ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!

Recommended Video

ಅಕುಲ್ ಬಾಲಾಜಿ ವಿರುದ್ಧ ದೂರು ನೀಡಲು ಮುಂದಾದ ಆದಂ ಪಾಷಾ | FILMIBEAT KANNADA

ಅದ್ಯಾಕೋ ಏನೋ... ಈ ಬಾರಿಯ 'ಬಿಗ್ ಬಾಸ್ ಕನ್ನಡ' ಸ್ಪರ್ಧಿಗಳು ಒಂದಲ್ಲಾ ಒಂದು ವಿವಾದಕ್ಕೆ ಗ್ರಾಸವಾಗುತ್ತಲೇ ಇದ್ದಾರೆ. ಆಂಡ್ರ್ಯೂ ಮತ್ತು ಕವಿತಾ ಗೌಡ ನಡುವಿನ ಗಲಾಟೆ 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಮುಂದುವರೆದಿದೆ. ಇತ್ತ 'ಬಿಗ್ ಬಾಸ್' ಮುಗಿಸಿ 'ತಕಧಿಮಿತ' ವೇದಿಕೆ ಹತ್ತಿದ ಆದಮ್ ಪಾಶಾ ಇದೀಗ ಡ್ಯಾನ್ಸ್ ರಿಯಾಲಿಟಿ ಶೋ ವಿರುದ್ಧ ಗರಂ ಆಗಿದ್ದಾರೆ.

ನಿಮಗೆಲ್ಲ ಗೊತ್ತಿರುವ ಹಾಗೆ, ಆದಮ್ ಪಾಶಾ LGBTQIA ಸಮುದಾಯಕ್ಕೆ ಸೇರಿದವರು. ಇಂತಿಪ್ಪ ಆದಮ್ ಪಾಶಾ ಬಗ್ಗೆ 'ತಕಧಿಮಿತ' ವೇದಿಕೆ ಮೇಲೆ ನಿರೂಪಕ ಅಕುಲ್ ಬಾಲಾಜಿ ಜೋಕ್ ಮಾಡಿದ್ದರಂತೆ, ಅವಮಾನ ಆಗುವ ಹಾಗೆ ಮಾತನಾಡಿದ್ದರಂತೆ. ಹೀಗಾಗಿ, ಅಕುಲ್ ಬಾಲಾಜಿ ವಿರುದ್ಧ ದೂರು ಕೊಡಲು ಆದಮ್ ಪಾಶಾ ನಿರ್ಧರಿಸಿದ್ದಾರೆ.

ಇನ್ನೂ 'ತಕಧಿಮಿತ' ನಿರ್ದೇಶಕಿ ಶ್ರದ್ಧಾ ಕೂಡ ಆದಮ್ ಪಾಶಾಗೆ ಧಮ್ಕಿ ಹಾಕಿದ್ದರಂತೆ. ಇದನ್ನೆಲ್ಲ ನೋಡಿ ಬೇಸರಗೊಂಡ ಆದಮ್ ಪಾಶಾ 'ತಕಧಿಮಿತ' ಡ್ಯಾನ್ಸ್ ಶೋದಿಂದ ಹೊರಬರಲು ಮುಂದಾಗಿದ್ದಾರೆ.

ಸದ್ಯಕ್ಕೆ ಆದಮ್ ಪಾಶಾ ಬೇಸರಗೊಂಡಿರುವುದು ನಿಜ. ಆದ್ರೆ, ಇಲ್ಲಿಯವರೆಗೂ ಪ್ರಸಾರವಾದ 'ತಕಧಿಮಿತ' ಸಂಚಿಕೆಗಳಲ್ಲಿ ಆದಮ್ ಪಾಶಾ ಬಗ್ಗೆ ಕೆಟ್ಟದಾಗಿ, ಕೀಳಾಗಿ ಏನ್ನನ್ನೂ ತೋರಿಸಿಲ್ಲ ಎಂಬುದು ಅಷ್ಟೇ ಸತ್ಯ. ಮುಂದೆ ಓದಿರಿ....

ಆದಮ್ ಪಾಶಾ-ಪುನೀತ್ ನಾಯಕ್

ಆದಮ್ ಪಾಶಾ-ಪುನೀತ್ ನಾಯಕ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಶುರುವಾದ ಹೊಸ ಡ್ಯಾನ್ಸ್ ರಿಯಾಲಿಟಿ ಶೋ 'ತಕಧಿಮಿತ'. ಇದರಲ್ಲಿರುವ ಸ್ಪರ್ಧಿಗಳ ಪೈಕಿ ಆದಮ್ ಪಾಶಾ ಕೂಡ ಒಬ್ಬರು. ಆದಮ್ ಪಾಶಾಗೆ ಪುನೀತ್ ನಾಯಕ್ ಎಂಬುವರು ಡ್ಯಾನ್ಸ್ ಪಾರ್ಟ್ನರ್ ಆಗಿದ್ದರು.

ಆದಮ್ ಜೊತೆಗೆ ಫ್ಲರ್ಟ್ ಮಾಡಿದ್ದ ಅಕುಲ್

ಆದಮ್ ಜೊತೆಗೆ ಫ್ಲರ್ಟ್ ಮಾಡಿದ್ದ ಅಕುಲ್

'ತಕಧಿಮಿತ' ಪ್ರೀಮಿಯರ್ ನಲ್ಲಿ.. ಅಂದ್ರೆ ಮೊದಲ ಸಂಚಿಕೆಯಲ್ಲಿ ಆದಮ್ ಪಾಶಾ ಜೊತೆಗೆ ನಿರೂಪಕ ಅಕುಲ್ ಬಾಲಾಜಿ ಫ್ಲರ್ಟ್ ಮಾಡಿದ್ದರು. ಇದರ ಪರಿಣಾಮ ತೀರ್ಪುಗಾರ್ತಿ ಸುಮನ್ ರಂಗನಾಥ್ ಗೆ ಅಕುಲ್ ಬಾಲಾಜಿ ನೂರು ರೂಪಾಯಿ ಫೈನ್ ಕೂಡ ಕಟ್ಟಿದ್ದರು.

ಜೀವನದ ಘಟನೆಯನ್ನು ಡ್ಯಾನ್ಸ್ ಮೂಲಕ ತೋರಿಸಿದ್ದ ಆದಮ್

ಜೀವನದ ಘಟನೆಯನ್ನು ಡ್ಯಾನ್ಸ್ ಮೂಲಕ ತೋರಿಸಿದ್ದ ಆದಮ್

ಎರಡನೇ ವಾರದ ಸಂಚಿಕೆಯಲ್ಲಿ ತಾವು ಡ್ರ್ಯಾಗ್ ಕ್ವೀನ್ ಆದ ಬಗೆಯನ್ನ ನೃತ್ಯದ ಮೂಲಕ ವೇದಿಕೆ ಮೇಲೆ ಪ್ರಸ್ತುತ ಪಡಿಸಿದ್ದರು ಆದಮ್ ಪಾಶಾ. ಆದಮ್ ಮತ್ತು ಪುನೀತ್ ಪರ್ಫಾಮೆನ್ಸ್ ಬಗ್ಗೆ ಮಾತ್ರ ವೇದಿಕೆ ಮೇಲೆ ಚರ್ಚೆ ಆಗಿದ್ದು ಸಂಚಿಕೆಯಲ್ಲಿ ಪ್ರಸಾರ ಆಗಿದೆ.

ಕೀಳಾಗಿ ಏನ್ನನ್ನೂ ತೋರಿಸಿಲ್ಲ.!

ಕೀಳಾಗಿ ಏನ್ನನ್ನೂ ತೋರಿಸಿಲ್ಲ.!

ಇಲ್ಲಿಯವರೆಗೂ ಪ್ರಸಾರವಾದ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋ ಸಂಚಿಕೆಗಳಲ್ಲಿ ಆದಮ್ ಪಾಶಾ ಬಗ್ಗೆ ಕೀಳಾಗಿ ಏನ್ನನ್ನೂ ತೋರಿಸಿಲ್ಲ. ಅಕುಲ್ ಬಾಲಾಜಿ ಅವಮಾನ ಮಾಡಿದ್ದಾರೆ ಎನ್ನಲಾದ ಭಾಗವನ್ನು ಪ್ರಸಾರ ಮಾಡಿಲ್ಲ.

ಪ್ರಸಾರ ಮಾಡಲ್ಲ ಎಂದಿದ್ದ ವಾಹಿನಿಯವರು.!

ಪ್ರಸಾರ ಮಾಡಲ್ಲ ಎಂದಿದ್ದ ವಾಹಿನಿಯವರು.!

ಆದಮ್ ಪಾಶಾ ಬಗ್ಗೆ ಅಕುಲ್ ಬಾಲಾಜಿ ಮಾಡಿರುವ ಜೋಕ್ಸ್ ಮತ್ತು ಸ್ತ್ರೀಲಿಂಗ, ಪುಲ್ಲಿಂಗ ಕಾಮೆಂಟ್ಸ್ ನ ಸಂಚಿಕೆಯಲ್ಲಿ ಪ್ರಸಾರ ಮಾಡಲ್ಲ ಅಂತ ವಾಹಿನಿಯವರು ಆದಮ್ ಪಾಶಾಗೆ ಹೇಳಿದ್ದರಂತೆ.

ಆದಮ್ ಪಾಶಾ ಹೇಳುವುದೇನು.?

ಆದಮ್ ಪಾಶಾ ಹೇಳುವುದೇನು.?

''ನನ್ನನ್ನ ಅಕುಲ್ ಬಾಲಾಜಿ ವೇದಿಕೆ ಮೇಲೆ ಕರೆದು ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಮಾತನಾಡುತ್ತಾರೆ. ನನ್ನ ಜೆಂಡರ್ ಬಗ್ಗೆ ಯಾಕೆ ತಮಾಷೆ ಮಾಡಬೇಕು.? ಕೆಟ್ಟ ಜೋಕ್ಸ್ ಯಾಕೆ ಮಾಡಬೇಕು.? 'ನಾವು ಇದನ್ನೆಲ್ಲ ಕಾರ್ಯಕ್ರಮದಲ್ಲಿ ತೋರಿಸಲ್ಲ ಅಂತ ವಾಹಿನಿಯವರು ಹೇಳಿದ್ದರು. ಪ್ರಸಾರ ಮಾಡಲ್ಲ ಸರಿ.. ಆದರೆ ಸೆಟ್ ನಲ್ಲಿ ಎಷ್ಟೊಂದು ಜನ ಇರ್ತಾರೆ. ಅವರೆಲ್ಲರ ಮುಂದೆ ನನಗ್ಯಾಕೆ ಅವಮಾನ ಮಾಡಬೇಕು.? ಪ್ರಸಾರ ಮಾಡಲ್ಲ ಅಂದ್ಮೇಲೆ ಅಕುಲ್ ಅದನ್ನೆಲ್ಲ ನನ್ನ ಬಗ್ಗೆ ಯಾಕೆ ಮಾತನಾಡಬೇಕು.? ಸ್ಪರ್ಧಿಯಾದ ನನಗೆ ನೋವು ಆಗಲ್ವಾ.?'' ಎನ್ನುತ್ತಾರೆ ಆದಮ್ ಪಾಶಾ.

ದೂರು ಕೊಡಲು ಮುಂದಾದ ಆದಮ್ ಪಾಶಾ

ದೂರು ಕೊಡಲು ಮುಂದಾದ ಆದಮ್ ಪಾಶಾ

'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರ್ದೇಶಕಿ ಶ್ರದ್ಧಾ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡಲು ಆದಮ್ ಪಾಶಾ ಡಿಸೈಡ್ ಮಾಡಿದ್ದಾರೆ.

More from Filmibeat

English summary
No objectional comments are telecasted about Adam Pasha in 'Takadhimita' Dance reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X