ಮಾರ್ಟ್ ಜೋಡಿ ಬಗ್ಗೆ ಗಣಿ ಮಾತು

ಇಸ್ಮಾರ್ಟ್ ಜೋಡಿ ಬಗ್ಗೆ ಗಣಿ ಮಾತು

ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಬಗ್ಗೆ ಗಣೇಶ್ ಮಾತನಾಡಿದ್ದು, ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳಿಂದ ಹಿಡಿದು 40 ವರ್ಷ ದಾಂಪತ್ಯ ನಡೆಸಿದ ಹಿರಿಯರೂ ಇದ್ದಾರೆ. ಸಣ್ಣ-ಪುಟ್ಟ ವಿಷಯಕ್ಕೂ ಬಹಳ ಬೇಗ ದೂರವಾಗುವ ದಂಪತಿಗಳಿಗೆ ಜೀವನದ ಪಾಠ ಹೇಳುವ ಪ್ರಯತ್ನ ಈ ಕಾರ್ಯಕ್ರಮದ್ದು ಎಂದು ಹೇಳಿದ್ದಾರೆ.

10 ಜೋಡಿಗಳ ನಡುವೆ ಆಟ!

10 ಜೋಡಿಗಳ ನಡುವೆ ಆಟ!

ಒಟ್ಟು 26 ಎಪಿಸೋಡ್ ಇರುವ ಈ ರಿಯಾಲಿಟಿ ಶೋನಲ್ಲಿ ಹಲವು ರೀತಿಯ ಅನುಭವವಿರುವ ಜೋಡಿಗಳು ಇರುತ್ತಾರೆ. ಇವರೆಲ್ಲಾ ತಮ್ಮ ದಾಂಪತ್ಯ ಜೀವನದಲ್ಲಿ ಆದ ಅನುಭವಗಳನ್ನು ಹೇಳುತ್ತಾರೆ. ಅದರಿಂದ ಅವರು ಕಲಿತ ಪಾಠ, ಮುಂದಿನ ಅವರ ಬದುಕಿನ ದೃಷ್ಟಿ ಕೋನ, ಎಂಥಹಾ ಸಂದರ್ಭಗಳನ್ನು ಹೇಗೆಲ್ಲಾ ಎದುರಿಸ ಬೇಕಾಯ್ತು. ಹೀಗೆ ಎಲ್ಲಾ ವಿಚಾರಗಳನ್ನೂ ದಂಪತಿಗಳು ತೆರೆಮೇಲೆ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಟಾಸ್ಕ್ ಇರುವುದರಿಂದ ಪ್ರೇಕ್ಷಕರನ್ನು ದಂಪತಿಗಳು ರಂಜಿಸುವುದರಲ್ಲಿ ಡೌಟೇ ಇಲ್ಲ.

More from Filmibeat

English summary
No Judges In Star Suvarna Reality Show Ismart Jodi, Winning Prize Amount Is 10 Lakh Rs, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X