ಹತ್ತು ಲಕ್ಷ ರೂಗಳ ಸೂಟ್ ಕೇಸ್ ಯಾರು ಮುಟ್ಟಲಿಲ್ಲ
ಬೆಳಗ್ಗೆ ಇಟ್ಟ ಹತ್ತು ಲಕ್ಷ ರುಪಾಯಿಗಳ ಸೂಟ್ ಕೇಸ್ ಮಾತ್ರ ಇಪ್ಪತ್ತನಾಲ್ಕು ಗಂಟೆಗಳ ಕಾಲ ಅಲ್ಲೇ ಇತ್ತು. ಇದನ್ನು ಮುಟ್ಟಲು ಯಾರೊಬ್ಬರೂ ಸಿದ್ಧರಿರಲಿಲ್ಲ. ತೊಂಬತ್ತೊಂದು ಹಾಗೂ ತೊಂಬತ್ತೆರಡನೇ ದಿನದ ಹೈಲೈಟ್ಸ್ ಗಳಲ್ಲಿ ಸೂಟ್ ಕೇಸ್ ಪ್ರಮುಖ ಪಾತ್ರವಹಿಸಿತು.
ಹತ್ತು ಪಟ್ಟು ಶಕ್ತಿ ಹತ್ತು ಪಟ್ಟಿ ಆರಾಮ ಟಾಸ್ಕ್ ನಲ್ಲಿ ಗೆದ್ದ ಬಳಿಕ ಕೊಟ್ಟ ಔತಣವನ್ನು ವಿಜಯ್ ಹಾಗೂ ಶರ್ಮಾ ಇಬ್ಬರೂ ಕನ್ಫೆಷನ್ ರೂಮಿನಲ್ಲಿ ಸವಿದರು. ವಿಜಯ್ ಅವರಂತೂ ಎಲ್ಲರ ಬಳಿ ಹಂಚಿಕೊಳ್ಳಲು ಬಯಸಿದರು. ಆದರೆ ಬಿಗ್ ಬಾಸ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಬ್ರಹ್ಮಾಂಡ ಗುರುಗಳಂತೂ ಸಂತೋಷ ಆಹಾ ಓಹೋ ರಸಮಯ ಸಂಗೀತ ಎಂದು ಹಾಡುತ್ತಾ ಒಂದಷ್ಟು ಬಿಸ್ಕೆಟ್, ಬೇಕರಿ ತಿಂಡಿಗಳನ್ನು ಸವಿದು ಕೋಕಾ ಕೋಲಾ ಕುಡಿದರು. ನೋಡಪ್ಪಾ ಬಿಗ್ ಬಾಸ್ ಒಳ್ಳೆಯ ಔತಣ ಕೊಟ್ಟಿದ್ದೀಯಾ ಸಂತೋಷ ಎಂದು ಹೇಳಿ ಅಲ್ಲಿಂದ ಹೊರಬಂದರು.
ಎಲ್ಲರೂ ಮನೆಯಲ್ಲಿ ಇಟ್ಟಿರುವ ಸೂಟ್ ಕೇಸ್ ಬಗ್ಗೆಯೇ ಯೋಚಿಸುತ್ತಿದ್ದರು. ಒಂದು ವೇಳೆ 25 ಲಕ್ಷ ರೂಪಾಯಿ ಇಟ್ಟಿದ್ದರೆ ಆಗ ಯೋಚಿಸಬಹುದಾಗಿತ್ತು. ಈ ಹತ್ತು ಲಕ್ಷ ಯಾವೋನಿಗೆ ಬೇಕು ಎಂಬಂತೆ ಎಲ್ಲರೂ ಮಾತನಾಡಿಕೊಂಡರು. ಅಯ್ಯೋ ಈ ಹತ್ತು ಲಕ್ಷಕ್ಕೆ ಟಿಡಿಎಸ್ ಕಟ್ ಆಗಲ್ಲ ಎಂದು ನಗಿಸಿದ್ದು ಮಾತ್ರ ಅರುಣ್ ಸಾಗರ್.
ಇದೇ ಸಂದರ್ಭದಲ್ಲಿ ನಿಕಿತಾ ಬಗ್ಗೆ ಅರುಣ್ ಸಾಗರ್ ಹಾಗೂ ನರೇಂದ್ರ ಬಾಬು ಶರ್ಮಾ ಗುಸುಗುಸು ಮಾತು ಶುರು ಮಾಡಿದರು. ಈ ಆಟದಲ್ಲಿ ಗೆಲ್ಲುವುದಕ್ಕಿಂತ ನನ್ನನ್ನು ನಾನು ಗೆಲ್ಲುವುದು ಮುಖ್ಯ ಎಂದ ಅರುಣ್. ಚಂದ್ರಿಕಾ ಅವರನ್ನು ಜೆಮ್ ಆಫ್ ಲೇಡಿ ಎಂದು ಬಣ್ಣಿಸಿದರು ಶರ್ಮಾ.


Click it and Unblock the Notifications











