Don't Miss!
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- News Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಆಗಮಿಸಲಿರುವ ಸ್ಟಾರ್ ಗಳ ಪಟ್ಟಿ
Recommended Video
ಸ್ಟಾರ್ ಸುವರ್ಣ ವಾಹಿನಿ ಮತ್ತು ವಿಯು (viu) ಅಪ್ ನಲ್ಲಿ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ'ದ ಮೊದಲ ಸಂಚಿಕೆ ಮುಗಿದಿದೆ. ಉಪೇಂದ್ರ ಮತ್ತು ಗುರುಕಿರಣ್ ಮೊದಲ ಸಂಚಿಕೆಗೆ ಬಂದಿದ್ದು, ಮೊದಲ ಎಪಿಸೋಡ್ ಸಿಕ್ಕಾಪಟ್ಟೆ ಮಜಾವಾಗಿತ್ತು. ಅದರ ಜೊತೆಗೆ ಈ ಕಾರ್ಯಕ್ರಮದ ಮುಂದಿನ ಸಂಚಿಕೆಗೆ ಯಾವ ಯಾವ ಸ್ಟಾರ್ ಗಳು ಬರುತ್ತಾರೆ ಎನ್ನುವ ಕುತೂಹಲ ಕೂಡ ಇದೆ.
ಅಂದಹಾಗೆ, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮುಖ್ಯವಾಗಿ ಸ್ನೇಹಿತರ ಬಗ್ಗೆ ಇರುವ ಕಾರ್ಯಕ್ರಮ ಪ್ರತಿ ವಾರ ಕೂಡ ಇಬ್ಬರು ಸ್ನೇಹಿತರು ಕಾರ್ಯಕ್ರಮಕ್ಕೆ ಬರುತ್ತಾರೆ.ಈಗಾಗಲೇ ಕಾರ್ಯಕ್ರಮದ ನಾಲ್ಕು ಸಂಚಿಕೆಯ ಚಿತ್ರೀಕರಣವಾಗಿದೆ. ಆ ನಾಲ್ಕು ಸಂಚಿಕೆಗೆ ಬರುವ ಅತಿಥಿಗಳ ಪಟ್ಟಿ ಮುಂದಿದೆ ಓದಿ..
ಮೊದಲ ಸಂಚಿಕೆ
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಕಳೆದ ಭಾನುವಾರದಿಂದ ಶುರುವಾಗಿದೆ. ಉಪೇಂದ್ರ ಮತ್ತು ಗುರುಕಿರಣ್ ಈ ಕಾರ್ಯಕ್ರಮ ಮೊದಲ ಸಂಚಿಕೆಯಲ್ಲಿ ಭಾಗಿಯಾಗಿದ್ದರು. ವಿಶೇಷ ಅಂದರೆ ಶಿವಣ್ಣ ಒತ್ತಾಯ ಮಾಡಿ ಉಪೇಂದ್ರ ಅವರೇ ಮೊದಲ ಸಂಚಿಕೆಗೆ ಬೇಕು ಅಂತ ಹೇಳಿ ಕರೆಸಿಕೊಂಡಿದ್ದರಂತೆ.
ಎರಡನೇ ಸಂಚಿಕೆ
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಎರಡನೇ ಸಂಚಿಕೆಗೆ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಆಗಮಿಸಿದ್ದಾರೆ.
ಮೂರನೇ ಸಂಚಿಕೆ
ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ 'ಮಫ್ತಿ' ಚಿತ್ರದ ಜೋಡಿ ನಟ ಶ್ರೀ ಮುರಳಿ ಮತ್ತು ನಿರ್ದೇಶಕ ನರ್ತನ್ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಮೂರನೇ ಸಂಚಿಕೆಯಲ್ಲಿ ಇರುತ್ತಾರೆ.
ನಾಲ್ಕನೇ ಸಂಚಿಕೆ
ಅಪ್ಪಟ್ಟ ಗೆಳತಿರಾದ ನಟಿ ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ನಾಲ್ಕನೇ ಸಂಚಿಕೆಯಲ್ಲಿ ಭಾಗಿಯಾಗಲಿದ್ದಾರೆ.
ಸ್ನೇಹಿತರ ಕಾರ್ಯಕ್ರಮ
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮುಖ್ಯವಾಗಿ ಸ್ನೇಹಿತರ ಬಗ್ಗೆ ಇರುವ ಕಾರ್ಯಕ್ರಮ ಪ್ರತಿ ವಾರ ಕೂಡ ಇಬ್ಬರು ಸ್ನೇಹಿತರು ಕಾರ್ಯಕ್ರಮಕ್ಕೆ ಬರುತ್ತಾರೆ. ಇದೊಂದು ಟಾಕ್ ಶೋ ಆಗಿದ್ದು, ಸಿಕ್ಕಾಪಟ್ಟೆ, ತರ್ಲೆ ತಮಾಷೆ ತುಂಬಿದೆ. ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಪ್ರಕಾರ ಆಗಲಿದೆ. ಅಂದಹಾಗೆ, ಈ ಕಾರ್ಯಕ್ರಮದಲ್ಲಿ ನೀವು ನೋಡಬಯಸುವ ಸ್ಟಾರ್ ಹೆಸರನ್ನು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ಬರೆದು ನಿಮ್ಮ ಅಭಿಪ್ರಾಯವನ್ನು ತಿಳಿಸಿ.