15 ವರ್ಷದ ದಾಂಪತ್ಯ ಅಂತ್ಯ; 3 ಮಕ್ಕಳಾದ ಮೇಲೆ ಡಿವೋರ್ಸ್ ಘೋಷಿಸಿದ ಸ್ಟಾರ್ ಜೋಡಿ

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು. ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ.

ಗಂಡ-ಹೆಂಡ್ತಿಯ ಈ ಸಂಬಂಧ ಮದ್ವೆಯಾಗಿ ಒಂದೇ ವರ್ಷಕ್ಕೆ ಮುರಿದು ಬೀಳಬಹುದು, ಐದು ವರ್ಷಕ್ಕೂ ಮುರಿದು ಬೀಳಬಹುದು, ಹತ್ತು, ಇಪ್ಪತ್ತು, ಮೂವತ್ತು ವರ್ಷ ಆದ ಮೇಲೆ ಕೂಡ ಮುರಿದು ಬೀಳಬಹುದು. ಇದಕ್ಕೆ ಮಹಿ ವಿಜ್ ಮತ್ತು ಜೈ ಭಾನುಶಾಲಿ ಅವರ ದಾಂಪತ್ಯ ಬದುಕು ಮತ್ತೊಂದು ಉದಾಹರಣೆ.

No Villain In This Story Jay Bhanushali and Mahhi Vij Part Ways After 15 Years of Marriage

ಹೌದು, ಮಹಿ ವಿಜ್ ಮತ್ತು ಜೈ ಭಾನುಶಾಲಿ.. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರುಗಳು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.

ಇನ್ನು ಜೈ ಭಾನುಶಾಲಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ. ''ಡ್ಯಾನ್ಸ್ ಇಂಡಿಯಾ ಡ್ಯಾನ್ಸ್-ಸೂಪರ್ ಮಾಮ್ಸ್''.. ''ಡ್ಯಾನ್ಸ್ ಇಂಡಿಯಾ ಡ್ಯಾನ್ಸ್- ಲಿಟಲ್ ಮಾಸ್ಟರ್ಸ್‌''.. ''ಸರೆಗಮಪ-2012''.. ''ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಸೀಸನ್ 3''.. ಇವರ ನಿರೂಪಣೆಯ ಕೆಲ ಜನಪ್ರಿಯ ಕಾರ್ಯಕ್ರಮಗಳು.

''ಹಮ್ ರಹೇ ನಾ ರಹೇ ಹಮ್'' .. ''ಗೀತ್-ಹುಯಿ ಸಬ್‌ಸೇ ಪರಾಯಿ'' .. ಧಾರಾವಾಹಿಯಲ್ಲಿ ಕೂಡ ಅಭಿನಯಿಸಿರುವ ಜೈ ಭಾನುಶಾಲಿ ''ಹೇಟ್ ಸ್ಟೋರಿ 2'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ಇಂಥಾ ಮಹಿ ವಿಜ್ ಮತ್ತು ಜೈ ಭಾನುಶಾಲಿ ಇಬ್ಬರು ಪರಸ್ಪರ ಪ್ರೀತಿಸಿ 2010-11ರಲ್ಲಿ ಮದುವೆಯಾಗಿದ್ದರು. ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ ವರ್ಷದವರೆಗೆ ಖುಷಿ ಖುಷಿಯಾಗಿಯೇ ಕಾಲ ಕಳೆದ ಇಬ್ಬರು ತಮ್ಮ ಮನೆ ಕೆಲಸದವರ ಇಬ್ಬರು ಮಕ್ಕಳನ್ನು 2017ರಲ್ಲಿ ದತ್ತು ಪಡೆದಿದ್ದರು. ಆ ಮಕ್ಕಳಿಗೆ ರಾಜ್ ವೀರ್ ಮತ್ತು ಖುಷಿ ಎಂದು ನಾಮಕರಣ ಮಾಡಿದರು. ತಮ್ಮ ಮಕ್ಕಳಷ್ಟೇ ಪ್ರೀತಿಯನ್ನು ನೀಡಿದರು.

No Villain In This Story Jay Bhanushali and Mahhi Vij Part Ways After 15 Years of Marriage

ಇನ್ನೂ ತಮ್ಮ ಪ್ರೀತಿಯ ಸಂಕೇತವಾಗಿ ಮಗು ಮಾಡಿಕೊಳ್ಳಲು ಇಬ್ಬರು ಪ್ರಯತ್ನ ಮಾಡಿದರು ಕೂಡ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಇಬ್ಬರು ಎರಡು ಬಾರಿ ಐವಿಎಫ್ ತಂತ್ರಜ್ಞಾನದ ಮೊರೆ ಹೋಗಿದ್ದರು. ಆದರೆ ಎರಡು ಬಾರಿ ಕೂಡ ಮಹಿ ಅವರಿಗೆ ಗರ್ಭಪಾತವಾಯ್ತು. ಆ ನಂತರ ಮತ್ತೊಮ್ಮೆ ಐವಿಎಫ್ ಮೂಲಕ ಪ್ರಯತ್ನ ಮಾಡಿದ ಇಬ್ಬರು 2019ರಲ್ಲಿ ಮನೆಗೆ ಮಗಳನ್ನು ಬರ ಮಾಡಿಕೊಂಡರು. ಮುದ್ದಾದ ಮಗಳಿಗೆ ತಾರಾ ಎಂದು ಹೆಸರಿಟ್ಟರು.

ಹೀಗೆ ಬದುಕಿನ ಏರಿಳಿತವನ್ನು ಕಳೆದ 14-15 ವರ್ಷಗಳಿಂದ ನೋಡಿರುವ, ಕಷ್ಟಕಾಲದಲ್ಲಿ ಒಬ್ಬರಿಗೆ ಒಬ್ಬರು ಹೆಗಲಾಗುತ್ತಾ ಬಂದ ಈ ಇಬ್ಬರು ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಇನ್ಮುಂದೆ ನಾವು ಇಬ್ಬರು ದೂರ ಎಂಬ ಸಂದೇಶವನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ರವಾನೆ ಮಾಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಇಬ್ಬರು ಇಂದು ನಾವು ಜೀವನದ ಪಯಣದಲ್ಲಿ ಬೇರೆ ಬೇರೆ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಮಕ್ಕಳಿಗಾಗಿ ನಾವು ಉತ್ತಮ ಪೋಷಕರಾಗಿರುತ್ತೇವೆ ಎಂದು ತಮ್ಮ ಹಿತೈಶಿಗಳಿಗೆ ಮತ್ತು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಇನ್ನೂ ಸಾಮಾನ್ಯವಾಗಿ ಒಂದು ಸಂಸಾರ ಮುರಿದು ಬಿದ್ದಾಗ, ಅಲ್ಲಿ ಮೂರನೇಯವರ ಕೈವಾಡ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತೆ. ಯಾರದ್ದು ಸರಿ ಯಾರದ್ದು ತಪ್ಪು ಎನ್ನುವ ಚರ್ಚೆ ಕೂಡ ಅಭಿಮಾನಿಗಳ ನಡುವೆ ನಡೆಯುತ್ತೆ. ಈ ವಿಚಾರದ ಕುರಿತು ಕೂಡ ಸ್ಪಷ್ಟನೆಯನ್ನು ನೀಡಿರುವ ಇಬ್ಬರು ಇನ್ಮುಂದೆ ನಾವು ಸತಿ ಪತಿಗಳಾಗಿ ಅಲ್ಲ ಬದಲಿಗೆ ಉತ್ತಮ ಸ್ನೇಹಿತರಾಗಿರುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಮಕ್ಕಳ ಉತ್ತಮ ಜೀವನಕ್ಕೆ ಬೇಕಾದದ್ದನ್ನೆಲ್ಲವನ್ನೂ ನಾವು ಇಬ್ಬರು ಜೊತೆಯಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಈ ಕಥೆಯಲ್ಲಿ ಯಾವುದೇ ವಿಲನ್ ಇಲ್ಲ, ನಕಾರಾತ್ಮಕತೆಯೂ ಇಲ್ಲ, ಹೀಗಾಗಿ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ನಮಗೆ ನಮಗೆ ನಾಟಕ ಬೇಡ, ಶಾಂತಿ ಬೇಕು ಎನ್ನುವುದನ್ನು ಗಮನದಲ್ಲಿಡಿ ಎಂದು ತಮ್ಮ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಅಂದ್ಹಾಗೇ ತೀರಾ ಇತ್ತೀಚೆಗಷ್ಟೇ ''ಹೌಟರ್‌ಫ್ಲೈ''ಗೆ ಮಹಿ ವಿಜ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ವಿಚ್ಛೇದನದ ಕುರಿತು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಕೆರಳಿ ಕೆಂಡವಾಗಿದ್ದ ಮಹಿ ನಮ್ಮ ಡಿವೋರ್ಸ್ ಆಗಿದ್ದರೂ ಕೂಡ ನಾನು ಆ ವಿಷಯವನ್ನು ನಿಮಗ್ಯಾಕೆ ಹೇಳಬೇಕು..? ಎಂದು ಪ್ರಶ್ನೆ ಮಾಡಿದ್ದರು. ನೀವೇನು ನನ್ನ ಮಾವನಾ..? ನನ್ನ ವಕೀಲರಿಗೆ ನಾನು ಕೊಡಬೇಕಾದ ದುಡ್ಡು ನೀವೇನಾದರೂ ಕೊಡ್ತೀರಾ ? ಎಂದು ಕೆಂಡ ಕಾರಿದ್ದರು.ನಿಮಗೆ ಸತ್ಯಾಂಶವೇನು ಅಂತಾ ಗೊತ್ತಾ..? ನಿಮಗೆ ಏನು ಗೊತ್ತು? ಎಂದು ಪ್ರಶ್ನೆ ಮಾಡಿದ್ದರು.ಆದರೆ ಈಗ ನೋಡಿದರೆ ಹೊಸ ವರ್ಷದ ಆರಂಭದಲ್ಲಿ ಇವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.

No Villain In This Story Jay Bhanushali and Mahhi Vij Part Ways After 15 Years of Marriage

More from Filmibeat

English summary
After 15 years of marriage, TV’s favorite couple Jay Bhanushali and Mahhi Vij are parting ways. Discover why they are choosing "Peace over Drama" and how they plan to co-parent their three children.
Read more about: divorce marriage ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X