ಇನ್‌ಸ್ಟಾಗ್ರಾಮ್ ಲೈವ್,80,000 ಜನ ; ಸಾಯಲು ಮುಂದಾದ ಬಿಗ್ ಬಾಸ್ ಸ್ಫರ್ಧಿ- ನಮ್ಮ ಪಾಲಿಗೆ ಅವನು ಸತ್ತ-ತಂದೆಯಿಂದ ಪತ್ರಿಕಾ ಪ್ರಕಟಣೆ

ಪ್ರೀತಿ ಎಂಬ ಎರಡಕ್ಷರಕ್ಕೆ ಎಲ್ಲ ನೋವನ್ನು ಮರೆಸುವ ಶಕ್ತಿ ಇದೆ. ಧರ್ಮದ ಹಾದಿಯಲ್ಲಿ ನೆಮ್ಮದಿ ಇದೆ. ಹಣ ಇದ್ದಲ್ಲಿ ಸುಖ ಇದೆ. ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ.. ಕೆಲ ಒಮ್ಮೆ ಬದುಕು ಬೇರೆಯದ್ದೇ ತಿರುವು ಪಡೆಯುತ್ತೆ. ಹಣ-ಕೀರ್ತಿ ಮತ್ತು ಯಶಸ್ಸು ಕಾಲ ಬುಡದಲ್ಲಿ ಬಂದು ಬಿದ್ದಿದ್ದರೂ ಕೂಡ ನೆಮ್ಮದಿ ಇರುವುದಿಲ್ಲ. ಪ್ರೀತಿ ಮರಿಚೀಕೆಯಾಗಿರುತ್ತೆ.

ಹಣ, ಧರ್ಮ, ಜಾತಿಯ ಮುಂದೆ ರಕ್ತ ಸಂಬಂಧಗಳು ಗೌಣವಾಗಿ, ಮನೆಯವರಿಂದಲೇ ಕೆಲ ಒಮ್ಮೆ ಮಾನಸಿಕ ಕಿರುಕುಳ ಅನುಭವಿಸುವಂತಹ ದಿನಗಳು ಕೂಡ ಬರುತ್ತವೆ. ಸಾಮಾಜಿಕ ಒತ್ತಡ.. ಖಿನ್ನತೆ.. ಖ್ಯಾತಿಯ ಶಿಖರಕ್ಕೇರಿದವನನ್ನು ಕ್ಷಣಾರ್ಧದಲ್ಲಿಯೇ ಪ್ರಪಾತಕ್ಕೆ ತಳ್ಳುತ್ತೆ. ಇದಕ್ಕೆ ಉದಾಹರಣೆಯಂತೆ ಅನುರಾಗ್ ಡೋಬಲ್ ಅವರ ವ್ಯೆಯಕ್ತಿಕ ಬದುಕು ಸದ್ಯ ಹಲವರ ಕಣ್ಮುಂದೆ ಇದೆ.

No More My Son UK07 Rider Anurag Dobhal s Father Disowns Him Amid Viral Tragedy

ಹೌದು, ಅನುರಾಗ್ ಡೋಬಾಲ್.. ಪ್ರಯಾಣ ಪ್ರಿಯ. ಯೂಟ್ಯೂಬರ್ ಮತ್ತು ಬೈಕ್ ರೈಡರ್. UK07 ರೈಡರ್ ಎಂದೇ ಉತ್ತರ ಭಾರತದಲ್ಲಿ ಜನಜನಿತರಾದವರು ಇವರು.

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಹಿಂದಿಯ ''ಬಿಗ್ ಬಾಸ್'' ಸೀಸನ್ 17ರ ಮನೆಗೆ ಹೋಗಿದ್ದ ಅನುರಾಗ್ ಧೋಬಾಲ್‌ 2025ರ ಮೇನಲ್ಲಿ ರಿತಿಕಾ ಚೌಹಾಣ್ ಅವರ ಜೊತೆ ಮದುವೆಯಾಗಿದ್ದರು. ಮದುವೆ ಮುನ್ನ ಐದು ವರ್ಷಗಳಿಂದ ರಿತಿಕಾ ಅವರನ್ನು ಅನುರಾಗ್ ಪ್ರೀತಿ ಮಾಡುತ್ತಿದ್ದರು ಕೂಡ ಈ ವಿಷಯ ಇವರ ಹಿಂಬಾಲಕರಿಗೆ ಗೊತ್ತಾಗಿರಲಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಂಬಂಧದ ಗೌಪ್ಯತೆಯನ್ನು ಅನುರಾಗ್ ಕಾಪಾಡಿಕೊಂಡಿದ್ದರು.

ಇನ್ನೂ ರಿತಿಕಾ ಕೂಡ ಸಾಮಾನ್ಯದವರಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡವರು ಇವರು. ಈ ಹಿನ್ನೆಲೆ ಕಳೆದ ಮಾರ್ಚ್‌ನಲ್ಲಿ ರಿತಿಕಾ ಜೊತೆ ಅನುರಾಗ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಾಗ ಹಲವರು ಅಚ್ಚರಿಗೀಡಾಗಿದ್ದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಇವರ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಕೂಡ ಆಗಿತ್ತು.

ಮದುವೆಯಾದ ನಾಲ್ಕೇ ತಿಂಗಳಿಗೆ ಇಬ್ಬರು ತಮ್ಮ ಅಭಿಮಾನಿಗಳಿಗೆ ತಾವು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿರುವುದಾಗಿ ಹೇಳಿದ್ದರು. ಖುಷಿ ಪಟ್ಟಿದ್ದರು.

No More My Son UK07 Rider Anurag Dobhal s Father Disowns Him Amid Viral Tragedy

ಇಂಥಾ ಅನುರಾಗ್ ಅವರ ವ್ಯೆಯಕ್ತಿಕ ಬದುಕು ಸದ್ಯ ಹಳಿ ತಪ್ಪಿದೆ. ಅಂತರ್ಜಾತಿ ಮದುವೆಯಾದ ತಪ್ಪಿಗೆ ಇವರ ಮನೆಯವರೇ ಇವರಿಗೆ ಕಿರುಕುಳ ನೀಡುತ್ತಿದ್ದಾರೆ. ಖುದ್ದು ಅನುರಾಗ್ ಈ ವಿಚಾರವನ್ನು ಕೆಲ ದಿನದ ಹಿಂದೆ ಹೇಳಿಕೊಂಡಿದ್ದಾರೆ. ಕಣ್ಣೀರನ್ನು ಹಾಕಿದ್ದಾರೆ.

ಇಷ್ಟೇ ಅಲ್ಲ ತೀವೃ ಖಿನ್ನತೆಯಿಂದ ಮಾರ್ಚ್ 7ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದ ಅನುರಾಗ್ ಆತ್ಮ*ಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. 150-160 ಕಿ.ಮೀ ವೇಗದಲ್ಲಿ ಗಾಡಿ ಚಲಾಯಿಸಿಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇವರ ಈ ಆಕ್ಸಿಡೆಂಟ್ ವಿಡಿಯೋವನ್ನು ಲೈವ್‌ನಲ್ಲಿ 80,000ಕ್ಕೂ ಹೆಚ್ಚು ಜನ ನೋಡಿ ಆಘಾತಕ್ಕೀಡಾಗಿದ್ದಾರೆ.

ಸದ್ಯ ಅನುರಾಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಚಿಂತಾಜಕನವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೌಟುಂಬಿಕ ಕಲಹದಿಂದ ಮನನೊಂದು ಅನುರಾಗ್ ಅವರನ್ನು ತೊರೆದು ತವರು ಮನೆ ಸೇರಿದ್ದ ಪತ್ನಿ ರಿತಿಕಾ ಆಸ್ಪತ್ರೆಗೆ ದೌಡಾಯಿಸಿದ್ಧಾರೆ. ಗಂಡನ ದೇಖಾರೇಖಿ ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ಅನುರಾಗ್ ಅವರ ತಂದೆ ತಮ್ಮ ಸ್ವಂತ ಮಗನ ಜೊತೆ ಸಂಬಂಧ ಕಡಿದುಕೊಂಡಿದ್ದಾರೆ. ಪತ್ರಿಕೆಯಲ್ಲಿ ಪ್ರಕಟಣೆಯನ್ನು ಕೂಡ ಹೊರಡಿಸಿದ್ದಾರೆ.

ಅನುರಾಗ್ ಅವರ ತಂದೆ ಜಗದಾಂಬ ಪ್ರಸಾದ್ ನೀಡಿದ್ದಾರೆ ಎನ್ನಲಾದ ಪತ್ರಿಕಾ ಪ್ರಕಟಣೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನನ್ನ ಮಗ ಅನುರಾಗ್ ಮತ್ತು ಸೊಸೆ ರಿತಿಕಾ ಅವರಿಗೆ ನಮ್ಮ ಕುಟುಂಬದ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿಯಲ್ಲಿ ಪಾಲಿಲ್ಲ ಎಂದು ಈ ಪ್ರಕಟಣೆಯಲ್ಲಿ ಜಗದಾಂಬ ಪ್ರಸಾದ್ ಹೇಳಿದ್ಧಾರೆ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆತ ಮಾಡುವ ಯಾವುದೇ ಕೆಲಸಕ್ಕೂ ನಾವು ಜವಾಬ್ಧಾರರಲ್ಲ ಎಂದು ಹೇಳಿದ್ಧಾರೆ. ಈ ಪತ್ರಿಕಾ ಪ್ರಕಟಣೆಯನ್ನು ಕಂಡು ಸದ್ಯ ಹಲವರು ದಿಗ್ಬ್ರಾಂತಗೊಂಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಕೂಡ ಮಾಡುತ್ತಿದ್ಧಾರೆ.

ಅಂದ್ಹಾಗೇ ಆತ್ಮ*ಹತ್ಯೆಗೆ ಮುಂದಾಗುವ ಮುನ್ನ ತಮ್ಮ ಮನದ ನೋವು ಹಂಚಿಕೊಂಡಿದ್ದ ಅನುರಾಗ್ ದೋಬಾಲ್,ನನ್ನ ಮದುವೆಗೆ ಮನೆಯವರ ವಿರೋಧ ಇತ್ತು ಎಂದು ಹೇಳಿದ್ದರು. ನಮ್ಮದು ಅಂತರ್ಜಾತಿ ಮದುವೆಯಾದ ಕಾರಣ ಮದುವೆಗೆ ಆರು ದಿನ ಬಾಕಿ ಇದ್ದಾಗ ನನ್ನ ಹೆತ್ತವರು ಮದುವೆಗೆ ಬರಲು ನಿರಾಕರಿಸಿದರು ಎಂದು ಹೇಳಿದ್ದ ಅನುರಾಗ್, ಕುಲದ ಗೌರವಕ್ಕೆ ಧಕ್ಕೆ ತಂದ ಹಿನ್ನೆಲೆ ಸಂಬಂಧಿಕರ ಮುಂದೆ ಕೈ ಮುಗಿದು ಕ್ಷಮೆ ಕೇಳುವಂತೆ ನನ್ನ ಪೋಷಕರು ಮಾಡಿದರು, ಮಾನಸಿಕವಾಗಿ ನನಗೆ ತೀವೃ ಕಿರುಕುಳ ನೀಡಿದರು, ಮನೆಗೆ ಕೂಡ ಸೇರಿಸಿಕೊಳ್ಳಲಿಲ್ಲ ಎಂದಿದ್ದರು.

ನಾವು ಖುಷಿಯಾಗಿರಲ್ಲ, ನಿನ್ನನ್ನೂ ಖುಷಿಯಿಂದ ಇರಲು ಬಿಡುವುದಿಲ್ಲ ಎಂದು ನನಗೆ ನಿರಂತರವಾಗಿ ನನ್ನ ಹೆತ್ತವರೇ ಮಾನಸಿಕ ಹಿಂಸೆ ನೀಡುತ್ತಾ ಬಂದರು ಎಂದು ಹೇಳಿದ್ದ ಅನುರಾಗ್ ನನ್ನ ಸಾವಿಗೆ ನನ್ನ ಅಮ್ಮ, ಅಪ್ಪ, ಕಲಾಂ (ಸಹೋದರ) ಮತ್ತು ಶ್ರೇಯಾ ಅವರೇ ಕಾರಣ ಎಂದು ಹೇಳಿದ್ದಾರೆ.

ಇನ್ನೂ ಹೋರಾಡುವ ಶಕ್ತಿ ನನ್ನಲ್ಲಿ ಉಳಿದಿಲ್ಲ ಎಂದು ಹೇಳಿ ಬಿಕ್ಕಿದ್ದ ಅನುರಾಗ್, ಈ ಮಾನಸಿಕ ಒತ್ತಡದಿಂದಾಗಿ ನಾನು ಈ ಹಿಂದೆ ಆತ್ಮ*ಹತ್ಯೆಗೂ ಕೂಡ ಪ್ರಯತ್ನ ಮಾಡಿದ್ದೇ ಎಂದು ಹೇಳಿದ್ದರು. ಸದ್ಯ ನಾನು ತೀವ್ರ ಖಿನ್ನತೆಯಲ್ಲಿದ್ದು, ಹಲವು ದಿನಗಳಿಂದ ಏನನ್ನೂ ತಿಂದಿಲ್ಲ ಮತ್ತು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ ಎಂದು ಅವರು ನೋವು ಹಂಚಿಕೊಂಡಿದ್ದರು. ಇದಾದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಸಾಯುವ ಪ್ರಯತ್ನವನ್ನು ಅನುರಾಗ್ ಮಾಡಿದ್ದಾರೆ. ಈಗ ಇವರ ತಂದೆ ತಮ್ಮ ಮಗನ ಜೊತೆಗಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ಧಾರೆ.

UK07 Rider's dad officially disowned him by announcing it in the city's newspaper
byu/Over_Substance5853 inyoutubeindia

More from Filmibeat

English summary
Anurag Dobhal, popularly known as UK07 Rider, faces a family crisis as his father issues a formal public notice severing all ties. Amidst the ongoing legal turmoil and suicide case rumors, find out what the legal declaration says about the YouTuber's inheritance and family status
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X